Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಹಾರ್ದಿಕ್ ಮತ್ತೊಂದು ಸೆಕ್ಸ್ ಸಿ.ಡಿ. ಬಿಡುಗಡೆ

Wednesday, 15.11.2017, 3:00 AM       No Comments

ಅಹಮದಾಬಾದ್: ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್​ರದು ಎನ್ನಲಾದ ಮತ್ತೊಂದು ವಿಡಿಯೋ ತುಣುಕು ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಯಾಗಿದ್ದು, ಹಾರ್ದಿಕ್ ಮತ್ತು ಅವರ ಸಹವರ್ತಿಗಳು ಮಹಿಳೆಯರ ಜತೆ ಇರುವ ದೃಶ್ಯಗಳಿವೆ.

ಇದನ್ನು ಬಿಡುಗಡೆ ಮಾಡಿದ ಹಾರ್ದಿಕ್ ಮಾಜಿ ಸಹವರ್ತಿ ಅಶ್ವಿನ್ ಪಟೇಲ್, ಇದರಲ್ಲಿ ನನ್ನದಾಗಲಿ ಅಥವಾ ಬಿಜೆಪಿಯದ್ದಾಗಲಿ ಕೈವಾಡವಿಲ್ಲ. 182 ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಷಯದಲ್ಲಿ ಹಾರ್ದಿಕ್ ಮೂಗುತೂರಿಸಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್​ನ ನಾಯಕರೇ ಸಿ.ಡಿ. ಬಿಡುಗಡೆ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಿ.ಡಿ. ನಕಲಿ ಎನ್ನುವುದಾದರೆ, ಅದನ್ನು ಸಾಬೀತುಪಡಿಸಲು ಹಾರ್ದಿಕ್ ಅವರಿಗೆ 4 ದಿನಗಳ ಕಾಲಾವಕಾಶ ನೀಡುವುದಾಗಿ ಸವಾಲು ಹಾಕಿದ್ದಾರೆ.

ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್​ಗೆ ಭೇಟಿ ನೀಡುವವರಿದ್ದರು. ಇದಕ್ಕೂ ಮುನ್ನ ತಲೆ ಬೋಳಿಸಿಕೊಂಡು ತಮ್ಮ ಬೆಂಬಲಿಗರೊಂದಿಗೆ ಹಾರ್ದಿಕ್ ಪಟೇಲ್ 155 ಕಿ.ಮೀ. ಅಂತರದ ಪಾದಯಾತ್ರೆ ನಡೆಸಿ, ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದರು. ಗುಜರಾತ್​ನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಇದ್ದರೂ, ಅವರು ತಮ್ಮ ಬೆಂಬಲಿಗರೊಂದಿಗೆ ಮದ್ಯ ಸೇವಿಸುತ್ತ ಮಹಿಳೆಯ ಜತೆ ಇರುವ ದೃಶ್ಯಗಳು ಹೊಸ ಸಿಡಿಯಲ್ಲಿವೆ. -ಏಜೆನ್ಸೀಸ್

ನಕಲಿ ಎಂದ ಪಟೇಲ್

ಎರಡನೇ ಸಿ.ಡಿ. ಕುರಿತು ಪ್ರತಿಕ್ರಿಯಿಸಿರುವ ಹಾರ್ದಿಕ್ ಪಟೇಲ್ ಇದು ನಕಲಿ ಸಿ.ಡಿ. ಯಾರೇನೇ ಮಾಡಲಿ, ಎಷ್ಟೇ ಅಪಮಾನಿಸಲು ಯತ್ನಿಸಲಿ, ಪಟೇಲ್ ಮೀಸಲಾತಿ ಹೋರಾಟ ನಿಲ್ಲುವುದಿಲ್ಲ. ಏನೇ ಮಾಡಿದರೂ ಎದೆಯುಬ್ಬಿಸಿ ಕೊಂಡೇ ಮಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top