Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

13ಕ್ಕೆ ಏಕದಿನ ತಂಡ ಪ್ರಕಟ

Friday, 11.08.2017, 3:00 AM       No Comments

ನವದೆಹಲಿ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಕ್ಲೀನ್​ಸ್ವೀಪ್​ಗೆ ಭಾರತ ತಂಡ ಸಜ್ಜಾಗಿರುವ ನಡುವೆ ಪ್ರವಾಸದ ಏಕದಿನ ಮತ್ತು ಟಿ20 ಸರಣಿಗೆ ಭಾನುವಾರ ತಂಡ ಪ್ರಕಟಗೊಳ್ಳಲಿದೆ. ಮುಂಬರುವ ತವರಿನ ಪ್ರಮುಖ ಸರಣಿಗಳ ಹಿನ್ನೆಲೆಯಲ್ಲಿ ನಾಯಕ ವಿರಾಟ್ ಕೊಹ್ಲಿ, ಪ್ರಮುಖ ಸ್ಪಿನ್ನರ್​ಗಳಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾಗೆ ಲಂಕಾ ವಿರುದ್ಧದ ಸೀಮಿತ ಓವರ್ ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ಆತಿಥೇಯ ಲಂಕಾ ವಿರುದ್ಧದ 5 ಏಕದಿನ ಪಂದ್ಯಗಳ ಸರಣಿ ಆಗಸ್ಟ್ 20ರಂದು ಆರಂಭಗೊಳ್ಳಲಿದ್ದು, ಆ. 24, 27, 31 ಮತ್ತು ಸೆಪ್ಟೆಂಬರ್ 3ರಂದು ನಂತರದ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 6ರಂದು ಏಕೈಕ ಟಿ20 ಪಂದ್ಯ ನಡೆಯಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಭಾರತ ತಂಡದ ಆಟಗಾರರೇ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದ್ದು, ಟೆಸ್ಟ್ ಸರಣಿಯಲ್ಲಿ ಮಿಂಚುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಏಕದಿನ ತಂಡಕ್ಕೆ ಮರಳುವ ನಿರೀಕ್ಷೆ ದಟ್ಟವಾಗಿದೆ. ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಸದ್ಯ ಕ್ಯಾಂಡಿಯಲ್ಲಿ ಭಾರತ ಟೆಸ್ಟ್ ತಂಡದ ಜತೆಗಿದ್ದರೆ, ಮತ್ತೋರ್ವ ಆಯ್ಕೆಗಾರ ದೇವಾಂಗ್ ಗಾಂಧಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಎ ತಂಡದ ಜತೆಗಿದ್ದಾರೆ. ಇನ್ನೋರ್ವ ಸದಸ್ಯ ಶರಣ್​ದೀಪ್ ಸಿಂಗ್ ತವರಿನಲ್ಲೇ ಇದ್ದು, ಈ ಮೂವರು ಕಾನ್ಪರೆನ್ಸ್ ಕಾಲ್ ಮೂಲಕ ತಂಡ ಆಯ್ಕೆಗೆ ಸಭೆ ನಡೆಸಲಿದ್ದಾರೆ.

ಸುರೇಶ್ ರೈನಾ ಪುನರಾಗಮನ?: ಕೊಹ್ಲಿ ಲಂಕಾ ಸರಣಿಯಿಂದ ವಿಶ್ರಾಂತಿ ಪಡೆದರೆ, ತಂಡಕ್ಕೆ ಅನುಭವಿ ಬ್ಯಾಟ್ಸ್​ಮನ್​ಗಳ ಬಲ ತುಂಬಲು, ಎಡಗೈ ಬ್ಯಾಟ್ಸ್​ಮನ್ ಸುರೇಶ್ ರೈನಾ ಪುನರಾಗಮನವನ್ನೂ ನಿರೀಕ್ಷಿಸಲಾಗಿದೆ. 2015ರಲ್ಲಿ ಕೊನೆಯದಾಗಿ ಭಾರತ ಪರ ಏಕದಿನ ಪಂದ್ಯ ಆಡಿರುವ ರೈನಾ, ಇತ್ತೀಚೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಿ (ಎನ್​ಸಿಎ) ಫಿಟ್ನೆಸ್ ಪರೀಕ್ಷೆಗೂ ಒಳಗಾಗಿದ್ದಾರೆ ಎನ್ನಲಾಗಿದೆ. –ಪಿಟಿಐ/ಏಜೆನ್ಸೀಸ್

Leave a Reply

Your email address will not be published. Required fields are marked *

Back To Top