Monday, 23rd October 2017  

Vijayavani

1. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 2. ಟಿಪ್ಪು ಜಯಂತಿ ವಿರುದ್ಧ ಹೋರಾಟ ತೀವ್ರ – ಮಂಡ್ಯದಲ್ಲಿ ಆಚರಣೆ ವಿರೋಧಿಗಳಿಂದ ರಕ್ತದಲ್ಲಿ ಪತ್ರ – ಬೆಂಗಳೂರಲ್ಲಿ ಸಿಎಂಗೆ ಮಾಸ್‌ ಕಿಲ್ಲರ್‌ ಪಟ್ಟ 3. ಸಾಲದ ಬೆಂಕಿಯಲ್ಲಿ ಬೆಂದ ರೈತ ಕುಟುಂಬ – ಡಿಸಿ ಕಚೇರಿ ಎದುರೇ ಐವರು ಅಗ್ನಿಗಾಹುತಿ – ಮೈಸೂರಿನಲ್ಲೂ ಬ್ಯಾಂಕ್‌ ಕಾಟಕ್ಕೆ ರೈತ ಆತ್ಮಹತ್ಯೆ ಯತ್ನ 4. ರಸ್ತೆಯಲ್ಲೇ ಕುಡುಕನ ನೀಚ ಕೃತ್ಯ – ಹಾಡಹಗಲೇ ಬುದ್ಧಿಮಾಂಧ್ಯೆ ಮೇಲೆ ಅತ್ಯಾಚಾರ – ರಸ್ತೆಬದಿ ನೋಡುತ್ತಾ ನಿಂತ ಜನಸಮೂಹ 5. ಗೋದಾಮಿನಲ್ಲಿ ಕೊಳೆಯುತ್ತಿದ್ದ ಗೋಧಿಗೆ ಮುಕ್ತಿ – ದಿಗ್ವಿಜಯ ನ್ಯೂಸ್‌ ವರದಿಗೆ ಎಚ್ಚೆತ್ತ ಅಧಿಕಾರಿಗಳು – ಶಿರಸಿ ಸಹಕಾರ ಗೋಡೌನ್‌ಗೆ ದೌಡು
Breaking News :

ಫಿಲಿಪ್ಪೀನ್ಸ್​ ಬಳಿ ಮುಳುಗಿದ ವಾಣಿಜ್ಯ ಹಡಗು: 11 ಭಾರತೀಯ ಸಿಬ್ಬಂದಿ ಕಣ್ಮರೆ

Friday, 13.10.2017, 3:43 PM       No Comments

ಟೋಕಿಯೋ: ಫಿಲಿಪ್ಪೀನ್ಸ್​ ಬಳಿ ಫೆಸಿಫಿಕ್​ ಮಹಾಸಾಗರದಲ್ಲಿ ವಾಣಿಜ್ಯ ಹಡಗೊಂದು ಮುಳುಗಿದ್ದು, ನೌಕೆಯಲ್ಲಿದ್ದ 11 ಭಾರತೀಯ ಸಿಬ್ಬಂದಿ ಕಣ್ಮರೆಯಾಗಿದ್ದಾರೆ ಎಂದು ಜಪಾನ್​ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.

ಎಮ್ರಾಲ್ಡ್​ ಸ್ಟಾರ್​ ಎಂಬ ವಾಣಿಜ್ಯ ಹಡಗು ಶುಕ್ರವಾರ ಬೆಳಗ್ಗೆ ಮುಳುಗಿದೆ. ಹಡಗಿನಲ್ಲಿ ಒಟ್ಟು 26 ಭಾರತೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಹಡಗು ಮುಳುಗುವಾಗ ಸಿಬ್ಬಂದಿ ಅಪಾಯದ ಸಂದೇಶವನ್ನು ಕಳುಹಿಸಿದ್ದರು. ಇದನ್ನು ಆಧರಿಸಿದ ಸಮೀಪದಲ್ಲಿದ್ದ ಹಡಗುಗಳು ಒಟ್ಟು 15 ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಆದರೆ 11 ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಜಪಾನ್​ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.

ಹಡಗು ಮುಳುಗಿದಾಗ ಫಿಲಿಪ್ಪೀನ್ಸ್​ನ ಉತ್ತರ ತುದಿಯ ಪೂರ್ವಕ್ಕೆ 280 ಕಿ.ಮೀ. ದೂರದಲ್ಲಿ ಸಂಚರಿಸುತ್ತಿತ್ತು. ಆ ಪ್ರದೇಶದಲ್ಲಿ ಚಂಡಮಾರುತ ಬೀಸುತ್ತಿದೆ. ಜಪಾನ್​ ಕರಾವಳಿ ರಕ್ಷಣಾ ಪಡೆ 2 ದೋಣಿ ಮತ್ತು 3 ವಿಮಾನಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ. ಆದರೆ ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top