Tuesday, 24th October 2017  

Vijayavani

1. ಕೊಳೆಯುತ್ತಿದೆ ಹಸಿವು ಮುಕ್ತ ರಾಜ್ಯದ ಕನಸು – ಹುಳು ಹಿಡಿದು ಪಡಿತರ ಹಾಳು – ರಾಜ್ಯದಲ್ಲಿ ಅನ್ನಭಾಗ್ಯದ ಬದಲು ಹುಳು ಭಾಗ್ಯ 2. 100 ಸಿಸಿ ಬೈಕ್‌ನಲ್ಲಿ ಡಬಲ್ ರೈಡಿಂಗ್ ನಿಷೇಧ ವಿಚಾರ – ವಿಷಯ ಗಮನಕ್ಕೆ ಬಂದಿಲ್ಲ ಎಂದ ಸಚಿವರು – ಅಧಿಕಾರಿಗಳಿಗೆ ಸೂಚಿಸುವುದಾಗಿ ರೇವಣ್ಣ ಸ್ಪಷ್ಟನೆ 3. ಹಂದಿ ತಿಂದು ಮಸೀದಿಗೆ ಹೋಗ್ಲಿ – ಸಿಎಂಗೆ ಸವಾಲೆಸೆದ ಸೊಗಡು ಶಿವಣ್ಣ – ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಮತ್ತಷ್ಟು ಸಿಡಿಮಿಡಿ 4. ಮತ್ತೆ ಭುಗಿಲೆದ್ದ ತಾಜ್‌ ಮಹಲ್‌ ಕಟ್ಟಡ ವಿವಾದ – ಯಾವಾಗ ಕೆಡವ್ತೀರ ಅಂತಾ ಪ್ರಕಾಶ್‌ ರಾಜ್ ವ್ಯಂಗ್ಯ – ಅತ್ತ ಸ್ಮಾರಕದ ಎದುರು ಶಿವಪೂಜೆ 5. ವಜ್ರ ಮಹೋತ್ಸವಕ್ಕೆ ಸಜ್ಜಾಗ್ತಿದೆ ವಿಧಾನಸೌಧ – ಶಕ್ತಿಕೇಂದ್ರಕ್ಕೆ ಬಣ್ಣಬಣ್ಣದ ಹೂಗಳ ಅಲಂಕಾರ – ಸಭಾಪತಿ, ಸಭಾಧ್ಯಕ್ಷರಿಂದ ಸಿದ್ಧತೆಗಳ ಪರಿಶೀಲನೆ
Breaking News :

ಮಂಗಳೂರಿನ ಬಿಆರ್ ಶೆಟ್ಟರಿಂದ ಮತ್ತೊಂದು ಮಹಾ ಸಾಹಸ

Monday, 17.04.2017, 7:07 PM       No Comments

ನಾಳೆ ‘ದಿಗ್ವಿಜಯ ನ್ಯೂಸ್​‘ ಚಾನೆಲಿನಲ್ಲಿ 

ರಘುರಾಮ ಶೆಟ್ಟರ ‘ಮಹಾಭಾರತ‘ ಕುರಿತು ವಿಶೇಷ ಕಾರ್ಯಕ್ರಮ

ಮಂಗಳೂರು: ಕರಾವಳಿಯ ಹೆಮ್ಮೆ ಬಿಆರ್ ಶೆಟ್ಟರು ಮತ್ತೊಂದು ಮಹಾ ಸಾಹಸಕ್ಕೆ ಕೈಹಾಕಿದ್ದಾರೆ. ಮಹಾಭಾರತ ಕುರಿತಾದ ಸಾಹಸಗಳು, ವ್ಯಾಸ ಮಹರ್ಷಿ ಅದನ್ನು ರಚಿಸಿದ ಕಾಲದಿಂದಲೂ ಅನೂಚವಾಗಿ ನಡೆಯುತ್ತಾ ಬಂದಿವೆ.

ಆದರೆ ಸದ್ಯಕ್ಕೆ ಕೊಲ್ಲಿಯಲ್ಲಿ ನೆಲೆಸಿರುವ ಮಂಗಳೂರಿನ ಬಿ ರಘುರಾಮ ಶೆಟ್ಟರು ಸುಮಾರು ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಮಹಾಭಾರತವನ್ನು ತೋರಿಸಲು ಹೊರಟಿದ್ದಾರೆ. ಅದೂ ಎರಡು ಭಾಗಗಳಲ್ಲಿ. ವೀಕ್ಷಿಸಿ ದಿಗ್ವಿಜಯ ನ್ಯೂಸ್ LIVE

ಹೌದು ಅತ್ಯಧಿಕ ವೆಚ್ಚದಲ್ಲಿ ಮಹಾಭಾರತ ಸಿನಿಮಾ ನಿರ್ಮಾಣ ಮಾಡಲು ಅವರು ನಿರ್ಧರಿಸಿದ್ದಾರೆ. ವಿ ಎ ಶ್ರೀಕುಮಾರ್​ ಮೆನನ್ ಅವರು ‘ಮಹಾಭಾರತ’ ಸಿನಿಮಾ ನಿರ್ದೇಶಿಸಲಿದ್ದಾರೆ. ಇನ್ನೊಂದು ವರ್ಷಕ್ಕೆ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, 2020ನೇ ಇಸ್ವಿಗೆ ತೆರೆಗೆ ಬರಲಿದೆ.

ಶೆಟ್ಟರು ಕನ್ನಡಿಗರೇ ಆಗಿರುವುದರಿಂದ ಕನ್ನಡ ಸೇರಿದಂತೆ ಇಂಗ್ಲೀಷ್​, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಜತೆಗೆ, ದೇಶದ ಇನ್ನೂ ಹಲವು ಭಾಷೆಗಳಲ್ಲಿ ಹಾಗೂ ವಿದೇಶೀ ಭಾಷೆಗಳಲ್ಲಿಯೂ ಡಬ್ ಆಗಲಿದೆ. ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕಲಾವಿದರು ಈ ಸಿನಿಮಾದಲ್ಲಿ ಕಾರ್ಯವಹಿಸಲಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂಟಿ ವಾಸುದೇವ ನಾಯರ್ ಅವರ ರಂಡಮೂಳಂ (ಎರಡನೆಯ ತಿರುವು) ಆಧಾರಿತ ಸಿನಿಮಾ ಇದಾಗಲಿದ್ದು, ಚಿತ್ರಕಥೆಯೂ ಅವರದ್ದೇ ಆಗಲಿದೆ.

ಈ ಮಹತ್ವದ ಸಿನಿಮಾ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಅವತರಿಸಲಿದೆ. ಜತೆಗೆ ವಿಶ್ವದಾದ್ಯಂತ 3 ಶತಕೋಟಿ ಜನರನ್ನು ತಲುಪಲಿದೆ ಎಂದು ನಾಯರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top