Tuesday, 26th September 2017  

Vijayavani

1. ಗಡಿಯಲ್ಲಿ ಬಾಲ ಬಿಚ್ಚಿದ್ರೆ ಹುಷಾರ್​- ನಡೆಯಲಿದೆ ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​- ಪಾಕ್​ಗೆ ಬಿಪಿನ್​ ರಾವತ್​ ವಾರ್ನಿಂಗ್​ 2. ಮ್ಯಾನ್ಮಾರ್‌ನಲ್ಲಿ ಭುಗಿಲೆದ್ದ ಹಿಂಸಾಚಾರ- ಪ್ರತಿಕಾರಕ್ಕಿಳಿದ ರೋಹಿಂಗ್ಯಾ ಮುಸ್ಲಿಂರು- 92 ಜನರ ಭೀಕರ ಕಗ್ಗೊಲೆ 3. ವಿಶ್ವಕ್ಕೆ 3ನೇ ಮಹಾಯುದ್ಧದ ಭೀತಿ- ಕೋರಿಯಾ ದೃಷ್ಟಿಯಲ್ಲಿ ಅಮೆರಿಕಾವೇ ಆರೋಪಿ- ಸಮರಕ್ಕೆ ಸಿದ್ಧ ಎಂದ ಸರ್ವಾಧಿಕಾರಿ 4. ಗದಗ್​ನಲ್ಲಿ ಯಶಸ್ವಿಯಾದ ಸ್ವಚ್ಛ ಭಾರತ- ನರಗುಂದ ತಾಲೂಕು ಬಯಲು ಶೌಚಮುಕ್ತ- ಇಂದು ಉಪರಾಷ್ಟ್ರಪತಿಗಳಿಂದ ಅಧಿಕೃತ ಘೋಷಣೆ 5. ಮಳೆಗೆ ತತ್ತರಿಸಿದ ಬೆಣ್ಣೆ ದೋಸೆ ನಗರಿ- ಮಲೆನಾಡಲ್ಲಿ ಮನೆಗೆ ನುಗ್ಗಿದ ನೀರು- ಇತ್ತ ಕೋಲಾರದಲ್ಲಿ ನೂರಾರು ಎಕರೆ ಬೆಳೆ ನಾಶ
Breaking News :

100ನೇ ಟೆಸ್ಟ್​ನಲ್ಲಿ ಬಾಂಗ್ಲಾ ಐತಿಹಾಸಿಕ ಜಯ

Monday, 20.03.2017, 7:57 AM       No Comments

ಕೊಲಂಬೊ: ಬಾಂಗ್ಲಾದೇಶ ತಂಡ ತನ್ನ 100ನೇ ಟೆಸ್ಟ್ ಪಂದ್ಯವನ್ನು ಐತಿಹಾಸಿಕ ಗೆಲುವಿನೊಂದಿಗೆ ಅವಿಸ್ಮರಣೀಯಗೊಳಿಸಿದೆ. ಆತಿಥೇಯ ಶ್ರೀಲಂಕಾ ವಿರುದ್ಧದ ಸರಣಿಯ 2ನೇ ಹಾಗೂ ಅಂತಿಮ ಪಂದ್ಯದಲ್ಲಿ ಆರಂಭಿಕ ತಮೀಮ್ ಇಕ್ಬಾಲ್(82 ರನ್, 125 ಎಸೆತ, 7 ಬೌಂಡರಿ, 1 ಸಿಕ್ಸರ್) ಬಿರುಸಿನ ಅರ್ಧಶತಕದ ನೆರವಿನಿಂದ ಬಾಂಗ್ಲಾ 4 ವಿಕೆಟ್ ಜಯ ಸಾಧಿಸಿತು. ಇದರೊಂದಿಗೆ ಬಾಂಗ್ಲಾ 2ಪಂದ್ಯಗಳ ಸರಣಿಯಲ್ಲಿ 1-1 ಸಮಬಲದ ಗೌರವ ಹಂಚಿಕೊಂಡಿತು.

8 ವಿಕೆಟ್​ಗೆ 268 ರನ್​ಗಳಿಂದ ಭಾನುವಾರ ಅಂತಿಮ ದಿನದಾಟ ಮುಂದುವರಿಸಿದ ಲಂಕಾ, 319 ರನ್​ಗೆ ದ್ವಿತೀಯ ಇನಿಂಗ್ಸ್ ಮುಗಿಸಿತು. ಇದರಿಂದ 191 ರನ್ ಗೆಲುವಿನ ಸವಾಲು ಪಡೆದ ಬಾಂಗ್ಲಾ, 6 ವಿಕೆಟ್​ಗೆ 191ರನ್ ಗಳಿಸಿ ಐತಿಹಾಸಿಕ ಜಯದ ಸಂಭ್ರಮಾಚರಿಸಿತು. ಒಂದು ಹಂತದಲ್ಲಿ ಬಾಂಗ್ಲಾ 22 ರನ್​ಗೆ 2 ವಿಕೆಟ್ ಕಳೆದುಕೊಂಡು ಪರದಾಡಿದರೂ, ತಮೀಮ್ ಸಾಹಸದಿಂದ ಗೆಲುವು ಕಂಡಿತು. ಇದು ಬಾಂಗ್ಲಾಗೆ ಶ್ರೀಲಂಕಾ ವಿರುದ್ಧ ಸಿಕ್ಕ ಚೊಚ್ಚಲ ಟೆಸ್ಟ್ ಗೆಲುವು ಮತ್ತು ಇದೇ ಮೊದಲ ಬಾರಿಗೆ ಸರಣಿ ಹಂಚಿಕೊಂಡಿತು. ಈ ಹಿಂದೆ ಆಡಿದ್ದ 7 ಸರಣಿಯಲ್ಲೂ ಬಾಂಗ್ಲಾ ಸೋತಿತ್ತು.

ಶ್ರೀಲಂಕಾ: 338 ಮತ್ತು 319 (ದಿಲ್ರುವಾನ್ ಪೆರೇರಾ 50, ಸುರಂಗಾ ಲಕ್ಮಲ್ 40, ಶಕೀಬ್ 74ಕ್ಕೆ 4), ಬಾಂಗ್ಲಾದೇಶ: 467 ಮತ್ತು 6 ವಿಕೆಟ್​ಗೆ 191(ತಮೀಮ್ 82, ಶಬ್ಬೀರ್ ರೆಹಮಾನ್ 41, ಪೆರೇರಾ 59ಕ್ಕೆ 3, ಹೆರಾತ್ 75ಕ್ಕೆ 3). -ಏಜೆನ್ಸೀಸ್

4 – 100ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಕಂಡ ವಿಶ್ವದ ನಾಲ್ಕನೇ ತಂಡ ಬಾಂಗ್ಲಾದೇಶ. ಇದಕ್ಕೂ ಮುನ್ನ ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಈ ಸಾಧನೆ ಮಾಡಿತ್ತು.

4 – ವಿದೇಶಿ ನೆಲದಲ್ಲಿ ಬಾಂಗ್ಲಾಕ್ಕೆ ಇದು 4ನೇ ಟೆಸ್ಟ್ ಗೆಲುವಾಗಿದೆ. 2009ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 2, ಜಿಂಬಾಬ್ವೆಯಲ್ಲಿ 1 ಟೆಸ್ಟ್ ಜಯಿಸಿತ್ತು.

Leave a Reply

Your email address will not be published. Required fields are marked *

Back To Top