Sunday, 22nd October 2017  

Vijayavani

1. ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಸೇನೆ ಎನ್​ಕೌಂಟರ್​ಗೆ ಉಗ್ರ ಫಿನಿಶ್ – ಹತನಿಂದ ಪಾಕ್​ ಕರೆನ್ಸಿ, ಶಸ್ತ್ರಾಸ್ತ್ರ ವಶಕ್ಕೆ 2. ಬಿಎಸ್​ವೈ-ಬಿ.ಎಲ್.ಸಂತೋಷ ನಡುವೆ ಕಿತ್ತಾಟ – ಸಂಘಟನಾತ್ಮಕ ವರದಿ ಪಡೆಯಲು ಮುಂದಾದ ಹೈಕಮಾಂಡ್​ – ರಿಪೋರ್ಟ್​ಗಾಗಿ ಶಿವಪ್ರಕಾಶ್​ ಯಾದವ್​ ನೇಮಕ 3. ಬಹುಮನಿ ಕಾಲದ ಕೋಟೆಗಿಲ್ಲ ಭದ್ರತೆ – ಅವ್ಯವಸ್ಥೆಗಳ ಆಗರ ಜಾಮೀಮಾ ಮಸೀದಿ – ಪ್ರವಾಸೋದ್ಯಮ ಸಚಿವರ ತವರಲ್ಲೇ ಇದೆಂಥ ಅದ್ವಾನ 4. ಗುಜರಾತ್​​​ ಚುನಾವಣೆ ಗೆಲ್ಲಲು ಸರ್ಕಸ್​ – ಹಲವು ಯೋಜನೆಗಳಿಗೆ ಇಂದು ನಮೋ ಚಾಲನೆ – ಹಾರ್ದಿಕ್​​​​​​​, ಜಿಗ್ನೇಶ್ ಸೆಳೆಯಲು ಕೈ ಪ್ಲಾನ್​​ 5. ಚಿರಂಜೀವಿ ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥ – ಮನೆಯಲ್ಲಿ ತಾಂಬುಲ ಶಾಸ್ತ್ರ – ಸಂಜೆ ಲೀಲಾ ಪ್ಯಾಲೇಸ್​ನಲ್ಲಿ ರಿಂಗ್​ ಎಕ್ಸ್​ಚೇಂಜ್​
Breaking News :

10 ಕ್ರಿಕೆಟಿಗರಿಗೆ ಓಲಾ ಸ್ಕಾಲರ್​ಷಿಪ್

Friday, 19.05.2017, 2:59 AM       No Comments

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಓಲಾ ಪಾರ್ಟ್​ನರ್ಸ್ ಲೀಗ್ (ಒಪಿಎಲ್) ಅಂಗವಾಗಿ ನೀಡುತ್ತಿರುವ ಕ್ರಿಕೆಟ್ ಸ್ಕಾಲರ್​ಷಿಪ್​ಗೆ ಬೆಂಗಳೂರಿನಿಂದ 10 ಆಟಗಾರರು ಆಯ್ಕೆಯಾಗಿದ್ದಾರೆ. ಕಳೆದ ಭಾನುವಾರ ಇಮ್ತಿಯಾಜ್ ಅಲಿ ಕ್ರಿಕೆಟ್ ಅಕಾಡೆಮಿಯಲ್ಲಿ ದಿನಪೂರ್ತಿ ನಡೆದ ಆಯ್ಕೆ ಟ್ರಯಲ್ಸ್​ನಲ್ಲಿ 50ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.

ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್ಸ್ ಸೇರಿ ದೇಶದ ಪ್ರಮುಖ ಕ್ರಿಕೆಟ್ ಅಕಾಡೆಮಿಗಳೊಂದಿಗೆ ಕೈಜೋಡಿಸಿ ಓಲಾ ಸ್ಕಾಲರ್​ಷಿಪ್ ನೀಡುತ್ತಿದೆ. ಓಲಾ ಸಂಸ್ಥೆಯಲ್ಲಿ ಚಾಲಕರಾಗಿರುವ ಮಕ್ಕಳಿಗಾಗಿ ನಡೆಸಿದ ಟ್ರಯಲ್ಸ್ ಇದಾಗಿತ್ತು. 4 ತಾಸು ಅಕಾಡೆಮಿಯ ಕೋಚ್​ಗಳು ಟ್ರಯಲ್ಸ್ ನಡೆಸಿದರು. ಆಯ್ಕೆಯಾದ ಕ್ರಿಕೆಟಿಗರಿಗೆ ಸ್ಮರಣಿಕೆ, ಪ್ರಮಾಣಪತ್ರ, ಒಪಿಎಲ್ ಜೆರ್ಸಿ ಹಾಗೂ ಕ್ರಿಕೆಟ್ ಕಿಟ್​ಅನ್ನು ನೀಡಲಾಯಿತು. ‘ಕ್ರಿಕೆಟ್ ನನ್ನ ಪ್ಯಾಶನ್. ಪ್ರತಿದಿನ ಗಲ್ಲಿಯಲ್ಲಿ ಕ್ರಿಕೆಟ್ ಅಡುತ್ತೇನೆ. ತಂಡದ ನಾಯಕ ನಾನು. ದೇಶದ ಪ್ರಮುಖ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿರುವುದೇ ಖುಷಿಯ ವಿಚಾರ’ ಎಂದು ಸ್ಕಾಲರ್​ಷಿಪ್​ಗೆ ಆಯ್ಕೆಯಾದ 13 ವರ್ಷದ ಸುದೀಪ್ ಯಾದವ್ ಹೇಳಿದರು. ಬೆಂಗಳೂರು ಮಾತ್ರವಲ್ಲದೆ, ದೆಹಲಿ, ಮುಂಬೈ, ಪುಣೆ, ಕೋಲ್ಕತ, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಟ್ರಯಲ್ಸ್ ನಡೆಸಲಾಗಿತ್ತು.

ಆಯ್ಕೆಯಾದ ಕ್ರಿಕೆಟಿಗರು: ಸುದೀಪ್ ಯಾದವ್ (13 ವರ್ಷ), ಮನೋಜ್ ಕುಮಾರ್ (14), ಬಿ.ಆರ್. ರೇಹಾನ್ (16), ಬಿ. ಅಭಿಷೇಕ್(13), ಅಮರ್ (13), ಸಂಜಯ್ (11), ಸಚಿನ್ (15), ಶ್ರೀಗಗನ್ (13), ಎನ್.ಜಿ. ಧನುಷ್ (10), ಕೆ.ಪಾರ್ಥ (10).

Leave a Reply

Your email address will not be published. Required fields are marked *

Back To Top