Wednesday, 15th August 2018  

Vijayavani

ಹೊರಗೆ ದೋಸ್ತಿ, ಒಳಗೆ ಕುಸ್ತಿ - ದೂರವಾಗದ ಸಿದ್ದು, ಕುಮಾರ ಮುನಿಸು - ರಾಯಣ್ಣನ ಪ್ರತಿಮೆ ಬಳಿ ಬಯಲಾಯ್ತು ಮೈತ್ರಿ ಹುಳುಕು        ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ - ಕೆಆರ್‌ಎಸ್‌ಗೆ ಭಾರಿ ಪ್ರಮಾಣದ ನೀರು- ಶ್ರೀರಂಗಪಟ್ಟಣ ಬಳಿ ಪ್ರವಾಹ ಪರಿಸ್ಥಿತಿ        ಮನೆ, ಮಠ , ಶಾಲೆ ಎಲ್ಲವೂ ಜಲಾವೃತ - ಹೊನ್ನಾಳಿಯಲ್ಲಿ ಸ್ಕೂಲ್‌ಗೆ ನುಗ್ಗಿದ ತುಂಗಭದ್ರ - ಅಪಾಯ ಲೆಕ್ಕಿಸದೆ ವಿದ್ಯಾರ್ಥಿಗಳ ಆಟ        ಕರಾವಳಿಯಲ್ಲಿ ಬಿಡುವುಕೊಡದ ವರುಣ - ಬೆಳ್ತಂಗಡಿಯಲ್ಲಿ ನಿರ್ಮಾಣ ಹಂತದ ಮನೆ ಕುಸಿತ - ಅತ್ತ ಹಾಸನದಲ್ಲಿ ರಸ್ತೆ ಕುಸಿತ        ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ - ನಾಲ್ಕು ವರ್ಷಗಳ ಬಳಿಕ ಲಿಂಗನಮಕ್ಕಿ ಭರ್ತಿ - ಜೋಗ ಜಲಾಪಾತದಲ್ಲಿ ಜಲ ವೈಭವ        ಕೇರಳದಲ್ಲಿ ತಗ್ಗದ ಪ್ರವಾಹ - ನೀರಿನಲ್ಲಿ ಸಿಲುಕೊಂಡ ರಾಜ್ಯ ಸಾರಿಗೆ ಬಸ್‌ - ಅಯ್ಯಪ್ಪನಿಗೂ ತಟ್ಟಿದ ನೆರೆಹಾವಳಿ       
Breaking News

16ರಿಂದ ದಕ್ಷಿಣ ಭಾರತ ಜೈನ ಸಭೆ ತ್ರೈ ವಾರ್ಷಿಕ ಅಧಿವೇಶನ

Wednesday, 13.06.2018, 6:00 PM       No Comments

ನಿಪ್ಪಾಣಿ: ದಕ್ಷಿಣ ಭಾರತ ಜೈನ ಸಭೆ 98ನೇ ತ್ರೈವಾರ್ಷಿಕ ಅಧಿವೇಶನವು ಶನಿವಾರ ಜೂ. 16ರಿಂದ ಎರಡು ದಿನಗಳ ಕಾಲ ಸಮೀಪದ ಶ್ರೀ ಕ್ಷೇತ್ರ ಸ್ತವನಿಧಿ ಬ್ರಹ್ಮನಾಥ ಭವನದಲ್ಲಿ ನಡೆಯಲಿದೆ ಎಂದು ದಕ್ಷಿಣ ಭಾರತ ಜೈನ ಸಭೆ ಅಧ್ಯಕ್ಷ ರಾವಸಾಹೇಬ ಪಾಟೀಲ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ  ಮಾತನಾಡಿದ ಅವರು, 60 ವರ್ಷಗಳ ಬಳಿಕ ಜೈನ ಸಭೆ ಮೂಲ ಉಗಮಸ್ಥಾನ ಸ್ತವನಿಧಿಯಲ್ಲಿ ಈ ಸಭೆ ಜರುಗುತ್ತಿರುವುದು ಐತಿಹಾಸಿಕ ಮಹತ್ವ ಹೊಂದಿದೆ. ಸಭೆಯಲ್ಲಿ ಸಮುದಾಯದ ಅಭಿವೃದ್ಧಿ ಕುರಿತು ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದರು.

ಶನಿವಾರ ಬೆಳಗ್ಗೆ 9 ಗಂಟೆಗೆ ಧರ್ಮಧ್ವಜಾರೋಹಣವನ್ನು ಪ್ರಶಾಂತ ಪಾಟೀಲ ನೆರವೇರಿಸುವರು. ಕೊಲ್ಲಾಪುರದ ಡಾ.ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಕಾಶ ಪಾಟೀಲ ಧರ್ಮ ಧ್ವಜಾರೋಹಣ ನೆರವೇರಿಸುವರು. ರಜನಿಕಾಂತ ನಾಗಾಂವಕರ ಬ್ರಹ್ಮನಾಥ ನಗರ, ಅಣ್ಣಾಸಾಹೇಬ ಲಠ್ಠೆ, ಶ್ರೀಮಂಧರ ದೇಸಾಯಿ ವೇದಿಕೆ ಉದ್ಘಾಟಿಸುವರು. ಬಳಿಕ ಅಧಿವೇಶನ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಜರುಗಲಿದೆ. ಗೋಪಾಲ ಜಿನಗೌಡ ಉದ್ಘಾಟಿಸಲಿದ್ದಾರೆ. ಅಧಿವೇಶನದ ಸ್ವಾಗತಾಧ್ಯಕ್ಷರಾಗಿ ಧನ್ಯಕುಮಾರ ಗುಂಡೆ ಮತ್ತು ಅಧ್ಯಕ್ಷತೆಯನ್ನು ರಾವಸಾಹೇಬ ಪಾಟೀಲ ವಹಿಸಲಿದ್ದಾರೆ.

ಬೆಳಗ್ಗೆ 10 ರಿಂದ 11.30ರವರೆಗೆ ಜೈನ ಮಹಿಳಾ ಪರಿಷತ್ತು ಅಧಿವೇಶನ, 11.30 ರಿಂದ 1ರವರೆಗೆ ವೀರ ಮಹಿಳಾ ಮಂಡಳ ಮಧ್ಯವರ್ತಿ ಸಮಿತಿ ಅಧಿವೇಶನ, ಮಧ್ಯಾಹ್ನ 2 ರಿಂದ 3.30ರ ವರೆಗೆ ಪದವೀಧರ ಸಂಘಟನೆ ಅಧಿವೇಶನ ನಡೆಯಲಿದೆ. ಮಧ್ಯಾಹ್ನ 4 ರಿಂದ 5ರವರೆಗೆ ವೀರ ಸೇವಾದಲ ಮಧ್ಯವರ್ತಿ ಸಮಿತಿ ಅಧಿವೇಶನ ಜರುಗಲಿದೆ ಎಂದು ತಿಳಿಸಿದರು.

17ರಂದು ಬೆಳಗ್ಗೆ 9.30 ರಿಂದ 12.30ರ ವರೆಗೆ ದಕ್ಷಿಣ ಭಾರತ ಜೈನ ಸಭೆ 98ನೇ ವಾರ್ಷಿಕ ಸರ್ವಸಾಧಾರಣ ಸಭೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ವಿವಿಧ ಪುರಸ್ಕಾರ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಕಾರ‌್ಯಕ್ರಮ ಜರುಗಲಿದೆ. ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಂಸದ ರಾಜು ಶೆಟ್ಟಿ ಉದ್ಘಾಟಿಸಲಿದ್ದಾರೆ. ಪ್ರಗತಿ ಮತ್ತು ಜಿನವಿಜಯ ವಿಶೇಷಾಂಕವನ್ನು ಶಾಸಕಿ ಶಶಿಕಲಾ ಜೊಲ್ಲೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಅಭಯ ಪಾಟೀಲ ಅವರಿಗೆ ವಿಶೇಷ ಸನ್ಮಾನ ಜರುಗಲಿದೆ.

ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಮತ್ತು ಕಲ್ಲಪ್ಪಣ್ಣಾ ಅವಾಡೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾವಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ಭಾರತ ಜೈನ ಸಭೆ ವತಿಯಿಂದ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.

ಪದಾಧಿಕಾರಿಗಳಾದ ಪ್ರಾ. ಡಿ.ಎ.ಪಾಟೀಲ, ರಾವಸಾಹೇಬ ಪಾಟೀಲ, ಎ.ಎ. ನೇಮಣ್ಣವರ, ಸಂಜಯ ಶೇಟೆ, ಡಾ.ಅಜಿತ ಪಾಟೀಲ, ಉತ್ತಮ ಪಾಟೀಲ, ಕಿರಣ ಪಾಟೀಲ, ಬಾಳಾಸಾಹೇಬ ಮಗದುಮ್ಮ, ಪ್ರಾ.ವಿಲಾಸ ಉಪಾಧ್ಯೆ ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *

Back To Top