More

    ಹ್ಯಾಕರ್ ಶ್ರೀಕಿ ವಿರುದ್ಧ ಗೇಮಿಂಗ್ ಕಂಪನಿ ದೂರು

    ಬೆಂಗಳೂರು : ಡಾರ್ಕ್ ನೆಟ್‌ವರ್ಕ್‌ನಲ್ಲಿ ವಿದೇಶಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಪ್ರಕರಣದಲ್ಲಿ ಬಂಧಿತ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ಮತ್ತೊಂದು ಎ್ಐಆರ್ ದಾಖಲಾಗಿದೆ.
    ಸಂಜಯನಗರದ ೆಸಿಫಿಕ್ ಗೇಮಿಂಗ್ ಪ್ರೈ.ಲಿ. ಕಂಪನಿ ಮಾಲೀಕ ಅರವಿಂದ ಬಾಲಕೃಷ್ಣ ಎಂಬುವರು ದೂರು ನೀಡಿದ್ದಾರೆ. ಆರೋಪಿ ಶ್ರೀಕೃಷ್ಣನ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
    ೆಸಿಫಿಕ್ ಗೇಮಿಂಗ್ ಪ್ರೈ.ಲಿ. ಕಂಪನಿಯನ್ನು ಐವರು ಸೇರಿ ತೆರೆದು ಆನ್‌ಲೈನ್ ಗೇಮಿಂಗ್ ನಡೆಸುತ್ತಿದ್ದೆವೆ. ಕ್ಯಾಸಿನೋ 143 ಮತ್ತು ಪೋಕರ್‌ಸೈಂಟ್ ಬ್ರಾಂಡ್ ಹೆಸರಿನಲ್ಲಿ ಗೇಮಿಂಗ್ ನಡೆಸುತ್ತಿದ್ದು, ದಿನ ಕಳೆದಂತೆ ವ್ಯವಹಾರ ಇಳಿಮುಖವಾಗಿತ್ತು. ತಾಂತ್ರಿಕ ಸಿಬ್ಬಂದಿ ಜತೆ ಚರ್ಚೆ ನಡೆಸಿದಾಗ ಮಾರ್ಚ್‌ನಲ್ಲಿ ಕಂಪನಿ ಡೇಟಾ ಕಳವಾಗಿರುವುದು ಗೊತ್ತಾಯಿತು. ಇದರಿಂದ ಕಂಪನಿಗೆ ಸಾಕಷ್ಟು ನಷ್ಟ ಉಂಟಾಗಿತ್ತು. ಇತ್ತೀಚೆಗೆ ಹ್ಯಾಕ್ ಮಾಡಿ ಡೇಟಾ ಕಳವು ಮಾಡುತ್ತಿದ್ದ ಶ್ರೀಕೃಷ್ಣ ಸಿಸಿಬಿ ಪೊಲೀಸರು ಬಂಧಿಸಿರುವುದು ತಿಳಿದು ದೂರು ಕೊಡುತ್ತಿದ್ದೆನೆ. ಈತನೇ ನಮ್ಮ ಕಂಪನಿ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಿ ಡೇಟಾ ಕಳವು ಮಾಡಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸುವಂತೆ ದೂರಿನಲ್ಲಿ ಅರವಿಂದ್ ಮನವಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts