More

    ಹಣ್ಣುಗಳ ರಾಜನಿಗೆ ಶಿಲೀಂಧ್ರ ಶತ್ರು: ಹೊಸಕೋಟೆಯಲ್ಲಿ ಮಾವು ಬೆಳೆಗಾರರಿಗೆ ಸಂಕಷ್ಟ ಇಳುವರಿಯಲ್ಲಿ ಗಣನೀಯ ಇಳಿಕೆ

    ಎಂ. ರಾಮೇಗೌಡ ನಂದಗುಡಿ
    ಹೊಸಕೋಟೆ ತಾಲೂಕಿನ ಪ್ರಮುಖ ತೋಟಗಾರಿಕೆ ಬೆಳೆಯಾಗಿರುವ ಮಾವಿಗೆ ಶಿಲೀಂಧ್ರ ರೋಗಬಾಧೆ ಎದುರಾಗಿದೆ.
    ತಾಲೂಕಿನಲ್ಲಿ 3200 ಹೆಕ್ಟರ್‌ಗೂ ಹೆಚ್ಚು ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ರೋಗಬಾಧೆಯಿಂದ ಈ ಬಾರಿ ಮಾವಿನ ಸಲಿನಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಮಾವು ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
    ಕಳೆದ ವರ್ಷವೂ ಮಾವಿನ ಫಸಲು ದೊರಕದೆ ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸಿದ್ದರು. ಹವಾಮಾನ ವೈಪರೀತ್ಯದಿಂದ ಸಾಕಷ್ಟು ಸಲು ತೋಟದಲ್ಲಿಯೇ ಕೊಳೆತಿತ್ತು. ಶಿಲೀಂಧ್ರ ರೋಗ ಹೂವು ಬಿಡುವ ಹಂತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ಡಿಸೆಂಬರ್‌ನಿಂದ ಜನವರಿ ತಿಂಗಳಲ್ಲಿ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತವೆ. ಈ ಅವಧಿಯಲ್ಲಿ ಹಗಲು ಹೆಚ್ಚು ಉಷ್ಣಾಂಶದಿಂದ ಕೂಡಿದ್ದು, ರಾತ್ರಿ ವೇಳೆ ಚಳಿ ವಾತಾವರಣವಿದ್ದಾಗ ರೋಗ ಉಲ್ಭಣಗೊಳ್ಳುತ್ತದೆ. ಈ ಬಾರಿ ರೋಗಬಾಧೆ ಹೆಚ್ಚು ಕಾಡುತ್ತಿದ್ದು, ನಿರೀಕ್ಷಿತ ಸಲು ಬರುವುದು ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

    ಮಾವಿನ ಗಿಡದಲ್ಲಿ ಹೂವು ಬಿಟ್ಟಿದ್ದರಿಂದ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೆವು. ಆದರೆ ಪ್ರಸಕ್ತ ಸಾಲಿನಲ್ಲಿ ಹೂವು, ಚಿಗುರು ಏಕಕಾಲದಲ್ಲಿರುವುದರಿಂದ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಮಾವಿನ ಮರದ ತುಂಬಾ ಬಿಟ್ಟ ಹೂ ಉಳಿಸಿಕೊಳ್ಳುವ ಮೂಲಕ ಫಸಲು ಹೆಚ್ಚಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದೇವೆ.
    ನಾರಾಯಣಪ್ಪ ಮಾವು ಬೆಳೆಗಾರ,
    ದಿನ್ನಹಳ್ಳಿ

    ಹೊಸಕೋಟೆ ತಾಲೂಕಿನ ಮಾವಿನ ತೋಟಗಳ ಪರಿಶೀಲನೆ ನಡೆಸಿದ್ದೇವೆ, ಹೂ ಗೊಂಚಲು ಕಪ್ಪಾಗುವ ಶಿಲೀಂಧ್ರ ರೋಗ ವ್ಯಾಪಕವಾಗಿದೆ. ಇದರ ಜತೆಗೆ ಜಿಗಿಹುಳು, ಥ್ರಿಫ್ಸ್ ಕೀಟ ಕಂಡುಬರುತ್ತಿದೆ. ಪ್ರಸ್ತುತ ಈ ರೋಗ ಹರಡಲು ಅನುಕೂಲಕರ ವಾತಾವರಣವಿದೆ. ಹಾಗಾಗಿ ರೈತರು ನಿಯಂತ್ರಣಾ ಕ್ರಮ ಅನುಸರಿಸಬೇಕು.
    ರೇಖಾ ಸಹಾಯಕ ನಿರ್ದೇಶಕಿ ತೋಟಗಾರಿಕೆ ಇಲಾಖೆ ಹೊಸಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts