More

    ರಸ್ತೆ ಸಂಚಾರ ತಡೆದು ಪ್ರತಿಭಟನೆ

    ಹುಬ್ಬಳ್ಳಿ: ಕಾರವಾರ ರಸ್ತೆಯಲ್ಲಿರುವ ಹೇಸಿಗೆ ಮಡ್ಡಿ (ಗಾರ್ಬೆಜ್ ಡಂಪಿಂಗ್ ಯಾರ್ಡ್)ಯ ಅಸಮರ್ಪಕ ನಿರ್ವಹಣೆ ಹಾಗೂ ಅವ್ಯವಸ್ಥೆಯನ್ನು ಖಂಡಿಸಿ ಸ್ಥಳೀಯ ನಿವಾಸಿಗಳು ಸೋಮವಾರ ಹುಬ್ಬಳ್ಳಿ-ಕಾರವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ಮನೆ ಮನೆಯಿಂದ ಸಂಗ್ರಹಿಸುವ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗುತ್ತಿದ್ದು, ಸುತ್ತಮುತ್ತಲಿನ ಪರಿಸರದಲ್ಲಿ ದಟ್ಟವಾದ ಹೊಗೆ, ಗಬ್ಬು ವಾಸನೆ ಹರಡುತ್ತಿದೆ. ನಾಯಿಗಳ ಹಾವಳಿಯಿಂದ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಪ್ರತಿಭಟನೆ ನಿರತ ವಾರ್ಡ್ ನಂ. 34ರ ನಿವಾಸಿಗಳು, ಗಂಗಿವಾಳ, ರಾಯನಾಳ, ಗುಡಿಹಾಳ ಮತ್ತು ಅಂಚಟಗೇರಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

    ಡಂಪಿಂಗ್ ಯಾರ್ಡ್​ನಲ್ಲಿಯ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದು ನಿಲ್ಲಬೇಕು. ಬೀದಿ ನಾಯಿಗಳ ಹಾವಳಿ ತಪ್ಪಬೇಕು ಎಂದು ಆಗ್ರಹಿಸಿದರು.

    ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳಾದ ಸಂತೋಷ ಯರಂಗಳಿ ಹಾಗೂ ಮಲ್ಲಿಕಾರ್ಜುನ ಬಿ.ಎಂ., ಡಂಪಿಂಗ್ ಯಾರ್ಡ್​ನಲ್ಲಿ ಹೊಗೆಯಾಡದಂತೆ ಕ್ರಮ ತೆಗೆದುಕೊಂಡಿದ್ದೇವೆ. 10 ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

    ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಪಾಲಿಕೆ ಮಾಜಿ ಸದಸ್ಯೆ ದೀಪಾ ಗೌರಿ, ಸ್ಥಳೀಯರಾದ ನಾಮದೇವ ರಂಗ್ರೇಜ್, ಜೆ.ಮುಲ್ಲಾ, ಖಲೀಲ್ ಶೇಖ, ಮುಬಾರಕ ಶಿರಹಟ್ಟಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts