More

    ಮಾನಸ ಸರೋವರ ಅದ್ಭುತ ಯಾತ್ರೆ

    ಮೈಸೂರು: ನಗರದ ಲಕ್ಷ್ಮೀಪುರಂನ ಗೋಪಾಲಸ್ವಾಮಿ ಶಾಲೆಯಲ್ಲಿ ಭಾನುವಾರ ಮಹಾಶಿವರಾತ್ರಿ ಪ್ರಯುಕ್ತ ‘ಕೈಲಾಸ-ಮಾನಸ ಸರೋವರ ದರ್ಶನ’ ಕಾರ್ಯಕ್ರಮ ಆಯೋಜಿಸಲಾಗಿತ್ತು.


    ವರ್ಣಮಯ ಚಿತ್ರಗಳೊಂದಿಗೆ(ಸ್ಲಾಯ್ಡಾ ಪ್ರದರ್ಶನ) ವೇದ ಉಪನಿಷತ್‌ಗಳ ಹಿನ್ನೆಲೆಯಲ್ಲಿ ವ್ಯಾಖ್ಯಾನ ಮಾಡಲಾಯಿತು. ಕೇಂದ್ರ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ.ಗೋಪಿನಾಥ್ ಪರಿಕಲ್ಪನೆಯಲ್ಲಿ ಪ್ರಸ್ತುತಪಡಿಸಲಾಯಿತು.


    ಬಳಿಕ ಮಾತನಾಡಿದ ಅವರು, ಮಾನಸ ಸರೋವರ ಅದ್ಭುತ ಯಾತ್ರೆಯಾಗಿದೆ. ಈ ಯಾನಕ್ಕಾಗಿ ಈ ಹಿಂದೆ 30 ದಿನಗಳು ಬೇಕಿತ್ತು. ಇದೀಗ 12ರಿಂದ 15 ದಿನಗಳಲ್ಲಿ ನೋಡಿ ಬರಬಹುದು. ಮಾನಸ ಸರೋವರ ಭಾರತ-ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಅಂದರೆ, ಭಾರತಕ್ಕೆ ಒಳಪಟ್ಟಿರುವ ಕೈಲಾಸ, ಮಾನಸ ಸರೋವರದ 6,836 ಚದರ ಕಿ.ಮೀ ಭಾಗವು ಪೂರ್ವದಲ್ಲಿ ನೇಪಾಳ ಮತ್ತು ಉತ್ತರದಲ್ಲಿ ಚೀನಾದ ಗಡಿಯನ್ನು ಹೊಂದಿದೆ. ಸಮುದ್ರಮಟ್ಟದಿಂದ ಸುಮಾರು 14,950 ಅಡಿಗಳಷ್ಟು ಎತ್ತರದಲ್ಲಿದೆ ಎಂದು ಹೇಳಿದರು.


    ಕೈಲಾಸ ಪರ್ವತ ಶಿಖರವು ಪ್ರಪಂಚದ ಅತಿ ಎತ್ತರದ ಶಿಖರಗಳಲ್ಲಿ ಒಂದು. ಇದು ಪಾರ್ವತಿ-ಪರಮೇಶ್ವರರ ಆವಾಸಸ್ಥಾನ. ಶಿವಶಕ್ತಿಯರು ಒಂದುಗೂಡಿದ ಜಾಗವಾಗಿದೆ ಎಂದು ತಿಳಿಸಿದರು.


    ಇಲ್ಲಿ ಜುಲೈಯಿಂದ ಆಗಸ್ಟ್ ಕೊನೆಯವರೆಗೆ ಹಿಮಪಾತ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ, ಈ ಅವಧಿಯಲ್ಲಿ ಮಾತ್ರ ಅಲ್ಲಿಗೆ ತೀರ್ಥಯಾತ್ರೆ ತೆರಳಲು ಅನುಮತಿ ನೀಡಲಾಗುತ್ತದೆ. ತಂಡಗಳಾಗಿ ಅಲ್ಲಿ ಕಳುಹಿಸಲಾಗುತ್ತದೆ. ಈ ತಂಡವೊಂದರ ನಾಯಕನಾಗಿ ಕಾರ್ಯನಿರ್ವಹಿಸಿರುವೆ ಎಂದು ಸ್ಮರಿಸಿಕೊಂಡರು. ಮಹಾರಾಜ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಮುರಳಿ, ಶಿಕ್ಷಣ ಸಂಸ್ಥೆಯ ಎನ್.ಆರ್.ಮಂಜುನಾಥ್, ಡಾ.ಶಂಭುಲಿಂಗ ಉಪಾಧ್ಯಾಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts