More

    ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ಕೊಡಿ: ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ ಸಲಹೆ


    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಕಲ್ಯಾಣ ಕರ್ನಾಟಕದ ಧಾರ್ಮಿಕ, ಪ್ರೇಕ್ಷಣೀಯ ತಾಣಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕು ಎಂದು ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ ಹೇಳಿದರು.
    ಕಲಬುರಗಿ ಕಲಾಮಂಡಳದಲ್ಲಿ ಸೇಡಂ ರಾಷ್ಟಕೂಟ ಪುಸ್ತಕ ಮನೆ ಮತ್ತು ಸುಕಿ ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಅವರ ಮುಗಿಲು ಸುರಿದ ಮುತ್ತು ಪುಸ್ತಕವನ್ನು  ಬಿಡುಗಡೆ ಮಾಡಿ ಮಾತನಾಡಿದರು.
    ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಖಾರಿ, ವಿಜಯನಗರ ಜಿ¯್ಲೆಗಳಲ್ಲಿ ಧಾರ್ಮಿಕ, ಐತಿಹಾಸಿಕ ಪ್ರವಾಸಿ ತಾಣಗಳಿವೆ. ಆದರೆ ಬೆಳಕಿಗೆ ಬಾರದಿರುವುದು ವಿಷಾದನೀಯ. ಈ ಕ್ಷೇತ್ರಗಳಲ್ಲಿ ಅಭಿವೃದ್ದಿಯಾದಾಗ ಮಾತ್ರ ಜನಾಕರ್ಷಣೆಯಾಗಲಿದೆ. ಜತೆಗೆ ಈ ಭಾಗದ ಸಾಂಸ್ಕೃತಿಕ ಮೆರಗು ನಾಡಿನ ಇತರೆ ಭಾಗಗಳಿಗೆ ಪರಿಚಯಿಸುವ ಕೆಲಸ ಆಗಬೇಕು ಎಂದು ಹೇಳಿದರು.
    ರಾಷ್ಟçಕೂಟರು, ವಿಜಯನಗರ ಸಾಮ್ರಾಜ್ಯ, ಕಲ್ಯಾಣ ಚಾಲುಕ್ಯರು, ಬಹಮನಿ ಅರಸರು ಸೇರಿದಂತೆ ಅನೇಕ ರಾಜ, ಮಹಾರಾಜರು ಆಳಿ ಹೋದ ನಾಡು ಇದು. ಶರಣರು, ದಾಸರು. ತತ್ವಪದಕಾರರಿಗೆ ಜನ್ಮ ನೀಡಿದ ಪುಣ್ಯಭೂಮಿಯೂ ಹೌದು. ಈ ಭಾಗದ ಪರಂಪರೆಯನ್ನು ಬೆಳಕಿಗೆ ತರುವ ಮೂಲಕ ಭಾರತದ ಉದ್ದಗಲಕ್ಕೂ ಪಸರಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಈ ಭಾಗದ ಜನ ಸಂಘಟಿತರಾಗಿ ಸರ್ಕಾರವನ್ನು ಪ್ರಶ್ನಿಸಬೇಕು ಎಂದು ಸಲಹೆ ನೀಡಿದರು.
    ಪುಸ್ತಕಕ್ಕೆ ಸಾಂಸ್ಕೃತಿಕ ಅನನ್ಯತೆ
    ಪತ್ರಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿ, ಮುಗಿಲ ಸುರಿದ ಮುತ್ತು ಕೃತಿ ಸಾಹಿತ್ಯ ಲೋಕವನನ್ನು ಒಳಗೊಂಡಿದೆ. ಈ ಪುಸ್ತಕಕ್ಕೆ ಸಾಂಸ್ಕೃತಿಕ ಅನನ್ಯತೆ ಇದೆ. ೨೫ ಅದ್ಭುತ ಲೇಖನಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ಸಾಹಿತ್ಯಾಸಕ್ತರು, ಕನ್ನಡದ ಅಭಿಮಾನಿಗಳು ಓದುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.
    ಗಜಲ್ ೮ ಲೇಖನ, ನಾಟಕ ೨, ವಿಮರ್ಶೆ ೫, ಕಾದಂಬರಿ ೨, ವ್ಯಕ್ತಿ ಪರಿಚಯ ೪, ಮಕ್ಕಳ ಕವನ ಸಂಕಲನ, ಮನೋವಿಜ್ಞಾನ, ಭಾವಸಂಕಲನ ಹೀಗೆ ಇಡಿ ಸಾಹಿತ್ಯ ಕ್ಷೇತ್ರದ ಎಲ್ಲವನ್ನೂ ಒಳಗೊಂಡಿದೆ. ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶೆಗೆ ದೊಡ್ಡ ಸ್ಥಾನವಿದೆ. ಈ ಪುಸ್ತಕಕ್ಕೆ ಸಾಂಸ್ಕೃತಿಕ ಅನನ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
    ಲೇಖಕ ಮಹಿಪಾಲರೆಡ್ಡಿ ಮುನ್ನೂರು ಸ್ವಾಗತಿಸಿದರು. ಸುಕಿ ಸಾಂಸ್ಕೃತಿಕ ಸಂಸ್ಥೆಯ ಮುಖ್ಯಸ್ಥ ಕಿರಣ ಪಾಟೀಲ್ ನಿರೂಪಿಸಿದರು. ಕಾವೇರಿ ಹಿರೇಮಠ್ ಪ್ರಾರ್ಥಿಸಿದರು. ಚಿತ್ರ ನಿರ್ದೇಶಕ ಮಂಜು ಪಾಂಡವಪುರ ಇತರರು ಇದ್ದರು.
    ಕಾರ್ಯಕ್ರಮದ ನಂತರ ಮುಸ್ಸಂಜೆಯ ಮನೋಹರ ಗಾನ ಸಂಭ್ರಮ ನಡೆಯಿತು. ಗಾಯಕರಾದ ವಿಠ್ಠಲ್ ಮೇತ್ರೆ, ಶರಣು ಪಟ್ಟಣಶೆಟ್ಟಿ, ಆನಂದ ಪಾಟೀಲ್, ಪ್ರಕಾಶ ದಂಡೋತಿ, ಕವಿರಾಜ ನಿಂಬಾಳ್, ಮಹೇಶಕುಮಾರ ನಿಪ್ಪಾಣಿ, ವಾಣಿಶ್ರೀ ಜೋಶಿ, ಸಿದ್ದಣ್ಣ ದಿಗ್ಗಾವಿ, ಅಂಬರೀಷ ಕುಲಕರ್ಣಿ, ಕಾವೇರಿ ಹಿರೇಮಠ, ಅನ್ನಪೂರ್ಣ ಅವರು ಅನೇಕ ಹಾಡುಗಳನ್ನು ಹೇಳಿ ಸಭಿಕರನ್ನು ರಂಜಿಸಿದರು.

    ಕೋಟ್
    ಕಲ್ಯಾಣ ನಾಡು ಹಿಂದುಳಿದಿಲ್ಲ. ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಶ್ರೀಮಂತವಾಗಿದೆ. ಆದರೆ ಈ ಭಾಗದ ಪ್ರವಾಸಿ ತಾಣಗಳು ಕಡೆಗಣಿಸಲ್ಪಟ್ಟಿವೆ. ಈ ಭಾಗದಲ್ಲಿ ಸುತ್ತಾಡಿದಾಗ ತಮ್ಮ ಗಮನಕ್ಕೆ ಬಂದಿದೆ. ಈ ಭಾಗದ ಪರಂಪರೆ ನಾಡಿಗೆ ಪರಿಚಯಿಸುವ ಕೆಲಸ ಆಗಬೇಕು.
    ವಿ.ಮನೋಹರ,
    ಖ್ಯಾತ ಸಂಗೀತ ನಿರ್ದೇಶಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts