More

    ನಿವೇಶನ ಹಂಚಿಕೆ ವಿಳಂಬಕ್ಕೆ ಆಕ್ರೋಶ

    ಚಿತ್ರದುರ್ಗ: ನಿವೇಶನ ಹಂಚಿಕೆ ಮಾಡದೆಯೇ ವಿಳಂಬ ನೀತಿ ಅನುಸರಿಸುತ್ತಿರುವ, ಸ್ವಚ್ಛತಾ ಕಾರ್ಯಕ್ಕೆ ಅಡ್ಡಿಪಡಿಸುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

    ಅರ್ಹರಿಗೆ ತ್ವರಿತವಾಗಿ ನಿವೇಶನ ಕೊಡಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದಾಗಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

    ಜಿಲ್ಲೆಯ ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ಎಸ್ಸಿ ಕಾಲನಿಯ ನಿವಾಸಿಗಳು 1986ರಿಂದ ಈವರೆಗೂ ಕಾಲನಿಗೆ ಹೊಂದಿಕೊಂಡಿರುವ 5 ಎಕರೆ ಸರ್ಕಾರಿ ಜಮೀನಿನಲ್ಲಿ ವಾಸವಿದ್ದು, 2020ರ ನ. 6ರಂದು ಅಂದಿನ ಜಿಲ್ಲಾಧಿಕಾರಿ ಈ ಜಾಗವನ್ನು ಆಶ್ರಯ ಯೋಜನೆಯಡಿ ಪರಿವರ್ತಿಸಿ ನಿವೇಶನ ಹಂಚಿಕೆ, ಹಕ್ಕುಪತ್ರ ವಿತರಿಸಲು ಚಳ್ಳಕೆರೆ ತಹಸೀಲ್ದಾರ್, ಇಒ ಹಾಗೂ ಗ್ರಾಪಂ ಅಧಿಕಾರಿಗೆ ಸೂಚಿಸಿದ್ದರೂ ಯಾವುದೇ ಕ್ರಮವಹಿಸಿಲ್ಲ ಎಂದು ಅಳಲು ತೋಡಿಕೊಂಡರು.

    ನಿವೇಶನ ಅಭಿವೃದ್ಧಿ ಪಡಿಸಲು 5 ಲಕ್ಷ ರೂ. ಬಿಡುಗಡೆಯಾಗಿದೆ. 2023ರ ಡಿ. 8ರಂದು ಗ್ರಾಪಂ ಅಧಿಕಾರಿ, ಸಿಬ್ಬಂದಿ ಜೆಸಿಬಿ ಯಂತ್ರದಿಂದ ಸ್ವಚ್ಛಗೊಳಿಸುವ ವೇಳೆ ಇದೇ ಜಾಗದಲ್ಲಿ ತಾತ್ಕಾಲಿಕವಾಗಿ ಮನೆ ನಿರ್ಮಿಸಿಕೊಂಡಿರುವ ಕೆಲವರು ಅಡ್ಡಿಪಡಿಸಿದ್ದಾರೆ. ಅವಾಚ್ಯ ಶಬ್ಧಗಳಿಂದ ಫಲಾನುಭವಿಗಳನ್ನು ನಿಂದಿಸಿದ್ದಾರೆ. ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗಬೇಕು. ಅಲ್ಲಿರುವ ಮನೆಗಳನ್ನು ತೆರವುಗೊಳಿಸಿ, ನಿವೇಶನ ಹಂಚಿಕೆ ಮಾಡಬೇಕು ಎಂದು ಕೋರಿದರು.

    ಕಾಲನಿ ನಿವಾಸಿಗಳಾದ ಟಿ.ಪೆನ್ನಯ್ಯ, ಎಂ.ಮಂಜುಳಾ, ಜೆ.ಗೌರಮ್ಮ, ಮಲ್ಲಮ್ಮ, ಪೆನ್ನಯ್ಯ, ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts