More

    ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯ: ವೆಸ್ಕೊ ಕಂಪನಿ ಅಧಿಕಾರಿ ಬಿ.ಎಸ್.ಬೊಮ್ಮಯ್ಯ ಅಭಿಪ್ರಾಯ

    ಸಂಡೂರು:ಕಳೆದ 20 ವರ್ಷದಿಂದ ಸಂಡೂರು ಹೋಬಳಿಯ ಸರ್ಕಾರಿ ಪ್ರಾಥಮಿಕ ಶಾಲೆಗಳ 5541ಕ್ಕೂ ಹೆಚ್ಚು ಮಕ್ಕಳಿಗೆ ನೋಟ್ ಪುಸ್ತಕ, ಸ್ಕೂಲ್ ಬ್ಯಾಗ್, ಪೆನ್ ವಿತರಿಸಲಾಗುತ್ತಿದೆ ಎಂದು ವೆಸ್ಕೊ ಕಂಪನಿ ಅಧಿಕಾರಿ ಬಿ.ಎಸ್.ಬೊಮ್ಮಯ್ಯ ಹೇಳಿದರು.

    ಇದನ್ನೂ ಓದಿ: ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯ- ಗ್ರಾಪಂ ಕಾರ್ಯದರ್ಶಿ ಸಣ್ಣ ಜಂಬಣ್ಣ ಅನಿಸಿಕೆ


    ತಾಲೂಕಿನ ಸಿದ್ದಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವೆಸ್ಕೊ ಕಂಪನಿವತಿಯಿಂದ ಉಚಿತವಾಗಿ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಬುಧವಾರ ಮಾತನಾಡಿದರು. 8,9,10ನೇ ತರಗತಿ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಸಹ ಕಟ್ಟಲಾಗುತ್ತಿದೆ.

    ಇದಕ್ಕಾಗಿ ಪ್ರತಿ ವರ್ಷ 20 ಲಕ್ಷ ರೂ.ಗೂ ಅಧಿಕ ಖರ್ಚು ಮಾಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡಲಾಗುವುದು ಎಂದರು.


    ಕಂಪನಿಯ ಆಡಳಿತಾಧಿಕಾರಿ ಕೆ.ಎಸ್.ಚೆನ್ನಬಸಪ್ಪ ಮಾತನಾಡಿ, ಮಾಜಿ ಎಂಪಿ ದಿ.ಕೆ.ಎಸ್.ವೀರಭದ್ರಪ್ಪ ಈ ಪುಸ್ತಕ ವಿತರಣೆಯನ್ನು ಹಮ್ಮಿಕೊಂಡಿದ್ದರು. 16 ಶಾಲೆಗಳ ಪ್ರತಿಭಾ ಕಾರಂಜಿಗೆ ವೇದಿಕೆ ಸಿದ್ದಪಡಿದಲಾಗುವುದು ಎಂದು ಭರವಸೆ ನೀಡಿದರು.


    ಮುಖ್ಯ ಶಿಕ್ಷಕ ಟಿ.ಜಂಭಣ್ಣ ಮಾತನಾಡಿ, ತಮಿಳುನಾಡಿನಲ್ಲಿ ಕಲ್ಯಾಣ ಸುಂದರಂ ಎಂಬ ನೌಕರ 32 ಅನಾಥ ಶ್ರಮಗಳನ್ನು ನಡೆಸುತ್ತಿದ್ದನು. ಅಮೆರಿಕಾ ದೇಶದವರು ಆತನಿಗೆ 32 ಕೋಟಿ ರೂ. ಬಹುಮಾನವಾಗಿ ಕೊಟ್ಟರು.

    ಸಂಪೂರ್ಣ ಹಣವನ್ನು ಆ ವ್ಯಕ್ತಿ 32 ಅನಾಥ ಶ್ರಮಗಳಿಗೆ ನೀಡಿ, ಇತರರಿಗೆ ಮಾದರಿಯಾದನು ಎಂದರು. ಸಿಆರ್‌ಪಿ ಶೇಖರ್‌ಗೌಡ ಪಾಟೀಲ, ಶಿಕ್ಷಕಿ ಅನಿತಾ ಮಾತನಾಡಿದರು.


    ಕಂಪನಿಯ ವ್ಯವಸ್ಥಾಪಕ ಶಶಿಧರ್ ಮಂದಾನ, ಡಿ.ಎನ್.ಗಂಗಾಧರ, ನಾಗರಾಜ, ನಾಗಭೂಷಣ, ಶಿಕ್ಷಕರಾದ ರೇಶ್ಮಾ, ಎಸ್ಡಿಎಂಸಿ ಅಧ್ಯಕ್ಷೆ ಕರಡಿ ಲತಾ, ಉಪಾಧ್ಯಕ್ಷ ಎನ್.ಹುಲಿಕುಂಟೆಪ್ಪ, ಗ್ರಾಪಂ ಉಪಾಧ್ಯಕ್ಷ ಹುಲುಗಪ್ಪ, ಸದಸ್ಯ ಹೊನ್ನೂರಪ್ಪ, ದೌಲತ್‌ಪುರ ಶಾಲೆ ಮುಖ್ಯ ಶಿಕ್ಷಕ ನಾಗಪ್ಪ ದೇವರ ಮನೆ, ಸುಬಾನ್ ಸಾಬ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts