More

    ಜನಮತ | ಜನತಾ ಲಾಕ್​ಡೌನ್ ಒಂದೇ ಬದುಕುವ ದಾರಿ

    ಪ್ರಧಾನಿಯವರ ಕರೆಗೆ ಓಗೊಟ್ಟು ಇಡೀ ದೇಶ 22-3-20ರಂದು ಜನತಾ ಕರ್ಫವನ್ನು ಯಶಸ್ವಿಯಾಗಿ ಕೈಗೊಂಡಿತ್ತು. ನಾಯಕರಿಗೆ ಗೌರವ ಕೊಟ್ಟು ಅವರ ಕರೆಯನ್ನು ಒಂದು ಆಜ್ಞೆಯಂತೆ ನಮ್ಮ ಜನ ಸಮುದಾಯ ಪಾಲಿಸುತ್ತದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಮತ್ತೊಂದಿಲ್ಲ. ಇತ್ತೀಚಿಗೆ ಮಠಾಧೀಶರ ಕರೆಗೆ ಓಗೊಟ್ಟು ಕರೊನಾ ಭೀತಿಯನ್ನೂ ಕಡೆಗಣಿಸಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಆ ಸಮುದಾಯದವರು ಪಾಲ್ಗೊಂಡು ಪ್ರತಿಭಟನೆ ನ ಭೂತೋ ನ ಭವಿಷ್ಯತಿ ಎನ್ನುವಂತೆ ಯಶಸ್ವಿ ಮಾಡಿದರು. ಇನ್ನು, ರಾಜಕೀಯ ನಾಯಕರ ಕರೆಗಂತೂ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತದೆ. ರೈತ ಮುಖಂಡರ ಮಾತು ಎಂದರೆ ನಮ್ಮ ರೈತರು ಪಾಲಿಸಲು ಸಿದ್ಧ. ದೆಹಲಿ ಹೆದ್ದಾರಿಯಲ್ಲಿ ನೂರು ದಿನ ಪೂರೈಸಿ ಸಾಗಿರುವ ಪ್ರತಿಭಟನೆಯೇ ಇದಕ್ಕೆ ಸಾಕ್ಷಿ. ಕಾರ್ವಿುಕರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಇವರೆಲ್ಲ ಈ ಕರೊನಾ ಸಂಕಷ್ಟಕಾಲದಲ್ಲೂ ಅಂಜದ ಅಳುಕದೆ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಚಲನಚಿತ್ರಪ್ರೇಮಿಗಳಂತೂ ತಮ್ಮ ನಾಯಕ ಎಂದರೆ ಎಂತಹ ತ್ಯಾಗಕ್ಕೆ ಬೇಕಾದರೂ ತಯಾರು.

    ಈಗ ಕರೊನಾ ಎರಡನೇ ಅಲೆ ಮಹಾರಾಷ್ಟ್ರವನ್ನು ಅಪ್ಪಳಿಸಿ ಅಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ; ಐನೂರು ದಾಟದಿದ್ದ ಸೋಂಕು ಪ್ರಕರಣ ಸಾವಿರದಷ್ಟು ವರದಿಯಾಗುತ್ತಿವೆ. ಮಹಾರಾಷ್ಟ್ರದಂತೆ ನಮ್ಮಲ್ಲಿಯೂ ಇನ್ನಷ್ಟು ಹೆಚ್ಚಿದರೂ ಅಚ್ಚರಿಯಿಲ್ಲ.

    ಇದನ್ನು ಗಂಭೀರವಾಗಿ ತೆಗೆದುಕೊಂಡು ನಮ್ಮ ವಿವಿಧ ಸಮುದಾಯದ ನಾಯಕರು ತಮ್ಮ ಜಾತಿ ವರ್ಗ ಪಕ್ಷದವರಿಗೆ ಈ ಕರೊನಾ ರುದ್ರರೂಪದಿಂದ ಒದಗಲಿರುವ ಸಂಕಷ್ಟಗಳನ್ನು ಮನದಟ್ಟು ಮಾಡಿ ಅತ್ಯಂತ ಸುಲಭ, ಅನುಷ್ಠಾನ ಮಾಡಲು ಸಾಧ್ಯವಾಗಿರುವ ಮಾಸ್ಕ್ ಧಾರಣ ಮತ್ತು ಅಂತರ ಕಾಯ್ದುಕೊಳ್ಳುವಂತೆ ಕರೆ ಕೊಟ್ಟರೆ ಈ ಕರೊನಾವನ್ನು ಸುಲಭವಾಗಿ ದೂರ ಇಡಬಹುದು. ಇದು ಸರ್ಕಾರಕ್ಕೆ ಖಂಡಿತ ಸುಲಭವಲ್ಲ. ಈ ಸ್ವ ಹೇರಿಕೆಯ ಜನತಾ ಲಾಕ್​ಡೌನ್ ನಮ್ಮ ಸಮೂಹದ ನಾಯಕರ ಜನಪರ ಕಾಳಜಿಯನ್ನು ಅವಲಂಬಿಸಿದೆ. ನಾಯಕರು ಇದನ್ನು ಅರ್ಥಮಾಡಿಕೊಂಡು ತಮ್ಮ ಸಮುದಾಯಕ್ಕೆ, ಪಕ್ಷದ ಕಾರ್ಯಕರ್ತರಿಗೆ, ಕಾರ್ವಿುಕರಿಗೆ, ರೈತಬಂಧುಗಳಿಗೆ, ಚಿತ್ರಅಭಿಮಾನಿಗಳಿಗೆ ನಿಯಮ ಪಾಲಿಸುವಂತೆ ದೃಢವಾಗಿ ಕರೆ ಕೊಡಲಿ. ನಮ್ಮ ಶಾಸಕರೂ ಕರೊನಾ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಲಿ

    | ಸತ್ಯಬೋಧ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts