More

    ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ದುರಂತ

    ಹುಬ್ಬಳ್ಳಿ: ಚಲಿಸುತ್ತಿದ್ದ ಬಿಆರ್​ಟಿಎಸ್ ಚಿಗರಿ ಬಸ್ ಚಾಲಕನಿಗೆ ತಲೆಸುತ್ತು ಬಂದು ಆತ ಹೇಗೋ ಸಾವರಿಸಿಕೊಂಡು ವಾಹನ ನಿಲ್ಲಿಸಿ ಕುಸಿದು ಬಿದ್ದ ಘಟನೆ ಇಲ್ಲಿಯ ನವನಗರದ ಫ್ಲೈ ಓವರ್ ಬಳಿ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದುರಂತ ತಪ್ಪಿದೆ. 40ಕ್ಕೂ ಹೆಚ್ಚು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಚಿಗರಿ ಬಸ್ ಚಾಲಕ, ನವಲಗುಂದ ಮೂಲದ ಎ.ಎಂ. ಸುಣದಾಳ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದರು. ನವನಗರ ಫ್ಲೈ ಓವರ್ ಮೇಲೆ ಬರುತ್ತಿದ್ದಂತೆ ಸುಣದಾಳ ಅವರಿಗೆ ಏಕಾಏಕಿ ತಲೆಸುತ್ತು ಬಂದಿತು. ಬಸ್ ವೇಗವಾಗಿದ್ದರೂ ಎದೆಗುಂದದೆ ಸಾವರಿಸಿಕೊಂಡು ನಿಧಾನವಾಗಿ ಬಸ್ ನಿಲ್ಲಿಸುತ್ತಿದ್ದಂತೆ ಸೀಟ್ ಪಕ್ಕದಲ್ಲಿ ಕುಸಿದು ಬಿದ್ದಿದ್ದರು.

    ಕೂಡಲೆ ಎಚ್ಚೆತ್ತುಕೊಂಡ ಕೆಲ ಪ್ರಯಾಣಿಕರು ಸುಣದಾಳ ಅವರನ್ನು ಎತ್ತಿ ಕೂರಿಸಿ ಮುಖಕ್ಕೆ ನೀರು ಚಿಮುಕಿಸಿ ಎಚ್ಚರಿಸಿದರು. ನಂತರ ನೀರು ಕುಡಿಸಿ ಸಮಾಧಾನಪಡಿಸಿದರು. ಬಳಿಕ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ಸಾರಿಗೆ ಬಸ್ ಚಾಲಕ-ನಿರ್ವಾಹಕರು ಆಗಮಿಸಿ ಸುಣದಾಳ ಅವರನ್ನು ಕಿಮ್ಸ್​ಗೆ ಕರೆದೊಯ್ದರು. ಪ್ರಯಾಣಿಕರನ್ನು ಬೇರೆ ಬಸ್​ನಲ್ಲಿ ಹುಬ್ಬಳ್ಳಿ ತಲುಪಿಸಿದರು.

    ಈ ದೃಶ್ಯ ಚಿಗರಿ ಬಸ್​ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಚಾಲಕನ ಸಮಯಪ್ರಜ್ಞೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಮಧುಮೇಹ ಸಮಸ್ಯೆ

    ಮಧುಮೇಹದಿಂದ ಬಳಲುತ್ತಿದ್ದ ಸುಣದಾಳ ಬಸ್ ಚಾಲನೆಯ ವೇಳೆಯೇ ತಲೆಸುತ್ತು ಬಂದಿದೆ. ಆದರೂ ಅವರು ಎಚ್ಚರಿಕೆಯಿಂದ ಬಸ್ ನಿಲ್ಲಿಸುವ ಮೂಲಕ ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಿದ್ದಾರೆ. ಕೂಡಲೆ ಅವರನ್ನು ಕಿಮ್ಸ್​ಗೆ ದಾಖಲಿಸಲಾಗಿತ್ತು. ಸದ್ಯ ಅವರು ಆರೋಗ್ಯದಿಂದಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ನಗರ ಸಾರಿಗೆ ಡಿಸಿ ವಿವೇಕಾನಂದ ವಿಶ್ವಜ್ಞ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts