More

    ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಲು ಆಗ್ರಹ

    ಸವದತ್ತಿ, ಬೆಳಗಾವಿ: ಷರತ್ತು ವಿಧಿಸದೆ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಇಲ್ಲಿನ ಗ್ರೇಡ್-2 ತಹಸೀಲ್ದಾರ್ ಎಂ.ವಿ. ಗುಂಡಪ್ಪಗೋಳ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

    ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವೈ. ಬಿಜ್ಜೂರ ಮಾತನಾಡಿ, ಖಾಸಗಿ ಬ್ಯಾಂಕ್ ಮತ್ತು ೈನಾನ್ಸ್ ಗಳಲ್ಲಿ ಖಾಲಿ ಚೆಕ್‌ಗಳ ಮೇಲೆ ರೈತರ ಸಹಿ ಪಡೆದು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಹಿಂಸಿಸುತ್ತಿದ್ದಾರೆ. ಇದು ರೈತರ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ. ರೈತರ ಮೇಲಿರುವ ದಾವೆ ಹಿಂಪಡೆದು ಚೆಕ್‌ಬೌನ್ಸ್ ಪ್ರಕರಣ ದಾಖಲಿಸದಂತೆ ಕ್ರಮವಹಿಸಬೇಕು. ಜತೆಗೆ ಖಾಲಿ ಚೆಕ್ ಮೇಲೆ ಸಹಿ ಹಾಕಿಸಿಕೊಳ್ಳುವ ವ್ಯವಸ್ಥೆ ನಿಲ್ಲಬೇಕು ಎಂದರು.

    ಮುಂಗಾರು ಮತ್ತು ಹಿಂಗಾರು ಬೆಳೆಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು. ಬೆಳೆ ಕಟಾವಿಗೆ ಬಂದ ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು. ಖರೀದಿ ಕೇಂದ್ರದಲ್ಲಿ 6 ತಿಂಗಳು ಕಾಲ ಖರೀದಿಸುವಂತಾಗಬೇಕು. ಮಹದಾಯಿ ಹಾಗೂ ಕಳಸಾ ಬಂಡೂರಿ ತಿರುವು ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದರು.

    ಸುಜಾತ ಗೊಡಚಿ, ರಮೀಜಾ ಪತ್ತುನಾಯಕ, ಶಂಕರಗೌಡ ರಾಯನಗೌಡ್ರ, ಟಿ.ಎ್. ಕೊಪ್ಪದ, ಶಂಕರ ಹಿತ್ತಲಮನಿ, ಡಿ.ಎಂ. ಮಾದರ, ವಿ.ಬಿ. ಅಂಗಡಿ, ವಿ.ಎಸ್. ಮಾದರ, ಈರವ್ವ ಗಡೇಕಾರ, ಸಿದ್ದವ್ವ ಮುರಗನ್ನವರ, ಕರಿನೇಶಿ ಮ್ಯಾಗೇರಿ, ಬಸಯ್ಯ ಹಿರೇಮಠ, ಬಸಯ್ಯ ನಂದೆನ್ನವರ, ಹನುಮಂತ ನರಗುಂದ, ಸಿದ್ದು ಮಾದರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts