More

    ಉಪನಯನ ಕಾರ್ಯವು ಧಾರ್ಮಿಕ ಪರಂಪರೆ

    ಮುನವಳ್ಳಿ, ಬೆಳಗಾವಿ: ಪಟ್ಟಣದ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಸವದತ್ತಿ ತಾಲೂಕು ವಿಶ್ವಕರ್ಮ ಸಮುದಾಯದ ವತಿಯಿಂದ ಕಾಳಿಕಾದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸರ್ವಧರ್ಮ ಸಾಮೂಹಿಕ ಉಚಿತ ಉಪನಯನ ಕಾರ್ಯಕ್ರಮದಲ್ಲಿ 35 ವಟುಗಳ ಸಾಮೂಹಿಕ ಉಪನಯನ ಶುಕ್ರವಾರ ಜರುಗಿತು.

    ದಿವ್ಯಸಾನ್ನಿಧ್ಯ ವಹಿಸಿದ್ದ ಚಿಕ್ಕುಂಬಿ ಅಜಾತ ನಾಗಲಿಂಗೇಶ್ವರಮಠದ ಅಭಿನವ ನಾಗಲಿಂಗ ಸ್ವಾಮೀಜಿ ಮಾತನಾಡಿ, ಉಪನಯನ ಒಂದು ಧಾರ್ಮಿಕ ವಿಧಿವಿಧಾನದಿಂದ ಕೂಡಿದ್ದು, ಮದುವೆಗಿಂತ ಮೊದಲು ಮಾಡಬೇಕಾದ ಮಹತ್ವದ ಕಾರ್ಯವಾಗಿದೆ. ಉಪನಯನ ಮಾಡದಿದ್ದರೆ ಮುಂದಿನ ಯಾವುದೇ ಶುಭ ಸಮಾರಂಭ ಹಾಗೂ ಮದುವೆ ಮಾಡಲು ಬರುವುದಿಲ್ಲ. ಇದು ಸಂಪ್ರದಾಯ ಪರಂಪರೆಯಿಂದ ನಡೆದು ಬಂದ ಧಾರ್ಮಿಕ ಕಾರ್ಯವಾಗಿದೆ. ಸಾಮೂಹಿಕ ಉಪನಯನದ ನಂತರ ವಟುಗಳಿಗೆ ಸಂಪ್ರದಾಯದ ಸಂಸ್ಕಾರ ನೀಡುವ ಶಿಬಿರವನ್ನು ವಿಶ್ವಕರ್ಮ ಸಮುದಾಯ ಆಯೋಜಿಸಬೇಕು ಎಂದರು.

    ಯರಗಟ್ಟಿಯ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು ಮಾತನಾಡಿದರು. ಕಾಳಿಕಾದೇವಿ ಜಾತ್ರೆ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರ ಪೂಜೆ, ಪಲ್ಲಕ್ಕಿ ಉತ್ಸವ, ಕಾರ್ತಿಕೋತ್ಸವ ಹಾಗೂ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.

    ಸಿದ್ದಯ್ಯ ವಡೆಯರ, ಸಂಗಯ್ಯ ದಾನಯ್ಯ ವಡೆಯರ, ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೌನೇಶ ಮಾಯಾಚಾರಿ, ಸದಸ್ಯರಾದ ವಿನಾಯಕ ಪತ್ತಾರ, ಗುರುನಾಥ ಪತ್ತಾರ, ಮೌನೇಶ ಬಡಿಗೇರ, ಕಾಳಪ್ಪ ಬಡಿಗೇರ, ಮಂಜುನಾಥ ಬಡಿಗೇರ, ಬಸವರಾಜ ಪತ್ತಾರ, ಈರಣ್ಣ ಪತ್ತಾರ, ನಾರಾಯಣ ಕಮ್ಮಾರ, ಅರ್ಜುನ ಬಡಿಗೇರ, ಜಗದೀಶ ಬಡಿಗೇರ, ನಾಗರಾಜ ಬಡಿಗೇರ, ನಾಗು ಹಿರೂರ,
    ಅಶೋಕ ಬಡಿಗೇರ, ರಮೇಶ ಬಡಿಗೇರ, ಮಂಜುನಾಥ ಶಹಾಪುರ, ಮಹಾಂತೇಶ ಬಡಿಗೇರ, ಅರ್ಚಕ ಶಂಕರಾಚಾರ್ಯ, ಮಂಜುನಾಥಚಾರ್ಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts