Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ಹೊಸ ವರ್ಷದ ಸಂಭ್ರಮಕ್ಕೆ ಸೂತಕ

Monday, 02.01.2017, 3:13 AM       No Comments

ಬೆಂಗಳೂರು/ಮಂಡ್ಯ: ನೂತನ ವರ್ಷವನ್ನು ಸ್ವಾಗತಿಸುವ ಸಂಭ್ರಮದಲ್ಲಿ ಕುಡಿದ ಅಮಲಿನಲ್ಲಿ ಗಲಾಟೆ, ಅಪಘಾತ, ರಾಜಕೀಯ ವೈಷಮ್ಯದ ಹತ್ಯೆ ಸೇರಿ ವಿವಿಧ ಪ್ರಕರಣಗಳಲ್ಲಿ ರಾಜ್ಯಾದ್ಯಂತ 12 ಜನ ಮೃತಪಟ್ಟಿದ್ದು, ವರ್ಷಾಚರಣೆ ಸಂತಸಕ್ಕೆ ಸೂತಕದ ಛಾಯೆ ಆವರಿಸಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತ ಹರೀಶ್ ಅಲಿಯಾಸ್ ಗುಂಡ (30) ಎಂಬಾತನ ಕೊಲೆಯಾಗಿದೆ. ಶನಿವಾರ ರಾತ್ರಿ ಹೊಸ ವರ್ಷದ ಸಂಭ್ರಮ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ದುಷ್ಕರ್ವಿುಗಳು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಸುದ್ದಿ ತಿಳಿದು ಜಮಾಯಿಸಿದ ಉದ್ರಿಕ್ತರು 2 ಮನೆ, 1 ಎತ್ತಿನಗಾಡಿ, 1 ಟಾಟಾ ಎಸಿ, 1 ಅಶೋಕ್ ಲೆಲ್ಯಾಂಡ್ ವಾಹನಕ್ಕೆ ಬೆಂಕಿ ಹಚ್ಚಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ವಣವಾಗಿದೆ. ಗ್ರಾಪಂ, ತಾಪಂ ಚುನಾವಣೆ ಮತ್ತು ಗ್ರಾಮದೇವತೆ ಹಬ್ಬದ ಸಂದರ್ಭ 2 ಗುಂಪುಗಳ ನಡುವೆ ಸಣ್ಣಪುಟ್ಟ ಜಗಳವಾಗಿತ್ತು. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿತ್ತು. 2 ಗುಂಪಿನ ನಡುವಿನ ವೈಮನಸ್ಸು ಕೊಲೆಗೆ ಕಾರಣ ಎನ್ನಲಾಗಿದೆ. ಗ್ರಾಮದಲ್ಲಿ 6 ಕೆಎಸ್​ಆರ್​ಪಿ, 7 ಡಿಎಆರ್ ತುಕಡಿ ಮತ್ತು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಅಪಘಾತದಲ್ಲಿ ವಿದ್ಯಾರ್ಥಿ ಸಾವು: ಮುರುಕನಹಳ್ಳಿ ಗ್ರಾಮದ ಇಂಜಿನಿಯರಿಂಗ್ ವಿದ್ಯಾರ್ಥಿ ಚೇತನ್(20) ಶ್ರವಣಬೆಳಗೊಳ ರಸ್ತೆಯ ಹೊಸಹಳ್ಳಿ ಕ್ರಾಸ್​ನಲ್ಲಿ ಮಧ್ಯರಾತ್ರಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಚೇತನ್ ಶ್ರವಣಬೆಳಗೊಳದ ಬಾಹುಬಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ.

ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಬಲಿ: ಮದ್ದೂರು ತಾಲೂಕು ಶಿವಪುರದ ಬಳಿ ಸೇತುವೆಯಿಂದ ಕೆಳಗೆ ಕಾರು ಬಿದ್ದು ಒಬ್ಬ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ. ಪತ್ರಕರ್ತ ಅಕ್ಮಲ್​ಪಾಷಾ(44) ಮೃತ. ಸ್ನೇಹಿತರಾದ ಲೋಕೇಶ್, ಹರೀಶ್, ಅಭಿನಂದನ್ ಗಾಯಗೊಂಡಿದ್ದಾರೆ. ಮಳವಳ್ಳಿ ತಾಲೂಕು ಹಲಗೂರು ಸಮೀಪ ಶಿಂಷಾ ನದಿ ಸೇತುವೆ ತಿರುವಿನಲ್ಲಿ ಕಾರು ಪಲ್ಟಿಯಾಗಿ ಬೆಂಗಳೂರು ಬನಶಂಕರಿಯ ಪ್ರಶಾಂತ್ (25) ಮೃತಪಟ್ಟಿದ್ದು, ಸ್ನೇಹಿತರಾದ ಉಮೇಶ್, ಶಶಾಂಕ್ ಮತ್ತು ನಟರಾಜ್ ಗಾಯಗೊಂಡಿದ್ದಾರೆ. ಶ್ರೀರಂಗಪಟ್ಟಣ ಹೊರವಲಯದ ಸಾಯಿಬಾಬಾ ಮಂದಿರದ ಬಳಿ ಬೈಕ್​ಗೆ ಹಿಂಬಂದಿಯಿಂದ ಕಾರು ಡಿಕ್ಕಿ ಹೊಡೆದು ಬೈಕ್​ನಲ್ಲಿದ್ದ ಬಾಬುರಾಯನಕೊಪ್ಪಲು ಗ್ರಾಪಂ ಸದಸ್ಯ ಶೇಷೇಗೌಡ (59) ಹಾಗೂ ಶ್ರೀಧರ್ (50) ಮೃತಪಟ್ಟಿದ್ದಾರೆ.

ಕ್ಷುಲ್ಲಕ ಜಗಳ ಸಾವಿನಲ್ಲಿ ಅಂತ್ಯ

ಮಳವಳ್ಳಿ ತಾಲೂಕು ಹೊಸಹಳ್ಳಿಯಲ್ಲಿ ಪಾರ್ಟಿ ಮಾಡುತ್ತಿದ್ದ ಇಬ್ಬರು ಸ್ನೇಹಿತರ ನಡುವೆ ಜಗಳ ನಡೆದು, ಹೊಡೆದಾಟ ಆಗಿದೆ. ತೀವ್ರ ಗಾಯಗೊಂಡಿದ್ದ ಮಹೇಶ್​ನನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗದೆ ಮೃತಪಟ್ಟಿದ್ದಾನೆ. ಸ್ನೇಹಿತನ ಸಾವಿನ ಸುದ್ದಿ ತಿಳಿದ ರಾಜೇಶ್ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಿದ್ರೆ ಮಂಪರು ತಂದ ಸಾವು

ವರ್ಷಾಚರಣೆ ಹಿನ್ನೆಲೆ ನಂದಿಬೆಟ್ಟದಲ್ಲಿ ಭಾನುವಾರ ಸೂರ್ಯೋದಯ ಕಂಣ್ತುಂಬಿಕೊಂಡು ಬರುತ್ತಿದ್ದ ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದ ಕಾರು ನಿದ್ರೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ ಕ್ಯಾಬ್​ಗೆ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಆಸ್ಟಿನ್​ಟೌನ್ ನಿವಾಸಿಗಳಾದ ಕಿಶೋರ್(21) ಮತ್ತು ಸಂತೋಷ್(21) ಮೃತರು. ಆದಿತ್ಯ, ಪ್ರೀತಮ್ ಎಲ್ವಿನ್, ಅಭಯ್ ಮತ್ತು ಕ್ಯಾಬ್ ಚಾಲಕ ಮಂಜುನಾಥ್ ಎಂಬುವರು ಗಾಯಗೊಂಡಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಭಾನುವಾರ ಸೂರ್ಯೋದಯ ನೋಡಲು ಸ್ವಿಫ್ಟ್ ಕಾರಿನಲ್ಲಿ ನಂದಿಬೆಟ್ಟಕ್ಕೆ ತೆರಳಿ ಮನೆಗೆ ವಿದ್ಯಾರ್ಥಿಗಳು ವಾಪಸಾಗುತ್ತಿದ್ದರು ಎನ್ನಲಾಗಿದೆ. ನಿದ್ರೆ ಮಂಪರಿನಲ್ಲಿ ಕಿಶೋರ್ ಕಾರು ಚಲಾಯಿಸುತ್ತಿದ್ದರಿಂದ ನಿಯಂತ್ರಣ ತಪ್ಪಿದೆ. ವಿದ್ಯಾರ್ಥಿಗಳು ಮದ್ಯ ಸೇವನೆ ಮಾಡಿರುವುದು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೋಜು-ಮಸ್ತಿಗೆ ಓರ್ವ ಬಲಿ

ಬೆಳಗಾವಿ: ಹೊಸ ವರ್ಷಾಚರಣೆ ಮೋಜು-ಮಸ್ತಿ ಮಾಡಲು ಹೋಗಿ ಭಾನುವಾರ ಶನಿವಾರ ರಾತ್ರಿ ನಗರದ ಹಲವೆಡೆ ನಡೆದ ರಸ್ತೆ ಅಪಘಾತಗಳಲ್ಲಿ ಓರ್ವ ಮೃತಪಟ್ಟಿದ್ದು, 20ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಬೆಳಗಾವಿಯ ಉದ್ಯಮಬಾಗ್ ಬಳಿ ಲಾರಿ-ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮಜಗಾವಿಯ ಗಂಗಾಯಿ ಗಲ್ಲಿ ನಿವಾಸಿ ಶಂಕರ ದಶರಥ ಸುತಾರ (30) ಮೃತಪಟ್ಟಿದ್ದಾರೆ.

ಯುವಕ ನೀರುಪಾಲು

ಕನಕಪುರ(ರಾಮನಗರ): ಹೊಸ ವರ್ಷಾಚರಣೆಗೆಂದು ಸಂಗಮಕ್ಕೆ ಭಾನುವಾರ 12 ಮಂದಿ ಸ್ನೇಹಿತರೊಡನೆ ಬೆಂಗಳೂರಿನಿಂದ ಬಂದಿದ್ದ ಗೌತಮ್26) ಈಜಾಡು ವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೂಲತಃ ಮಾಲೂರು ತಾಲೂಕು ಚಿಕ್ಕ ಇಗ್ಗಲೂರು ಗ್ರಾಮದ ಈತ ಬೆಂಗಳೂರಿನ ಕಾಲೇಜೊಂದರ ಎಂ.ಎ. ವಿದ್ಯಾರ್ಥಿ.

ಗುಂಡೇಟಿನಿಂದ ಯುವಕನಿಗೆ ಗಾಯ

ಕುಶಾಲನಗರ: ಹೊಸ ವರ್ಷದ ಸಂಭ್ರಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಗುಂಡಿನ ದಾಳಿ ನಡೆದಿದೆ. ಗುಡ್ಡೆ ಹೊಸೂರು ಬಳಿ ನಡೆದ ದಾಳಿಯಲ್ಲಿ ಮೈಸೂರು ಮೂಲದ ಕಿರಣ್(25) ಎಂಬಾತನ ಕಾಲಿಗೆ ಗಂಭೀರ ಗಾಯವಾಗಿದೆ. ಕಿರಣ್ ಸ್ನೇಹಿತರೊಂದಿಗೆ ರಾತ್ರಿ ದುಬಾರೆಗೆ ತೆರಳಿ ಕಾರಿನಲ್ಲಿ ವಾಪಸಾಗುತ್ತಿದ್ದಾಗ ಗುಡ್ಡೆಹೊಸೂರು ಬಳಿ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿದೆ. ಈ ಸಂಬಂಧ ಎರಡು ಗುಂಪಿನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ವ್ಯಕ್ತಿಯೊಬ್ಬ ತನ್ನ ಬಳಿಯಿದ್ದ ಪಾಯಿಂಟ್ 22 ಗನ್​ನಿಂದ ಗುಂಡು ಹಾರಿಸಿದ್ದಾನೆ. ಅದು ಕಿರಣ್​ನ ಕಾಲಿಗೆ ತಗಲಿದ್ದು, ತೀವ್ರ ಗಾಯಗೊಂಡಿದ್ದಾನೆ. ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟರ್ಕಿಯಲ್ಲಿ ಉಗ್ರರ ಅಟ್ಟಹಾಸ

Leave a Reply

Your email address will not be published. Required fields are marked *

Back To Top