Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಹೊಲವನ್ನೇ ಮೇಯ್ದ ಬೇಲಿ!

Wednesday, 13.09.2017, 3:00 AM       No Comments

ರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್​ಒಯು)ದ ಕರ್ಮಕಾಂಡಗಳ ಯಾದಿಗೆ ಹೊಸ ಅಧ್ಯಾಯಗಳ ಸೇರ್ಪಡೆಯಾಗುತ್ತಿರುವುದಕ್ಕೆ ಏನನ್ನುವುದೋ ತಿಳಿಯುತ್ತಿಲ್ಲ. ವ್ಯಾಪ್ತಿ ಮೀರಿ ಕಾರ್ಯಾಚರಿಸಿದ್ದು ಮತ್ತಿತರ ಕಾರಣಕ್ಕಾಗಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ)ದ ಮಾನ್ಯತೆ ಕಳೆದುಕೊಂಡು ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಸದರಿ ವಿವಿ, ಒಂದು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿಗಳನ್ನು ನೀಡಿರುವುದು ಮತ್ತು ಅಂಕಪಟ್ಟಿ ಪಡೆದಿರುವ ವಿದ್ಯಾರ್ಥಿಗಳಿಂದ ಪಡೆಯಲಾಗಿದ್ದ ಪ್ರವೇಶಶುಲ್ಕದ ಹಣ ವಿವಿಗೆ ಪಾವತಿಯೇ ಆಗಿಲ್ಲದಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯೇ ಸರಿ. ವಿದ್ಯಾರ್ಥಿಗಳನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ನಡೆಸಬೇಕಾದ ಜ್ಞಾನದೇಗುಲ ವ್ಯವಸ್ಥೆಯೇ ಇಂಥದೊಂದು ಕರ್ಮಕಾಂಡದಲ್ಲಿ ಸಿಲುಕಿರುವುದು ‘ಬೇಲಿಯೇ ಎದ್ದು ಹೊಲ ಮೇಯ್ದಂತೆ‘ ಎಂಬ ಜಾಣನುಡಿಯನ್ನು ನೆನಪಿಸುವಂತಿದೆ ಎನ್ನದೆ ವಿಧಿಯಿಲ್ಲ. ಜತೆಗೆ, ಶಿಕ್ಷಣ ವ್ಯವಸ್ಥೆಯಲ್ಲಿ ಸಾರ್ವಜನಿಕರು ವಿಶ್ವಾಸವನ್ನೇ ಕಳೆದುಕೊಳ್ಳುವುದಕ್ಕೆ ಇಂಥ ಬೆಳವಣಿಗೆಗಳು ಕಾರಣವಾಗುತ್ತವೆ ಎಂದರೆ ಅತಿಶಯೋಕ್ತಿಯಾಗಲಾರದು.

ವಿವಿಯ ಇಂಥ ಹಗರಣಗಳಿಂದಾಗಿ ವಿದ್ಯಾರ್ಥಿಗಳು ಎದುರಿಸಬೇಕಾಗಿ ಬರುವ ಹಲವು ನೆಲೆಗಟ್ಟಿನ ಸಮಸ್ಯೆಗಳೂ ಇಲ್ಲಿ ಉಲ್ಲೇಖನೀಯ. ಭವಿಷ್ಯದ ಕುರಿತು ಆತಂಕಿತರಾಗಿರುವ ಗಣನೀಯ ಸಂಖ್ಯೆಯ ವಿದ್ಯಾರ್ಥಿಗಳು, ತಮ್ಮದಲ್ಲದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಬೇಕಾಗಿ ಬಂದಿದೆ, ಅಕ್ಷರಶಃ ಅಡಕತ್ತರಿಯಲ್ಲಿ ಸಿಲುಕುವಂತಾಗಿದೆ. ಕಾರಣ, ವಿಶ್ವವಿದ್ಯಾಲಯಕ್ಕೆ ತಗುಲಿಕೊಂಡಿರುವ ಅಮಾನ್ಯತೆಯ ಹಣೆಪಟ್ಟಿ ಹಾಗೂ ಈ ಹೊಸ ಕರ್ಮಕಾಂಡದ ಕಳಂಕ. ವಿದ್ಯಾಭ್ಯಾಸ ಮುಗಿಸಿ, ಕೈನಲ್ಲಿ ಅಂಕಪಟ್ಟಿಯಿದ್ದರೂ, ಅದು ಅನ್ನದ ದಾರಿಗೆ ಪೂರಕವಾಗಿ ಪರಿಣಮಿಸದಿರುವುದು, ತತ್ಪರಿಣಾಮವಾಗಿ ಅವರ ನಿರುದ್ಯೋಗಪರ್ವ ಅಬಾಧಿತವಾಗಿರುವುದು ಮುಕ್ತ ವಿವಿಯ ‘ರಂಗ್​ಬಿರಂಗಿ‘ ಚಟುವಟಿಕೆಗಳಿಂದಾದ ವ್ಯತಿರಿಕ್ತ ಪರಿಣಾಮಗಳಿಗೆ ಸಾಕ್ಷಿ.

ಇದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡರ ವ್ಯಾಪ್ತಿಗೆ ಬರುವ ವಿಷಯ. ಇಷ್ಟಾಗಿಯೂ ಈ ವಿಷಯದಲ್ಲಿ ಅಗತ್ಯ ಕ್ರಮಕ್ಕೆ ಮುಂದಾಗದೆ ಸಂಬಂಧಪಟ್ಟವರು ಜಾಣಮೌನ ವಹಿಸಿರುವುದು ವಿಷಾದನೀಯ. ಜನಹಿತದ, ಅದರಲ್ಲೂ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಬಂದಾಗ ರಾಜಕೀಯ ಅಭಿಪ್ರಾಯಭೇದಗಳನ್ನು ಪಕ್ಕಕ್ಕಿಟ್ಟು ವ್ಯವಹರಿಸಬೇಕಾಗುತ್ತದೆ. ಆಳುಗರ ಲಗಾಮಿನ ಹಗ್ಗ ಸಡಿಲವಾದದ್ದು ಸದರಿ ವಿಶ್ವವಿದ್ಯಾಲಯದಲ್ಲಿ ವಿವಿಧ ತೆರನಾದ ಅಕ್ರಮ ಮತ್ತು ಲೂಟಿಗೆ ಕಾರಣವಾಗಿದೆ. ಇದಕ್ಕೆಲ್ಲ ವಿನಿಯೋಗವಾಗುವುದು ತೆರಿಗೆದಾರರ ಪರಿಶ್ರಮದ ಹಣ ಎಂಬುದನ್ನು ಗಮನದಲ್ಲಿಟ್ಟುಕೊಂಡಾದರೂ ಈ ಸಮಸ್ಯೆಗೊಂದು ರ್ತಾಕ ಪರಿಹಾರೋಪಾಯ ಕಂಡುಕೊಳ್ಳಬೇಕಿದೆ ಮತ್ತು ಈ ಅಕ್ರಮದಲ್ಲಿ ಕೈಜೋಡಿಸಿರುವ ಎಲ್ಲರಿಗೂ ಶಿಕ್ಷೆಯಾಗಬೇಕಿದೆ. ವಿವಿಯ ಅಕ್ರಮಗಳ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದಾಗಲೆಲ್ಲ, ಮಾನ್ಯತೆಯ ಬಗೆಗಿನ ಮಾತುಕತೆಗೆ ವೇಗತುಂಬುವ ‘ಸ್ವಹಿತಾಸಕ್ತರ‘ ಸಂಚಿಗೆ ಪರಿಣಾಮಕಾರಿಯಾದ ಮದ್ದು ಅರೆಯಬೇಕಿದೆ. ವಿವಿ ನಿಯಮಾವಳಿ ಪ್ರಕಾರ ಪ್ರವೇಶ ಪಡೆಯದ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರ ನೀಡಿರುವ 6 ಪ್ರಮುಖ ಕೊಲಾಬರೇಟರ್ ಸಂಸ್ಥೆಗಳನ್ನೂ ತನಿಖೆಗೆ ಒಳಪಡಿಸಬೇಕಾಗಿದೆ. ಕರ್ನಾಟಕ ರಾಜ್ಯ ‘ಮುಕ್ತ‘ ವಿಶ್ವವಿದ್ಯಾಲಯವು ‘ಹಗರಣ-ಮುಕ್ತ‘ ವಿಶ್ವವಿದ್ಯಾಲಯ ಎನಿಸಿಕೊಳ್ಳಬೇಕೆಂದಾದಲ್ಲಿ ಇಂಥದೊಂದು ಕಟ್ಟುನಿಟ್ಟಿನ ಕ್ರಮ ಅನಿವಾರ್ಯ. ಸದರಿ ವಿವಿಗೆ ಯುಜಿಸಿ ಮಾನ್ಯತೆ ಕೈತಪು್ಪವಂತಾದುದಕ್ಕೆ ಕಾರಣವಾದ ಅಂಶಗಳ ಜಾಡುಹಿಡಿದು, ಅದನ್ನು ಮರಳಿ ದಕ್ಕಿಸಿಕೊಳ್ಳಲು ಸಮರೋಪಾದಿಯಲ್ಲಿ ಯತ್ನಗಳಾಗಬೇಕಾದ್ದು ಸದ್ಯದ ತುರ್ತ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿರುವುದು ಹೌದಾದರೂ, ಉದ್ದೇಶ ಈಡೇರಿಕೆಗೆ ಬೆಂಬಿಡದ ಅನುಸರಣಾ ಕ್ರಮಗಳೂ ಅಗತ್ಯವಾಗುತ್ತವೆ.

Leave a Reply

Your email address will not be published. Required fields are marked *

Back To Top