Monday, 19th February 2018  

Vijayavani

ನನ್ನ ಮಗನನ್ನ ನಾನೇ ಸರೆಂಡರ್​ ಮಾಡಿಸುತ್ತೇನೆ - ಪೊಲೀಸರಿಗೆ ಶೀಘ್ರವೇ ಒಪ್ಪಿಸುತ್ತೇನೆ - ಗೂಂಡಾ ನಲಪಾಡ್​​ ಕುರಿತು ಹ್ಯಾರಿಸ್​ ಪ್ರತಿಕ್ರಿಯೆ        ನಿನ್ನೆ ಚಿಕ್ಕವನು.. ಇಂದು ಬೆಳೆದ ಮಗ - ಬೈದ ನಂತರ ಮೊಬೈಲ್​ ಸ್ವಿಚ್​​ ಆಫ್​​ ಮಾಡ್ಕೊಂಡಿದ್ದ - ಕೇಸ್​ ಭೀತಿಯಲ್ಲಿ ಉಲ್ಟಾ ಹೊಡೆದ ಹ್ಯಾರಿಸ್​​        ರಾಜ್ಯದಲ್ಲಿ ಇಡೀ ದಿನ ಮೋದಿ ಮೇನಿಯಾ - ಮಧ್ಯಾಹ್ನ ಬಾಹುಬಲಿ ಸನ್ನಿಧಿಗೆ ಪ್ರಧಾನಿ - ಮತ್ತಷ್ಟು ಮೇಳೈಸಲಿದೆ ಮಹಾಮಜ್ಜನ        ಪರಿವರ್ತನಾ ರ‍್ಯಾಲಿಯಲ್ಲಿಂದು ಮೋದಿ ಅಬ್ಬರ - ಬಿಜೆಪಿಯಿಂದ ಗಣಪತಿ ಉಡುಗೊರೆ - ಮೈಸೂರು ಪೇಟ ತೊಡಿಸಿ ಸ್ವಾಗತ        ರೈತ ನಾಯಕ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ - ವಿದೇಶದಿಂದ ಮಕ್ಕಳ ಬಂದ ಬಳಿಕ ಅಂತ್ಯಕ್ರಿಯೆ - ಕಂಬನಿ ಮಿಡಿದ ಗಣ್ಯರು       
Breaking News

ಹೊರವಲಯದಲ್ಲಿ ಅಂದದ ಬೃಂದಾವನ ಬಡಾವಣೆ

Saturday, 09.09.2017, 3:00 AM       No Comments

ನೋಟ್ ಬ್ಯಾನ್ ಬಳಿಕ ಬೆಂಗಳೂರಿನಲ್ಲಿ ರಿಯಾಲ್ಟಿ ಚಟುವಟಿಕೆ ಮುಂಚೂಣಿ ಸಾಧಿಸುತ್ತಿರುವುದು ಬಿಲ್ಡರ್​ಗಳಿಗೆ ವರವಾಗಿದೆ.

ನಗರದ ಹೊರವಲಯದ ಅನೇಕ ಭಾಗಗಳಲ್ಲಿ ವಿವಿಧ ಸಂಸ್ಥೆಗಳು ಐಷಾರಾಮಿ, ಅಫೋರ್ಡಬಲ್ ಮನೆ ನಿರ್ವಣಕ್ಕೆ ಒತ್ತು ನೀಡುತ್ತಿದ್ದಾರೆ. ಈ ಪೈಕಿ ಬೃಂದಾವನ ಪ್ರಾಪರ್ಟಿಸ್ ಪ್ರೖೆ.ಲಿ, ನೆಲಮಂಗಲ- ಕುಣಿಗಲ್ ರಾಷ್ಟ್ರೀಯ ಹೆದ್ದಾರಿ ಭಾಗ, ತಾವರೆಕೆರೆ ರಸ್ತೆ, ಮಾಗಡಿ ರಸ್ತೆ ಭಾಗಗಳಲ್ಲಿ ಬಡಾವಣೆಗಳನ್ನು ನಿರ್ವಿುಸುತ್ತಿದೆ.

ಮಾಗಡಿ ರಸ್ತೆಯಲ್ಲಿ ಶಿವಗಿರಿ ಎನ್​ಕ್ಲೇವ್ ಬಡಾವಣೆ ಹಾಗೂ ಬೃಂದಾವನ ಮಂಜುಳಾ ಪ್ಯಾರಡೈಸ್ ಯೋಜನೆಗಳಿಗೆ ಬೇಡಿಕೆ ಹೆಚ್ಚಿದ್ದು, 2 ಯೋಜನೆಗಳು ನೋಂದಣಿಗೆ ಸಿದ್ಧವಾಗಿದೆ. ಶಿವಗಿರಿ ಎನ್​ಕ್ಲೇವ್ ಯೋಜನೆಯನ್ನು ವಿವಿಧ ಹಂತಗಳಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿರುವ ಸಂಸ್ಥೆ, ಪ್ರಸ್ತುತ ಮೊದಲ ಹಂತದಲ್ಲಿ 2 ಎಕರೆ ಪ್ರದೇಶದಲ್ಲಿ 50ಕ್ಕೂ ಅಧಿಕ ವಿವಿಧ ಅಳತೆಯ ಸೈಟುಗಳನ್ನು ಅಭಿವೃದ್ಧಿಪಡಿಸಲಿದೆ. ಅಗತ್ಯಕ್ಕೆ ಅನುಗುಣವಾಗಿ ತ್ಯಾಜ್ಯ ನೀರು ಸಂರಕ್ಷಣಾ ಘಟಕ ಇತ್ಯಾದಿ ಪರಿಸರ ಸ್ನೇಹಿ ಯೋಜನೆಗಳನ್ನೂ ಅಳವಡಿಸಲು ಅವಕಾಶ ನೀಡಲು ಸಂಸ್ಥೆ ತಯಾರಿ ನಡೆಸಿದೆ.

ಮಾಗಡಿ ರಸ್ತೆಯಲ್ಲೇ ಮತ್ತೊಂದು ಯೋಜನೆ ಬೃಂದಾವನ ನಿವಾಸದಲ್ಲಿ ವಿವಿಧ ಅಳತೆಯ 100 ಕ್ಕೂ ಅಧಿಕ ನಿವೇಶನಗಳನ್ನು ಮಾರಾಟ ಮಾಡಲು ಯೋಜಿಸಲಾಗಿದೆ. ಸಂಪೂರ್ಣ ಅಭಿವೃದ್ಧಿ ಹೊಂದಿದ ಬಡಾವಣೆಯಾಗಿರುವ ಬೃಂದಾವನ ನಿವಾಸದಲ್ಲಿ ಕನಸಿನ ಮನೆಯ ಕಾಮಗಾರಿ ಆರಂಭ ಮಾಡಬಹುದು. 247 ಭದ್ರತಾ ವ್ಯವಸ್ಥೆ, ನೀರಿನ ಪೂರೈಕೆ, ಸುಸಜ್ಜಿತ ಒಳಚರಂಡಿ ವ್ಯವಸ್ಥೆ ಹಾಗೂ ಸಾಲು ಮರಗಳನ್ನು ಒಳಗೊಂಡ ಆಕರ್ಷಕ ಬಡಾವಣೆ ರೂಪಿಸಲಾಗಿದೆ. 3030, 3040, 4050 ಹಾಗೂ 4060 ಅಳತೆಯ ಸೈಟುಗಳು ನೋಂದಣಿಗೆ ಸಿದ್ಧವಾಗಿದೆ.

ವಿಲ್ಲಾ, ಮನೆಗಳ ನಿರ್ವಣಕ್ಕೆ ಯೋಗ್ಯ ಬಡಾವಣೆಗಳಾಗಿದ್ದು, ಈಜುಕೊಳ, ಜಾಗಿಂಗ್ ಟ್ರಾ್ಯಕ್, ಮಕ್ಕಳ ಆಟದ ಉದ್ಯಾನ, ಪಾರ್ಕ್ ಸೇರಿ ಎಲ್ಲ ಮೂಲಸೌಕರ್ಯಗಳಿವೆ.

ಬೆಂಗಳೂರಿನ ಪ್ರಮುಖ ರೆಸಿಡೆನ್ಷಿಯಲ್ ತಾಣವಾಗಿ ಗುರುತಿಸಿಕೊಂಡಿರುವ ಕನಕಪುರ ರಸ್ತೆ ಭಾಗದಲ್ಲೂ ಬೃಂದಾವನ ಪ್ರಾಪರ್ಟಿಸ್ ಬಡಾವಣೆ ನಿರ್ವಿುಸಲು ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಬೃಂದಾವನ ಮಂಜುಳಾ ಮಿಡೋಸ್ ಯೋಜನೆ ಮೂಲಕ 3.5 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಮಾಡಲಿದೆ. ಪ್ರತಿಷ್ಠಿತ ಬಡಾವಣೆಯನ್ನಾಗಿ ರೂಪಿಸಲು ಯೋಜನೆ ರೂಪಿಸಲಾಗಿದೆ. ಇದಲ್ಲದೆ ನೆಲಮಂಗಲ- ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಬೃಂದಾವನ ಮಂಜುಳಾ ಸನ್​ರೈಸ್ ಬಡಾವಣೆ ನಿರ್ಮಾಣ ಮಾಡಲಿದ್ದು, ಈ ಯೋಜನೆ ಬಗ್ಗೆ ಸಂಸ್ಥೆ ಈಗಾಗಲೇ ಘೋಷಣೆ ಮಾಡಿದೆ. 5 ಎಕರೆ ಪ್ರದೇಶದಲ್ಲಿ ಲೇಔಟ್ ವಿನ್ಯಾಸ ಮಾಡಲು ಸಂಸ್ಥೆ ಉದ್ದೇಶಿಸಿದೆ. ಇವುಗಳಲ್ಲೂ ಗುಣಮಟ್ಟದ ಜೀವನಕ್ಕೆ ಯೋಗ್ಯವಾದ ಮೂಲಸೌಕರ್ಯ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಸಂಪರ್ಕ: 7090788399(ದಿನೇಶ್ ಗೌಡ)

email: [email protected]

Leave a Reply

Your email address will not be published. Required fields are marked *

Back To Top