Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ಹೊರಟೂರು ಜನರಿಗೆ ಕಿಡ್ನಿ ಸ್ಟೋನ್ ಸಮಸ್ಯೆ!

Friday, 03.03.2017, 7:27 AM       No Comments

ಯಾದಗಿರಿ: ರಾಜ್ಯದ ಕೆಲ ಹಳ್ಳಿಗಳು ಭೀಕರ ಬರಕ್ಕೆ ತುತ್ತಾಗಿ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದ್ದರೆ, ಈ ಹಳ್ಳಿಯಲ್ಲಿ ಸಾಕಷ್ಟು ನೀರಿದ್ದರೂ ಕುಡಿಯಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಈ ನೀರು ಕುಡಿದರೆ ಕಿಡ್ನಿ ಸ್ಟೋನ್ ಪ್ರಾಬ್ಲಂ!

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಕುಗ್ರಾಮ ಹೊರಟೂರಿನಲ್ಲಿ 100ಕ್ಕೂ ಹೆಚ್ಚು ಗ್ರಾಮಸ್ಥರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲá-ತ್ತಿದ್ದು, ಎರಡು ವರ್ಷದಿಂದ ಈ ಸಮಸ್ಯೆ ಗ್ರಾಮಸ್ಥರಿಗೆ ಬಾಧಿಸá-ತ್ತಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಈವರೆಗೆ ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಮುಂದಾಗದಿರುವುದು ವಿಪರ್ಯಾಸ. ಗ್ರಾಮದ ಕೊಳವೆ ಬಾವಿಯಿಂದ ಟ್ಯಾಂಕ್​ಗೆ ಸರಬರಾಜಾಗá-ವ ನೀರಿನಲ್ಲಿ ಹೇರಳವಾಗಿ ಫ್ಲೋರೈಡ್ ಅಂಶವಿದೆ ಎಂದು ವೈದ್ಯೕಯ ಮೂಲಗಳು ಹೇಳá-ತ್ತಿವೆ. 20 ವರ್ಷದಿಂದ ಕೊಳವೆಬಾವಿ ನೀರು ಸೇವಿಸá-ತ್ತಿರá-ವ ಗ್ರಾಮಸ್ಥರಿಗೆ ಇದೀಗ ಕಿಡ್ನಿಯಲ್ಲಿ ಕಲ್ಲುಗಳು ಪತ್ತೆಯಾಗಿವೆ. ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ 20-30 ವಯೋಮಾನದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಯಾದಗಿರಿಯಿಂದ ಕೇವಲ 15 ಕಿಮೀ ಅಂತರದಲ್ಲಿರುವ ಹೊರಟೂರು ಗ್ರಾಮದಲ್ಲಿ 1500 ಜನಸಂಖ್ಯೆ ಇದೆ. ಊರಲ್ಲಿ 10ಕ್ಕೂ ಹೆಚ್ಚು ಬೋರ್​ವೆಲ್​ಗಳಿದ್ದರೂ ಕುಡಿಯಲು ಯೋಗ್ಯ ನೀರು ಸಿಗುತ್ತಿಲ್ಲ. ಪ್ರತಿ ಮನೆಯಲ್ಲೂ ಕಿಡ್ನಿ ಸ್ಟೋನ್​ನಿಂದ ಬಳಲುವ ಒಬ್ಬಿಬ್ಬರಾದರೂ ಕಾಣಸಿಗá-ತ್ತಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.

ಆಹಾರದಲ್ಲಿ ವ್ಯತ್ಯಯ, ಸಮರ್ಪಕ ನೀರು ಸೇವಿಸದೇ ಇರುವುದು ಹಾಗೂ ನೀರಿನಲ್ಲಿ ದೋಷವಿದ್ದರೆ ಕಿಡ್ನಿಯಲ್ಲಿ ಕಲ್ಲು ಬೆಳೆಯುವ ಸಾಧ್ಯತೆ ಹೆಚ್ಚು. ಅಲ್ಲದೆ, ನೀರಿನಲ್ಲಿ ಫ್ಲೂರೈಡ್ ಹಾಗೂ ಕ್ಯಾಲ್ಸಿಯಂ ಫ್ಲೋರೈಡ್ ಅಂಶಗಳು ಹೆಚ್ಚಿದ್ದರೂ ಈ ಸಮಸ್ಯೆ ಉಲ್ಬಣಿಸುತ್ತದೆ.

| ಡಾ. ಶಿವಲಿಂಗಯ್ಯ ಕಿಡ್ನಿ ತಜ್ಞ, ವಿಕ್ಟೋರಿಯಾ ಆಸ್ಪತ್ರೆ

 

ಹೊರಟೂರು ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಹಾಗೊಂದು ವೇಳೆ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗಿದೆ ಅಂತಾದರೆ ಅಲ್ಲಿನ ನೀರಿನ ಸ್ಯಾಂಪಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

| ಡಾ.ದಿವಾಕರ ಮಾಳಗೆ ಜಿಲ್ಲಾ ಆರೋಗ್ಯಾಧಿಕಾರಿ ಯಾದಗಿರಿ

Leave a Reply

Your email address will not be published. Required fields are marked *

Back To Top