Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಹೆಣ್ಣಿನ ಸಮಸ್ಯೆಗೆ ಹೆಣ್ಣೇ ಹೆಗಲು

Tuesday, 28.02.2017, 5:00 AM       No Comments
  • ಮಲ್ಲಿಕಾರ್ಜುನ ತಳವಾರ

ಬಯಲು ಬಹಿರ್ದೆಸೆ ಗ್ರಾಮೀಣ ಭಾರತದಲ್ಲಿ ಸಾಮಾನ್ಯ ಸಮಸ್ಯೆಗಳಲ್ಲೊಂದು. ಆದರೆ ಈಗ ಕಾಲ ಬದಲಾಗಿದೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಯಿಂದ ಹಾನಿಗೀಡಾಗುವವರು ಎಂಬುದು ಹೆಂಗಳೆಯರಿಗೇ ಅರ್ಥವಾಗುತ್ತಿದೆ. ಆ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಮಲ್ಲಮ್ಮನಂಥ ಮಹಿಳೆಯರು ಈಗೀಗ ಶೌಚಗೃಹ ನಿರ್ವಣದ ಮಹತ್ವವನ್ನು ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಂಥದ್ದೇ ಒಂದು ವಿಭಿನ್ನ ಪ್ರಯೋಗಕ್ಕಿಳಿದವರು ಮುರಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪಸಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪಸಾರೆ ಬಯಲು ಶೌಚದ ವಿರುದ್ಧ ಯುದ್ಧ ಸಾರಿದ್ದಾರೆ. ಆ ದಿಸೆಯಲ್ಲಿ ವಿಭಿನ್ನ ಹಾದಿ ತುಳಿದಿರುವ ಅವರು, ಶೌಚಗೃಹ ನಿರ್ವಣದಲ್ಲಿ ಕ್ರಾಂತಿ ಮಾಡಲು ಹೊರಟ ಉತ್ಸಾಹಿ ಮಹಿಳೆ.

ಶೌಚಗೃಹ ನಿರ್ಮಾಣ ಪ್ರೇರೇಪಿಸುವವರಿಗೆ ಬಹುಮಾನ: ಮುರಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಗೃಹ ನಿರ್ಮಾಣ ಕುರಿತಂತೆ ಮಾಡಿದ ಎಲ್ಲ ಪ್ರಯತ್ನಗಳಲ್ಲೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಶೋಭಾ ಪಸಾರೆ ಹೊಸದೊಂದು ವಿಧಾನ ಕಂಡುಕೊಂಡರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚೆಚ್ಚು ಜನರು ಶೌಚಗೃಹ ನಿರ್ವಿುಸಿಕೊಳ್ಳಲು ಪ್ರೇರೇಪಿಸುವವರಿಗೆ ಬಹುಮಾನ ನೀಡುವುದಾಗಿ ಘೊಷಣೆ ಮಾಡಿದ್ದಾರೆ. ಅದೂ ತಮ್ಮ ಕೈಯಿಂದಲೇ ಹಣ ವ್ಯಯಿಸಿ ಬಹುಮಾನ ನೀಡುವುದಾಗಿ ಹೇಳಿಕೊಂಡಿದ್ದಾರೆ ಶೋಭಾ.

ಶೌಚಗೃಹ ನಿರ್ವಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲ ಸದಸ್ಯರನ್ನೊಳಗೊಂಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಎಲ್ಲರೂ ಮಾಡಿದ ಹಲವು ಪ್ರಯತ್ನಗಳು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ನಿರೀಕ್ಷಿತ ಗುರಿ ತಲುಪಲು ಈ ಬಹುಮಾನ ಘೊಷಣೆಯ ತಂತ್ರಕ್ಕಿಳಿದಿರುವೆ ಎನ್ನುತ್ತಾರೆ ಶೋಭಾ. ಈಗಾಗಲೇ ಗ್ರಾಪಂ ವ್ಯಾಪ್ತಿಯ ಶಾಲೆಗಳು, ಜಾತ್ರೆಗಳಲ್ಲಿ ಈ ಕುರಿತು ಹಲವು ಬಾರಿ ಜಾಗೃತಿ ಮೂಡಿಸಲಾಗಿತ್ತು. ಶೌಚಗೃಹ ನಿರ್ವಣದಿಂದ ಆಗಬಹುದಾದ ಲಾಭಗಳ ಕುರಿತು ತಿಳಿವಳಿಕೆ ನೀಡಲಾಗಿತ್ತು. ಅದಲ್ಲದೇ 5000 ಭಿತ್ತಿ ಪತ್ರದ ಪ್ರತಿಗಳನ್ನು ಮುದ್ರಿಸಿ ಪ್ರತಿ ಮನೆ ಮನೆಗೂ ಹಾಗೂ ಶಾಲೆಗಳಿಗೂ ಹಂಚಲಾಗಿತ್ತು. ಆದರೂ ಗ್ರಾಮೀಣ ಜನರ ಮನಸ್ಥಿತಿಗೆ ತಕ್ಕಂತೆ ಪ್ರಚಾರ ತಂತ್ರ ಫಲಿಸಲಿಲ್ಲ. ಮುರಗುಂಡಿ ಗ್ರಾಮದಲ್ಲಿ ಶೇ.50 ಹಾಗೂ ಗ್ರಾಪಂ.ಗೆ ಒಳಪಡುವ ಇನ್ನೊಂದು ಗ್ರಾಮ ಮಸರಗುಪ್ಪಿಯಲ್ಲಿ ಶೇ.65ರಷ್ಟು ಮಾತ್ರ ಗುರಿ ಸಾಧಿಸಲು ಸಾಧ್ಯವಾಯಿತು. ಸಂಪೂರ್ಣ ಗುರಿ ಮುಟ್ಟಲು ಶೋಭಾ ಯೋಚಿಸಿದ್ದು, ಬಹುಮಾನ ಘೊಷಣೆ ತಂತ್ರ.

ಅನಕ್ಷರತೆಯೊಂದು ಸವಾಲು: ಶೌಚಗೃಹ ನಿರ್ವಣದಿಂದ ಹಳ್ಳಿಗಳಲ್ಲಿ ಉಂಟಾಗುವ ಆರೋಗ್ಯಕರ ವಾತಾವರಣ ಹಾಗೂ ಆರೋಗ್ಯ ಸಂಬಂಧಿ ಲಾಭಗಳ ಕುರಿತು ಜನಸಾಮಾನ್ಯರಿಗೆ ತಿಳಿ ಹೇಳಲು ಹೋದರೆ ಅದನ್ನು ಅರ್ಥ ಮಾಡಿಕೊಳ್ಳಲು ಅನಕ್ಷರತೆ ಅಡ್ಡಿ ಬರುತ್ತದೆ. ಸಾಮಾಜಿಕ ಭಿನ್ನ ಸ್ತರಗಳಲ್ಲಿರುವ ವಿವಿಧ ಸಮುದಾಯಗಳ ಜನರು ಅಷ್ಟೇ ವಿಭಿನ್ನ ಶೈಕ್ಷಣಿಕ ಕೊರತೆ ಎದುರಿಸುತ್ತಿದ್ದಾರೆ. ತಕ್ಕಮಟ್ಟಿಗಿನ ಸುಶಿಕ್ಷಿತರೂ ಕೆಲವೊಮ್ಮೆ ಈ ಶೌಚಗೃಹ ಮಹತ್ವದ ಕುರಿತು ಅಸಡ್ಡೆ ಮಾಡುವುದೂ ಇದೆ. ‘ಅವರಿಗೆ ಅರ್ಥವಾಗುವುದಿಲ್ಲ ಎಂದ ಮಾತ್ರಕ್ಕೆ ಗುರಿಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಸರ್ಕಾರ ಕೊಡುವ ಸಹಾಯಧನದ ಸೌಲಭ್ಯ ಪಡೆದು ಶೌಚಗೃಹ ನಿರ್ಮಾಣ ಮಾಡಿಕೊಳ್ಳುವುದು ಅಷ್ಟು ಕಠಿಣವಂತೂ ಅಲ್ಲ. ಎನ್ನುವುದು ಶೋಭಾ ಅವರ ಮನದ ಮಾತು.

ಗ್ರಾಮೀಣ ಪ್ರದೇಶದಲ್ಲಿರುವ ಬಹಿರ್ದೆಸೆ ಸಮಸ್ಯೆ ಕೇವಲ ಸ್ವಚ್ಛತೆಯ ಸವಾಲಷ್ಟೇ ಅಲ್ಲದೇ ಮಹಿಳೆಯರ ಆರೋಗ್ಯದ ಪ್ರಶ್ನೆಯೂ ಹೌದು. ಹಳ್ಳಿಗಳಲ್ಲಿ ಬಹಿರ್ದೆಸೆಗೆ ಹೋಗುವ ಮಹಿಳೆಯರು ಅನುಭವಿಸುವ ಮುಜುಗುರ ಹೇಳತೀರದ್ದು. ಸೂರ್ಯ ಉದಯಿಸುವ ಮುನ್ನವೇ ಅವರು ಹೊರಡಬೇಕು. ಯಾರಾದರೂ ನೋಡಿಯಾರು ಎಂಬ ಹಿಂಜರಿಕೆಯೊಂದಾದರೆ, ಮಾನಭಂಗ ಯತ್ನ, ಹುಳ-ಹುಪ್ಪಡಿಗಳ ಕಾಟ, ಸೊಳ್ಳೆ, ರೋಗದ ಭಯ ಅವರನ್ನು ಕಾಡುವ ಸಾಧ್ಯತೆಗಳಿರುತ್ತವೆ. ಆ ನಿಟ್ಟಿನಲ್ಲಿ ಗ್ರಾಮೀಣ ಮಹಿಳೆಯರ ಸುರಕ್ಷೆ ಹಾಗೂ ಆರೋಗ್ಯಕರ ಜೀವನಕ್ಕಾಗಿ ಅವರ ಪ್ರಗತಿಯ ಹೆಜ್ಜೆಗೆ ಮತ್ತೊಂದು ಹೆಜ್ಜೆಯಾಗುವ ಅಭಿಲಾಷೆ ಮಾತ್ರ ನನ್ನ ಉದ್ದೇಶವಾಗಿದ್ದು, ಈ ಪ್ರಯತ್ನದಲ್ಲಿ ಯಾವುದೇ ರಾಜಕೀಯ ಹಾಗೂ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂಬುದನ್ನು ಶೋಭಾ ಸ್ಪಷ್ಟ ಪಡಿಸುತ್ತಾರೆ. ಇದಕ್ಕೆ ಮುರಗುಂಡಿ ಗ್ರಾ.ಪಂ. ಪಿಡಿಓ ಅವರ ಸಹಕಾರವೂ ಇದೆ ಎನ್ನುವ ಶೋಭಾ ದಿಟ್ಟ ಗ್ರಾಮೀಣ ಪ್ರದೇಶದಲ್ಲಿ ದಿಟ್ಟ ಹೆಜ್ಜೆ ಹಾಕುತ್ತಿರುವುದು ಶ್ಲಾಘನೀಯ.

ಬಹುಮಾನದ ಸ್ವರೂಪವೇನು?

ಈಚೆಗೆ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಶೋಭಾ ಪಸಾರೆ ಬಹುಮಾನ ಘೊಷಿಸಿದ್ದಾರೆ. ಯಾವ ಸಂಸ್ಥೆ ಅಥವಾ ವ್ಯಕ್ತಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ 25 ಶೌಚಗೃಹಗಳನ್ನು ನಿರ್ವಿುಸಲು ಪ್ರೇರಣೆ ನೀಡುತ್ತಾರೋ ಅಂತಹ ಸಂಸ್ಥೆ ಅಥವಾ ವ್ಯಕ್ತಿಗೆ ಅರ್ಧ ತೊಲ ಬಂಗಾರ, 15 ಶೌಚಗೃಹ ನಿರ್ವಣಕ್ಕೆ ಪ್ರೇರಣೆ ನೀಡಿದರೆ 5000 ರೂ. ನಗದು, 10 ಶೌಚಗೃಹ ನಿರ್ವಣಕ್ಕೆ ಪ್ರೇರಣೆ ನೀಡಿದರೆ 2000 ರೂ. ನಗದು ನೀಡಲಾಗುವುದು. ಒಂದು ವೇಳೆ 4ರಿಂದ 5 ಶೌಚಗೃಹ ನಿರ್ವಣಕ್ಕೆ ಪ್ರೇರಣೆ ನೀಡಿದರೆ ಅಂತಹವರನ್ನೂ ಸೇರಿಸಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಶೋಭಾ, ಬಹುಮಾನ ಘೊಷಣೆ ಕೇವಲ ಘೊಷಣೆಯಲ್ಲ; ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಕೊಟ್ಟ ಮಾತು ಉಳಿಸಿಕೊಳ್ಳಲಾಗುವುದು. ಆ ಮೂಲಕ ಮುರಗುಂಡಿಯನ್ನು ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದು ದೃಢ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Leave a Reply

Your email address will not be published. Required fields are marked *

Back To Top