Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಹೆಚ್ಚಿದ ಕುತೂಹಲ

Monday, 04.09.2017, 3:02 AM       No Comments

ರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ಮೂರನೇ ಬಾರಿಗೆ ಮಂತ್ರಿಮಂಡಲದ ವಿಸ್ತರಣೆಯಾಗಿದೆ. ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ಹುಸಿಗೊಳಿಸುವ ರೀತಿಯಲ್ಲಿ ಕೆಲ ಹೊಸಬರಿಗೆ ಸಚಿವಗಾದಿ ದಕ್ಕಿರುವುದು, ದಕ್ಷತೆ ಮೆರೆದ ಸಚಿವರಿಗೆ ಮುಂಬಡ್ತಿ ಸಿಕ್ಕಿರುವುದು ಹಾಗೂ ಮತ್ತೆ ಕೆಲವರ ಖಾತೆ ಬದಲಾವಣೆಯಾಗಿರುವುದು ಈ ಬಾರಿಯ ವಿಶೇಷತೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ, 2019ರ ಲೋಕಸಭಾ ಚುನಾವಣೆ ಹಾಗೂ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಸನ್ನಿಹಿತವಾಗುತ್ತಿರುವ ವಿಧಾನಸಭಾ ಚುನಾವಣೆಯ ಲೆಕ್ಕಾಚಾರವೂ ಈ ಕಸರತ್ತಿನ ನೇಪಥ್ಯದಲ್ಲಿರುವುದು ಸುಸ್ಪಷ್ಟ. ಇಲ್ಲಿ ಅರ್ಹತೆ ಜತೆಗೆ ರಾಜಕೀಯ ಪ್ರಯೋಜನದತ್ತಲೂ ನೋಟ ನೆಟ್ಟಿರುವುದು ಸ್ಪಷ್ಟಗೋಚರ.

ಅದೇನೇ ಇರಲಿ, ಈ ಪುನಾರಚನೆ ಒಂದಷ್ಟು ಕುತೂಹಲ ಹುಟ್ಟುಹಾಕಿರುವುದಂತೂ ಹೌದು. ರಕ್ಷಣಾ ಖಾತೆಯಂಥ ಮಹತ್ವದ ಹೊಣೆಗಾರಿಕೆ ನಿರ್ಮಲಾ ಸೀತಾರಾಮನ್ ಮಡಿಲು ಸೇರಿರುವುದು ಅದರಲ್ಲೊಂದು. ಈ ಹಿಂದೆ ವಾಣಿಜ್ಯೋದ್ಯಮ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿರುವ ದಾಖಲೆ ಅವರ ಖಾತೆಯಲ್ಲಿದೆಯಾದರೂ, ಇಂದಿರಾ ಗಾಂಧಿಯವರ ತರುವಾಯದ ಎರಡನೇ ಮಹಿಳಾ ರಕ್ಷಣಾ ಮಂತ್ರಿ ಎಂಬ ಹೆಗ್ಗಳಿಕೆಗೆ ಈಗ ಪಾತ್ರರಾಗಿರುವ ಅವರು ಈ ಖಾತೆ ಒಳಗೊಳ್ಳುವ ‘ವ್ಯೂಹಾತ್ಮಕ ಕಾರ್ಯತಂತ್ರ‘ದ ಬಾಬತ್ತನ್ನು ಹೇಗೆ ಜೀರ್ಣಿಸಿಕೊಳ್ಳುತ್ತಾರೆ, ಉತ್ತಮ ಫಲಿತಾಂಶ ಒದಗಿಸುತ್ತಾರೆ ಎಂಬುದೇ ನಿರೀಕ್ಷೆಯನ್ನು ಗರಿಗೆದರಿಸಿದೆ. ಇನ್ನು ಸುರೇಶ್ ಪ್ರಭು ದಕ್ಷತೆಯ ಕುರಿತು ಬೆರಳು ಮಾಡಿ ತೋರಿಸುವಂತಿಲ್ಲವಾದರೂ, ಕಳೆದ 2 ವರ್ಷಗಳಿಂದ ಸಂಭವಿಸಿದ ರೈಲು ದುರಂತಗಳಿಂದಾಗಿ ಅಸಮಾಧಾನಗೊಂಡು ಅವರೇ ಖಾತೆ ಬದಲಾವಣೆಗೆ ಬಯಸಿದ್ದರು ಎಂಬುದಿಲ್ಲಿ ಉಲ್ಲೇಖನೀಯ. ಇನ್ನು, ಲೋಕಸಭೆ/ರಾಜ್ಯಸಭೆಗಳ ಸದಸ್ಯರಲ್ಲದಿದ್ದರೂ ನಿವೃತ್ತ ಐಎಎಸ್ ಅಧಿಕಾರಿಗಳಿಗೆ ಮಂತ್ರಿಪಟ್ಟ ಕಟ್ಟುವ ಪರಿಪಾಠಕ್ಕೂ ಮುಂದಾಗಿದ್ದು ಈ ಪುನಾರಚನೆಯ ವಿಶೇಷ. ಆಳುಗ ವ್ಯವಸ್ಥೆಗೆ ಚಲನಶೀಲತೆ-ಚುರುಕು ನೀಡಿ ಸುಧಾರಣಾ ಪರ್ವಕ್ಕೆ ನಾಂದಿ ಹಾಡುವುದು ಈ ನಡೆಗಳ ಹಿಂದಿನ ಲೆಕ್ಕಾಚಾರ ಎನ್ನಲಡ್ಡಿಯಿಲ್ಲ.

ಈ ಅಭಿಪ್ರಾಯಕ್ಕೆ ಕಾರಣಗಳೂ ಇಲ್ಲದಿಲ್ಲ. ಸರ್ಕಾರಿ ಯೋಜನೆಗಳು ರೂಪರೇಷೆಯ ಹಂತದಲ್ಲಿ ವರ್ಣರಂಜಿತ-ವಸ್ತುನಿಷ್ಠವಾಗಿ ಇರುತ್ತವೆಯಾದರೂ ಸಂಭಾವ್ಯ ಫಲಾನುಭವಿಗಳಿಗೆ ಅದರ ಪ್ರಯೋಜನಗಳನ್ನು ಮನದಟ್ಟು ಮಾಡಿಕೊಡುವಲ್ಲಿನ ವೈಫಲ್ಯ ಅಥವಾ ಅನುಷ್ಠಾನದ ಹಂತದಲ್ಲಿ ಕಾಣಬರುವ ಅಸಡ್ಡೆಯ ಕಾರಣದಿಂದಾಗಿ ನಿರೀಕ್ಷಿತ ಫಲಶ್ರುತಿ ದಕ್ಕುತ್ತಿಲ್ಲ ಎಂಬುದು ಅನುಗಾಲವೂ ಕೇಳಿಬರುವ ಅಳಲು. ಎಲ್ಲ ಮಿತ್ರಪಕ್ಷಗಳು ಮತ್ತು ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡಿ ರಾಜಕೀಯ ಸ್ಥಿರತೆ ಕಾಯ್ದುಕೊಳ್ಳುವುದರ ಜತೆಗೆ, ಆಳುಗ ವ್ಯವಸ್ಥೆಯನ್ನು ‘ಅಭಿವೃದ್ಧಿ-ಮುಖಿ‘ಯಾಗಿಸಿ ತೂಗಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಮೋದಿ ಸರ್ಕಾರ ಹತ್ತು ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದು ಗೊತ್ತಿರುವಂಥದೇ. ಈ ಯೋಜನೆಗಳ ಸಮರ್ಪಕ ಅನುಷ್ಠಾನದ ನಿಟ್ಟಿನಲ್ಲಿಯೂ ಈ ಸಲದ ಸಂಪುಟ ವಿಸ್ತರಣೆಗೆ ಮಹತ್ವವಿದೆ. ಈ ಉದ್ದೇಶ ಈಡೇರಿದಲ್ಲಿ ಸರ್ಕಾರದ ಇಮೇಜ್ ವರ್ಧನೆಗೆ ನೆರವಾಗುತ್ತದೆ. ಇದು ಉತ್ತಮ ಫಲಿತಾಂಶಗಳನ್ನೇ ಹೊತ್ತು ತರುವಂತಾದಲ್ಲಿ ಅದರ ಅಂತಿಮ ಪ್ರಯೋಜನ ದಕ್ಕುವುದು ಸಾರ್ವಜನಿಕರಿಗೇ ಎಂಬುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *

Back To Top