Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಹೃದಯದಲ್ಲಿ ಮಾನವೀಯತೆಗೆ ಜಾಗ ನೀಡಿ

Friday, 21.04.2017, 3:00 AM       No Comments

ಜೀವನವನ್ನು ನಿಯಂತ್ರಿಸಲು ಹೊರಟಷ್ಟು ಅದು ನಮ್ಮನ್ನು ನಿಯಂತ್ರಿಸುತ್ತದೆ. ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ತಾಕಲಾಟ ಬದುಕನ್ನು ಮತ್ತಷ್ಟು ಗೋಜಲುಗೊಳಿಸುತ್ತದೆ. ಹಾಗಾದರೆ, ಜೀವನದಲ್ಲಿ ಹೇಗೆ ಸಾಗಬೇಕು ಎಂದು ಪ್ರಶ್ನೆ ಮೂಡಿದರೆ ಮಾನವೀಯತೆಯನ್ನು ಅಳವಡಿಸಿಕೊಂಡು ಆ ಮೌಲ್ಯದ ಆಧಾರದಲ್ಲಿ ಬದುಕಿದರೆ ಸಾಕು.

ಪ್ರಶ್ನೆ: ಪ್ರಪಂಚದಲ್ಲಿ ಒಳ್ಳೆಯದು-ಕೆಟ್ಟದ್ದು ಎಂಬುದಿದೆಯೆ?

ಉತ್ತರ: ಬಾಲ್ಯದಿಂದಲೂ ನಿಮ್ಮ ಮೇಲೆ ನೀತಿಪಾಠವನ್ನು ಹೇರಿರುವುದೇ ಅತಿ ದೊಡ್ಡ ಸಮಸ್ಯೆ. ಜನರು ನಿಮಗೆ ಸರಿ-ತಪ್ಪು, ಒಳ್ಳೆಯದು-ಕೆಟ್ಟದು ಎಂಬುದನ್ನು ಕಲಿಸಿರುತ್ತಾರೆ. ಇವೆಲ್ಲವೂ ಗುರುತಿಸುವಿಕೆಯ ಬಹಳ ಶಕ್ತಿಯುತ ಅಂಶ. ಯಾವುದನ್ನು ಒಳ್ಳೆಯದೆನ್ನುವಿರೋ ಅದರೊಂದಿಗೇ ಸ್ವಾಭಾವಿಕವಾಗಿ ನಿಮ್ಮನ್ನು ಗುರುತಿಸಿಕೊಳ್ಳುತ್ತೀರಿ. ಕೆಟ್ಟದ್ದರಿಂದ ಸ್ವಾಭಾವಿಕವಾಗಿ ಹಿಮ್ಮೆಟ್ಟುವಿರಿ. ಮನಸ್ಸಿನ ಸ್ವಭಾವವೇನೆಂದರೆ ಯಾವುದರಿಂದ ವಿಮುಖವಾಗಲು ಆಶಿಸುವಿರೋ ಅದೇ ಮನಸ್ಸನ್ನು ಆಳುತ್ತದೆೆ. ‘ಕೆಟ್ಟದರ ಬಗ್ಗೆ ಆಲೋಚಿಸಬೇಡ’ ಎಂದು ಅದನ್ನು ವಿರೋಧಿಸಿದಷ್ಟೂ ಅದೇ ಆಲೋಚನೆಯೇ ಪೂರ್ಣವಾಗಿ ಆವರಿಸಿಕೊಳ್ಳುತ್ತದೆ; ತಲೆಯಲ್ಲಿ ಅದು ಬಿಟ್ಟು ಬೇರೇನೂ ಓಡುವುದಿಲ್ಲ!

ಯಾರು ಒಳ್ಳೆಯವರು?: ಯಾರಾದರೊಬ್ಬ ತಾನು ಬಹಳ ಒಳ್ಳೆಯವನೆಂದು ಕೊಂಡರೆ, ಅವನಿಗೆ ಈ ಪ್ರಪಂಚದ ಬೇರಾರೂ ಸರಿ ಎನಿಸುವುದಿಲ್ಲ. ನೀವು ಒಳ್ಳೆಯವರೆಂಬ ಆಲೋಚನೆ ಬಂದದ್ದು ಕೇವಲ ಹೋಲಿಕೆಯಿಂದ ತಾನೇ? ಆದ್ದರಿಂದ ನೀವು ಕೆಟ್ಟದ್ದಕ್ಕೆ ಹೋಲಿಸಿದರೆ ಒಳ್ಳೆಯವರು. ತಾವು ಒಳ್ಳೆಯವರೆಂದುಕೊಳ್ಳುವ ಜನರು ರ್ದಪಿಷ್ಟರಾಗಿರುತ್ತಾರೆ. ಅವರೊಂದಿಗೆ ಬದುಕುವುದು ಬಹಳ ಕಷ್ಟ. ನೈತಿಕ ಹಿರಿಮೆ ಎನ್ನುವುದು ಈ ಪ್ರಪಂಚದ ಅನೇಕಾನೇಕ ಅಮಾನವೀಯ ಕ್ರಿಯೆಗಳಿಗೆ ಮೂಲವಾಗಿದೆ. ಅದನ್ನು ನಿರ್ಲಕ್ಷಿಸುವುದು ತಪ್ಪು.

‘ಒಳ್ಳೆಯ’ ಜನರಿಗೆ ಸಾಮಾನ್ಯವಾಗಿ ಎಲ್ಲ ‘ಕೆಟ್ಟದ್ದೂ’ ತಿಳಿದಿರುತ್ತದೆ; ಅವರು ಅವನ್ನು ದೂರವಿಡಲು ಕೇವಲ ಸಂಭಾಳಿಸುತ್ತಿರುವರಷ್ಟೇ! ನೀವು ಯಾವುದನ್ನಾದರೂ ತಪ್ಪಿಸುತ್ತಿದ್ದರೆ, ಅದರರ್ಥ ಪ್ರಾಯಶಃ ಅದರ ಬಗ್ಗೆಯೇ ಸದಾ ಚಿಂತಿಸುತ್ತಿರುವಿರಿ ಎಂದು. ಯಾವುದನ್ನಾದರೂ ದೂರವಿಡುವುದೆಂದರೆ ಅದರಿಂದ ಮುಕ್ತರಾದಂತೆ ಅಲ್ಲ. ನಿಮ್ಮ ಒಳ್ಳೆಯತನ ಅದರ ದೂರವಿಡುವಿಕೆಯಿಂದ ಬಂದಿದೆ ಎಂದು: ‘ಅವನು ಸರಿಯಿಲ್ಲ, ಅವಳು ಸರಿಯಿಲ್ಲ’. ನಿಜವಾದ ಸ್ವಚ್ಛತೆ, ಹಾಗೆ ನೋಡಿದರೆ, ಸೇರಿಸಿಕೊಳ್ಳುವುದರಿಂದ ಬರುತ್ತದೆ. ಈ ಒಳ್ಳೆಯ, ಕೆಟ್ಟ, ಸರಿ, ತಪ್ಪುಗಳ ಐಡಿಯಾಗಳೆಲ್ಲ ಮಾನಸಿಕ ಅಸಂಬದ್ಧತೆ; ಅವಕ್ಕೆ ಜೀವನದೊಂದಿಗೆ ಯಾವುದೇ ಸಂಪರ್ಕ ಇಲ್ಲ. ನೂರು ವರ್ಷಗಳ ಕೆಳಗೆ ಬಹಳ ಒಳ್ಳೆಯದು ಎನ್ನಿಸಿಕೊಂಡಿದ್ದು ಈ ದಿನ ಅಸಹನೀಯವಾಗಿದೆ.

ಈ ಘಟನೆ ಓದಿ: ಇಬ್ಬರು ಐರಿಷ್ ಯುವಕರು ಲಂಡನ್ನಿನ ವೇಶ್ಯಾಗೃಹದ ಮುಂದಿದ್ದ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ಅವರು ಒಬ್ಬ ಧರ್ಮನಿಷ್ಠ ಬರುವುದನ್ನು ನೋಡಿದರು. ಆತ ತನ್ನ ಕಾಲರನ್ನು ಮೇಲಕ್ಕೆ ಮಾಡಿಕೊಂಡು, ತಲೆಯನ್ನು ತಗ್ಗಿಸಿಕೊಂಡು, ಮೆಲ್ಲನೆ ವೇಶ್ಯಾಗೃಹದೊಳಕ್ಕೆ ನುಗ್ಗಿದ. ಸ್ವಲ್ಪ ಹೊತ್ತಿಗೆ ಅಲ್ಲಿಗೆ ಮತ್ತೊಬ್ಬ ಧರ್ಮನಿಷ್ಠ ಬಂದ. ಅವನು ತನ್ನ ಮುಖವನ್ನು ಮಫ್ಲರ್​ನಿಂದ ಹೆಚ್ಚುಕಡಿಮೆ ಮುಚ್ಚಿಕೊಂಡಿದ್ದ. ಅವನು ಕೂಡ ಟಕ್ಕನೆ ವೇಶ್ಯಾಗೃಹದೊಳಕ್ಕೆ ಹೋದ. ಈ ಯುವಕರಿಬ್ಬರಿಗೂ ಬಹಳವೇ ವೇದನೆಯಾಯಿತು. ‘ಏನಾಗುತ್ತಿದೆ ಇಲ್ಲಿ? ಕಾಲ ನಿಜಕ್ಕೂ ಕೆಟ್ಟುಹೋಗಿದೆ. ಒಬ್ಬ ಧರ್ಮನಿಷ್ಠ ಮನುಷ್ಯ ವೇಶ್ಯಾಗೃಹದಲ್ಲಿ?’ ಸ್ವಲ್ಪ ಸಮಯದ ನಂತರ ಆ ಊರಿನವನೇ ಆದ ಮತ್ತೊಬ್ಬ ಧರ್ಮನಿಷ್ಠ ಬಂದ. ಆ ಕಡೆ, ಈ ಕಡೆ ನೋಡಿದ ಅವನು ತನ್ನ ಉದ್ದನೆಯ ಕೋಟ್​ನಿಂದ ದೇಹವನ್ನು ಮುಚ್ಚಿಕೊಂಡು ಮೆಲ್ಲನೆ ವೇಶ್ಯಾಗೃಹದೊಳಕ್ಕೆ ನುಸುಳಿದ.

ಆಗ ಕೆಲಸಗಾರ ಯುವಕರು ಒಬ್ಬರನ್ನೊಬ್ಬರ ಮುಖ ನೋಡುತ್ತಾ, ‘ಯಾವುದೋ ಹುಡುಗಿ ತೀವ್ರವಾಗಿ ಕಾಯಿಲೆಗೆ ಒಳಗಾಗಿರಬೇಕು’ ಎಂದುಕೊಂಡರು. ನಿಮ್ಮ ಒಳ್ಳೆಯತನದ ಆಲೋಚನೆಗಳನ್ನು ಯಾವುದಾದರೊಂದು ವಿಷಯಕ್ಕೆ ಸಂಕೋಲೆಯಂತೆ ಬಂಧಿಸಿಕೊಂಡಿದ್ದರೆ ನಿಮ್ಮ ಮುಂದೆ ನಡೆಯುವುದೆಲ್ಲ ತಿರುಚಿಕೊಳ್ಳುತ್ತದೆ! ನಿಮ್ಮ ಬುದ್ಧಿಶಕ್ತಿ ಈ ಗುರುತಿಸಲ್ಪಡುವಿಕೆಗಳ ಸುತ್ತಲೂ ಹೇಗೆ ಕೆಲಸ ಮಾಡುತ್ತಿರುವುವೆಂದರೆ ಘಟನೆಯನ್ನು ಅದು ನಡೆಯುತ್ತಿರುವಂತೆ ನೋಡುವುದೇ ಇಲ್ಲ. ಅಧ್ಯಾತ್ಮದ ಅಂಶವೊಂದನ್ನು ಹುಡುಕುತ್ತಿರುವವರಾದರೆ, ಮಾಡಬೇಕಾದ ಮೊಟ್ಟಮೊದಲನೆಯ ಕೆಲಸವೆಂದರೆ ಒಳ್ಳೆಯದು-ಕೆಟ್ಟದ್ದು ಎನ್ನುವ ಆಲೋಚನೆಗಳನ್ನು ಬಿಟ್ಟುಬಿಡಬೇಕು. ಆಗ ನೀವು ಜೀವನವನ್ನು ಅದು ಹೇಗಿದೆಯೋ ಹಾಗೆ ನೋಡುವಿರಿ.

ಸದಾಚಾರವು ಪ್ರತಿಯೊಬ್ಬರಲ್ಲಿಯೂ ಬೇರೆಬೇರೆಯಾಗಿರುತ್ತದೆ. ಅದು ಸಮಯ, ಸ್ಥಳ, ಸನ್ನಿವೇಶ ಮತ್ತು ಅನುಕೂಲ ಇವುಗಳ ಮೇರೆಗೆ ಬದಲಾಗುತ್ತಿರುತ್ತದೆ. ಆದರೆ, ಚರಿತ್ರೆಯ ಯಾವುದೇ ಸಮಯದಲ್ಲಾಗಲೀ, ಯಾವುದೇ ಸ್ಥಳದಲ್ಲಾಗಲೀ, ಎಲ್ಲಿ ಸದಾಚಾರವು ತನ್ನನ್ನು ತಾನು ಅಭಿವ್ಯಕ್ತಿಗೊಳಿಸಿಕೊಳ್ಳುವುದೋ, ಅದು ಸದಾ ಒಂದೇ ಆಗಿರುತ್ತದೆ. ಮೇಲ್ನೋಟಕ್ಕೆ, ನಮ್ಮ ಮೌಲ್ಯಗಳಲ್ಲಿ, ನೀತಿಗಳಲ್ಲಿ ಮತ್ತು ಯುಕ್ತಾಯುಕ್ತತೆಗಳಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ಬೇರೆಬೇರೆ ಎನ್ನಿಸುತ್ತದೆ. ಆದರೆ ನೀವು, ಒಬ್ಬ ಮನುಷ್ಯನ ಮಾನವೀಯತೆಯನ್ನು ಮುಟ್ಟುವಷ್ಟು ಆಳವಾಗಿ ಅವನ ಒಳಹೋಗಲು ತಿಳಿದಿದ್ದರೆ, ಪ್ರತಿಯೊಬ್ಬರೂ ಎಲ್ಲವನ್ನೂ ಒಂದೇ ರೀತಿ ಮಾಡುವರು ಎಂಬುದು ಅರ್ಥವಾಗುತ್ತದೆ. ಸದಾಚಾರವನ್ನು ಹೇರಲು ಜನರೊಂದಿಗೆ ತೊಡಗಿಸಿಕೊಳ್ಳಬೇಕಿಲ್ಲ; ನೀವು ಕೇವಲ ಸೂಚನೆ ಕೊಡಬೇಕಷ್ಟೇ; ನಿಮಗಾಗಿ ಅದನ್ನು ಕಲ್ಲಿನ ಮೇಲೆ ಕೆತ್ತಬಹುದು ಸಹ! ಆದರೆ ನೀವು ಒಬ್ಬ ವ್ಯಕ್ತಿಯಲ್ಲಿನ ಮಾನವೀಯತೆಯನ್ನು ಮೇಲಕ್ಕೆ ತರಬೇಕಾದರೆ, ಅದಕ್ಕೆ ತೊಡಗಿಸಿಕೊಳ್ಳುವಿಕೆಗಿಂತ ಹೆಚ್ಚಿನದರ ಅವಶ್ಯಕತೆ ಇದೆ; ಮೊದಲು ನಿಮ್ಮನ್ನು ನೀವೇ ಕೊಟ್ಟುಕೊಳ್ಳಬೇಕು. ಸಮಾಜದಲ್ಲಿ ಕ್ರಮವನ್ನು ತರಬೇಕಾದಲ್ಲಿ ಸದಾಚಾರವು ನಿಜಕ್ಕೂ ಮೌಲ್ಯವುಳ್ಳದ್ದಾದರೂ ಆಂತರಂಗಿಕ ಅವ್ಯವಸ್ಥೆಯನ್ನು ಉಂಟುಮಾಡುತ್ತದೆ. ಮಾನವೀಯತೆಯೂ ಸಮಾಜವನ್ನು ಕ್ರಮಗೊಳಿಸುತ್ತದೆ ಆದರೆ ಯಾವುದೇ ಒತ್ತಾಯದಿಂದಲ್ಲ. ಅದು ಮನುಷ್ಯನನ್ನು ಮತ್ತಷ್ಟು ಸುಂದರನನ್ನಾಗಿ ಮಾಡುತ್ತದೆ. ನಿಮ್ಮೊಳಗೆ ಮಾನವೀಯತೆಯು ಉಕ್ಕಿ ಹರಿಯುವಂತಾದರೆ ಪಾವಿತ್ರ್ಯು ಸ್ವಾಭಾವಿಕವಾಗಿಯೇ ಅರಳುತ್ತದೆ.

ಪಾಪಪ್ರಜ್ಞೆ ಏಕೆ?: ಪ್ರಪಂಚದ ಪ್ರಮುಖ ಮತಗಳು ‘ಪಾಪ’ವೆನ್ನುವ ಸಂಗತಿಗಳನ್ನು ನೋಡಿದರೆ ಬದುಕಿರುವುದೇ ಪಾಪ ಎನಿಸಿಬಿಡುತ್ತದೆ. ಹುಟ್ಟಿದರೆ ಪಾಪ; ಮುಟ್ಟಾದರೆ ಪಾಪ, ಕೇವಲ ಚಾಕೊಲೇಟ್ ತಿಂದರೂ ನೀವು ಪಾಪವನ್ನು ಮಾಡುತ್ತಿರುವಿರಿ! ಜೀವನದ ಕಾರ್ಯವಿಧಾನವೇ ಪಾಪವಾಗಿರುವಾಗ, ಸದಾ ತಪ್ಪಿತಸ್ಥ ಮನೋಭಾವ ಅಥವಾ ಭಯದಲ್ಲಿರುವಿರಿ. ಜನರಲ್ಲಿ ಪಾಪ ಮತ್ತು ತಪ್ಪಿತಸ್ಥ ಮನೋಭಾವ ಇಲ್ಲದಿದ್ದರೆ, ದೇವಾಲಯಗಳು,

ಚರ್ಚ್​ಗಳು, ಮಸೀದಿಗಳು ಎಂದಿಗೂ ತುಂಬಿ ತುಳುಕುತ್ತಿರಲಿಲ್ಲ. ನಿಮ್ಮಲ್ಲಿ ನೀವೇ ಆನಂದವಾಗಿದ್ದಲ್ಲಿ ಬೀಚ್​ಗೆ ಹೋಗಿ ಕುಳಿತಿರುತ್ತಿದ್ರಿ, ಮರಗಳ ಎಲೆಗಳ ಪಿಸುಮಾತು ಕೇಳಿಸಿಕೊಳ್ಳುತ್ತಿದ್ರಿ. ಈ ರಿಲಿಜನ್​ಗಳು ಎಂತಹ ತಪ್ಪಿತಸ್ಥ ಮನೋಭಾವ, ಭಯ ಮತ್ತು ಅಪಮಾನವನ್ನು ತುಂಬಿರುವುವೆಂದರೆ ನಿಮ್ಮ ಅಸ್ತಿತ್ವದ ಬಗ್ಗೆಯೇ ನೀವು ನಾಚಿಕೊಳ್ಳುತ್ತಿದ್ದೀರಿ, ನಿಮ್ಮ ದೇಹದ ಬಗ್ಗೆಯೇ ನಾಚಿಕೆಗೊಂಡಿದ್ದೀರಿ.

ನೀವು ಸಂತೋಷಭರಿತರಾಗಿದ್ದರೆ, ಆನಂದದಿಂದಿದ್ದರೆ, ಸ್ವಾಭಾವಿಕವಾಗಿ ಸುತ್ತಲಿನ ಜನರೊಂದಿಗೆ ನಯವಾಗಿರುತ್ತೀರಿ. ಅಧ್ಯಾತ್ಮ ಎಂದರೆ ಜೀವನದಿಂದ ದೂರ ಹೋಗುವುದಲ್ಲ; ಸಾಧ್ಯವಾದಷ್ಟು, ಬೇರಿನವರೆಗೂ ಜೀವಂತಿಕೆಯಿಂದಿರುವುದು ಎಂದರ್ಥ. ವಯಸ್ಸಾಗುತ್ತಿದ್ದಂತೆ, ದೈಹಿಕ ಚುರುಕುತನ ಕಡಿಮೆಯಾಗಬಹುದು, ಆದರೆ ಸಂತೋಷ, ಜೀವಂತಿಕೆ ಕಡಿಮೆಯಾಗಬೇಕಿಲ್ಲ. ಸಂತೋಷ ಮತ್ತು ಜೀವಂತಿಕೆಯ ಮಟ್ಟ ಕಡಿಮೆಯಾಗುತ್ತಿರುವುದೆಂದರೆ ನೀವು ಕಂತುಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಿರಿ ಎಂದರ್ಥ. ದುರದೃಷ್ಟವಶಾತ್, ಎಲ್ಲ ನಂಬಿಕೆಯ ವ್ಯವಸ್ಥೆಗಳಿಗೂ ‘ಅಧ್ಯಾತ್ಮ’ದ ಹಣೆಪಟ್ಟಿಯಿಟ್ಟು ಬಳಸಲಾಗುತ್ತಿದೆ. ಆಧ್ಯಾತ್ಮಿಕ ಕಾರ್ಯವಿಧಾನವು ಎಂದಿಗೂ ಒಂದು ಅನ್ವೇಷಣೆ, ಹುಡುಕುವಿಕೆ. ಅರ್ಥಪೂರ್ಣ ವ್ಯತ್ಯಾಸವೆಂದರೆ, ನಂಬುವುದು ಎನ್ನುವುದು ನೀವು ನಿಮಗೆ ತಿಳಿಯದಿರುವುದು ಯಾವುದನ್ನೋ ಕಲ್ಪನೆ ಮಾಡಿಕೊಂಡಿದ್ದೀರಿ; ಹುಡುಕುವಿಕೆ ಎಂದರೆ ನೀವು ಅದು ತಿಳಿದಿಲ್ಲವೆಂದು ಮನಗಂಡಿದ್ದೀರಿ ಎಂದರ್ಥ. ಅಲ್ಲಿ ಬೃಹತ್ತಾದ ನಮ್ಯತೆಯ ಮೊತ್ತವಿದೆೆ. ನೀವು ಯಾವುದಾದರೂ ವಿಷಯವನ್ನು ನಂಬಿದ ಕ್ಷಣವೇ ನಿಮ್ಮ ಜೀವನದ ಕಾರ್ಯವಿಧಾನಕ್ಕೆ ಒಂದು ನಿರ್ದಿಷ್ಟ ಕಠಿಣತೆ ತರುತ್ತಿರುವಿರಿ. ಕಠಿಣತೆ ಎನ್ನುವುದು ಕೇವಲ ಮನೋಧರ್ಮವಲ್ಲ; ಅದು ನಿಮ್ಮ ಜೀವನದ ಪ್ರತಿ ಅಂಶಕ್ಕೆ ಜಿನುಗುತ್ತದೆ ಮತ್ತು ಪ್ರಪಂಚದಲ್ಲಿ ಬೃಹತ್ ಮೊತ್ತದ ನೋವಿಗೆ ಕಾರಣವಾಗುತ್ತದೆ. ಮಾನವ ಸಮಾಜವು ಯಾವಾಗಲೂ ಅದರ ಜನರ ಪ್ರತಿಬಿಂಬ. ಬೇರೆ ರೀತಿಯ ಸಮಾಜ ಬೇಕಾದರೆ ನಮ್ಯತೆಯ ಮನುಷ್ಯರನ್ನು ಸೃಷ್ಟಿಸಬೇಕು. ಅವರು ಎಲ್ಲವನ್ನೂ ನೋಡಲು ಇಷ್ಟವುಳ್ಳವರಾಗಿರಬೇಕು; ತಮ್ಮದೇ ಆದ ಯಾವುದೇ ಆಲೋಚನೆ, ಅಭಿಪ್ರಾಯಗಳಲ್ಲಿ ಸಿಕ್ಕಿಕೊಂಡಿರಬಾರದು.

ಯೋಗವೊಂದು ವಿಧಾನ, ಒಂದು ಉಪಕರಣ, ಒಂದು ವೈಜ್ಞಾನಿಕ ಕಾರ್ಯವಿಧಾನ. ಅದಕ್ಕೆ ಶ್ರದ್ಧೆ, ನಂಬಿಕೆ ಅಥವಾ ಆಶಾವಾದ ಬೇಕಿಲ್ಲ. ಏಕೆಂದರೆ ಅದರ ಫಲಿತಾಂಶಗಳೇ ಅದನ್ನು ಸಾಬೀತುಗೊಳಿಸಿವೆ. ಯೋಗ ಒಂದು ಒಳ್ಳೆಯ ಬೀಜವಿದ್ದಂತೆ. ಅದಕ್ಕೆ ಸರಿಯಾದ ವಾತಾವರಣವನ್ನು ಸೃಷ್ಟಿಸಿದರೆ, ಅದು ಮೊಳಕೆಯೊಡೆಯುತ್ತದೆ. ಸರಿಯಾದ ವಾತಾವರಣದವನ್ನು ಸೃಷ್ಟಿಸುವುದೊಂದೇ ಕೆಲಸ. ನೀವು ಬೇರೇನೂ ಮಾಡಬೇಕಿಲ್ಲ; ಯಾವುದೇ ನೀತಿಪಾಠಗಳು ಬೇಕಿಲ್ಲ, ಪ್ರೀತಿಯೂ ಬೇಕಿಲ್ಲ. ಮಾನವೀಯತೆ ಬಲವಾಗಿದ್ದರೆ, ನಿಮಗೆ ಸದಾಚಾರ ಬೇಕಿಲ್ಲ; ನೀವು ಹೇಗೂ ಸುಂದರ ಮನುಷ್ಯ.

ಪಕ್ವವಾದ ಮನುಷ್ಯನೆಂದರೆ ಜೀವನದ ಎಲ್ಲ ಸಾಧ್ಯತೆಗಳೂ ಅವನಲ್ಲಿ ಸೇರಿವೆ. ನಿಮ್ಮ ಹೆಣಗಾಟವು ಈ ಜೀವನವನ್ನು ಹೇಗೆ ಮುಕ್ತಗೊಳಿಸಬೇಕು ಎನ್ನುವುದರ ಕಡೆಗಿರಬೇಕೇ ಹೊರತು ಅದನ್ನು ನಿಯಂತ್ರಿಸುವುದರ ಕಡೆಗಲ್ಲ. ಮುಕ್ತತೆಯತ್ತ ಹೆಣಗುವುದು ಎಲ್ಲ ನಕಾರಾತ್ಮಕ ಚಟುವಟಿಕೆಗಳ ಪರಿಮಿತಿಗಳ ವಿರುದ್ಧ ವಿಮೆ. ಮಿತಿಗಳಿಂದ ಮುಕ್ತತೆಯೆಡೆಗೆ, ಅದು ಸರಿಯಾದ ದಾರಿ.

Leave a Reply

Your email address will not be published. Required fields are marked *

Back To Top