Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

 ಹುಲಿರಾಯನಿಗೆ ಸಿಕ್ಕ ಜಿಂಕೆ ಚಿರಶ್ರೀ

Thursday, 14.09.2017, 3:00 AM       No Comments

ಬೆಂಗಳೂರು: ಆಕೆ ಅರಣ್ಯ ರಕ್ಷಕನ ಮಗಳು. ತೀರಾ ಮುಗ್ಧೆ. ಅದೆಷ್ಟರಮಟ್ಟಿಗೆ ಮುಗ್ಧೆ ಅಂದರೆ ಮಾತಿಗಿಂತ ಮೌನದಲ್ಲೇ ಆಕೆಯ ಸಂಭಾಷಣೆ ಹೆಚ್ಚು! ಅರವಿಂದ್ ಕೌಶಿಕ್ ನಿರ್ದೇಶನದ ‘ಹುಲಿರಾಯ’ ಸಿನಿಮಾದಲ್ಲಿ ಬರುವ ಪಾತ್ರವೊಂದರ ವಿವರಣೆಯಿದು. ಇಬ್ಬರು ನಾಯಕಿಯರ ಪೈಕಿ ಈ ಪಾತ್ರಕ್ಕೆ ನಟಿ ಚಿರಶ್ರೀ ಬಣ್ಣ ಹಚ್ಚಿದ್ದಾರೆ. ‘ಸಿನಿಮಾ ಶುರುವಾಗುವುದೇ ಕಾಡಿನಿಂದ. ನಾನಿಲ್ಲಿ ಒಬ್ಬ ಅರಣ್ಯ ರಕ್ಷಕನ ಮಗಳು. ನನಗೆ ನನ್ನದೇ ಆದ ಕನಸುಗಳಿರುತ್ತವೆ. ಜೀವನದ ಬಗ್ಗೆ ನಾನೇ ಒಂದು ಸುಂದರ ಅರಮನೆ ಕಟ್ಟಿಕೊಂಡಿರುತ್ತೇನೆ. ನನ್ನ ಸಂಗಾತಿಯಾಗುವವನು ಹೇಗೆಲ್ಲ ಇರಬೇಕೆಂದು ಕನಸು ಕಾಣುತ್ತಿರುತ್ತೇನೆ. ಹೀಗಿರುವಾಗ ಹುಲಿರಾಯ ನನ್ನ ಬಾಳಲ್ಲಿ ಎಂಟ್ರಿ ಆಗುತ್ತಾನೆ. ಆಮೇಲೆ ಏನೆಲ್ಲ ನಡೆಯುತ್ತದೆ ಎಲ್ಲವೂ ಸಸ್ಪೆನ್ಸ್’ ಎನ್ನುತ್ತ ಪಾತ್ರದ ವಿವರಣೆ ನೀಡುತ್ತಾರೆ ಚಿರಶ್ರೀ.

ಸಿನಿಮಾದಲ್ಲಿ ಇವರಿಬ್ಬರ ಲವ್​ಸ್ಟೋರಿಯನ್ನು ತೀರಾ ಭಿನ್ನವಾಗಿ ಹಿಂದೆಂದೂ ತೋರಿಸದ ರೀತಿಯಲ್ಲಿ ಚಿತ್ರೀಕರಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರಂತೆ. ಇಬ್ಬರ ನಡುವೆ ಬಾಯಿ ಮಾತಿಗಿಂತ ಕಣ್ಣ ಸನ್ನೆ ಮೂಲಕವೇ ಹೆಚ್ಚು ಮಾತುಕತೆ ನಡೆಯುತ್ತದಂತೆ. ಸಣ್ಣ ಭಯ, ಮಧುರ ಪ್ರೀತಿ, ದಿಗಿಲು ಎಲ್ಲವನ್ನೂ ಚಿರಶ್ರೀ ಕಣ್ಣಲ್ಲೇ ತೋರಿಸಿದ್ದಾರಂತೆ.

‘ಚಿರಶ್ರೀ ಪಾತ್ರ ಪೂರ್ತಿ ಕಾಡಿನಲ್ಲಿಯೇ ಸುತ್ತುವುದರಿಂದ ಪಟ್ಟಣಕ್ಕೆ ಆ ಪಾತ್ರದ ಟಚ್ ಇರುವುದಿಲ್ಲ. ಕೊಟ್ಟ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಶೀಘ್ರದಲ್ಲಿ ಚಿತ್ರದ ಮತ್ತೊಂದು ಟ್ರೇಲರ್ ಬಿಡುಗಡೆಯಾಗಲಿದೆ. ಬಳಿಕ ಸಿನಿಮಾ ಬಿಡುಗಡೆ ಮಾಡಲಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಅರವಿಂದ್ ಕೌಶಿಕ್.

ವಿಶೇಷ ಏನೆಂದರೆ ಚಿರಶ್ರೀ ಸದ್ಯ ಹ್ಯಾಟ್ರಿಕ್ ಬಾರಿಸಲಿದ್ದಾರೆ. ‘ಹುಲಿರಾಯ’ ಸಿನಿಮಾ ಜತೆಗೆ ನಿರ್ದೇಶಕ ಶಿವರಾಜ್ ಅವರ ‘ಉಡುಂಬ’, ಯಂಡಮೂರಿ ವೀರೇಂದ್ರನಾಥ್ ನಿರ್ದೇಶನದ ‘ಕರಿಕಂಬಳಿಯಲ್ಲಿ ಮಿಡಿನಾಗರ’ ಚಿತ್ರಗಳು ಕೂಡ ಬಿಡುಗಡೆಗೆ ಸಿದ್ಧವಾಗಿವೆ. ಸದ್ದಿಲ್ಲದೆ ತಮಿಳಿನ ‘ಮಲೈತೆನೆ’ ಚಿತ್ರಕ್ಕೂ ಚಿರಶ್ರೀ ಸಹಿ ಹಾಕಿದ್ದಾರೆ. ತುಳುವಿನಲ್ಲಿ ತಯಾರಾಗಲಿರುವ ‘ಆಪಿನ್ ಮಾತಾ ಇದ್ದೇಗೆ’ ಚಿತ್ರದಲ್ಲೂ ನಟಿಸಲಿದ್ದಾರೆ. ಈ ಮೂಲಕ ಅವರು ಬಹುಭಾಷಾ ತಾರೆಯಾಗಿದ್ದಾರೆ.

Leave a Reply

Your email address will not be published. Required fields are marked *

Back To Top