Thursday, 22nd March 2018  

Vijayavani

ಮುಂದಿನ ಚುನಾವಣೆಯಲ್ಲಿ ಮೋದಿ ಸೋಲ್ತಾರೆ- ಇಂದಿರಾಗಾಂಧಿಯಂತೆ ನಮ್ಮನ್ನೂ ಗೆಲ್ಲಿಸಿ- ಚಿಕ್ಕಮಗಳೂರಿನಲ್ಲಿ ರಾಹುಲ್‌ ಟಾಕ್‌ವಾರ್‌        ಕುಡಿದು ಅಡ್ಡಾದಿಡ್ಡಿ ಬಸ್‌ ಚಲಾಯಿಸಿದ- ಕಾರು, ಬೈಕ್‌ ಮರಕ್ಕೆ ಡಿಕ್ಕಿ ಹೊಡೆಸಿದ- ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ ಅವಾಂತರ        ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ವಿಚಾರ- ಹೈಕೋರ್ಟ್​ಗೆ ಅಭಿಪ್ರಾಯ ತಿಳಿಸಿದ ಸ್ಪೀಕರ್​- ಮುಚ್ಚಿದ ಲಕೋಟೆಯಲ್ಲಿ ಎಜಿ ಮೂಲಕ ರವಾನೆ        5 ಕೋಟಿ ಫೇಸ್​ಬುಕ್‌ಗಳ ಮಾಹಿತಿ ಹ್ಯಾಕ್- ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗಂಭೀರ ಆರೋಪ- ರವಿಶಂಕರ್‌ ಆರೋಪಕ್ಕೆ ಕೈತಿರುಗೇಟು        ಬೈಕ್ ಸವಾರನ ಮೇಲೆ ಬಿದ್ದ ಬೃಹತ್ ಮರ- ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರು- ಹೆಲ್ಮೆಟ್​ ಪುಡಿಪುಡಿ ತಲೆ ಸೇಫ್​       
Breaking News

ಹುತಾತ್ಮ ವಿಂಗ್​ಕಮಾಂಡರ್ ವಿಕಾಸ್ ಹುಬ್ಬಳ್ಳಿಯ ಅಳಿಯ

Sunday, 08.10.2017, 3:24 AM       No Comments

ಹುಬ್ಬಳ್ಳಿ: ಅರುಣಾಚಲ ಪ್ರದೇಶದ ತವಾಂಗ್ ಬಳಿ ಶುಕ್ರವಾರ ಬೆಳಗಿನ ಜಾವ ಭಾರತೀಯ ವಾಯುಪಡೆಯ ‘ಎಂಐ- 17’ ಹೆಲಿಕಾಪ್ಟರ್ ದುರಂತದಲ್ಲಿ ವೀರಮರಣ ಅಪ್ಪಿದ ವಿಂಗ್ ಕಮಾಂಡರ್ ವಿಕಾಸ್ ಉಪಾಧ್ಯಾಯ (38) ಹುಬ್ಬಳ್ಳಿ ಅಳಿಯ.

85ನೇ ವಾಯುಪಡೆ ದಿನದ ಸಂಭ್ರಮದ ಮುನ್ನಾ ದಿನವೇ ಹೆಲಿಕಾಪ್ಟರ್ ದುರಂತ ಸಂಭವಿಸಿ 7 ಯೋಧರು ಮೃತಪಟ್ಟಿರುವುದು ದೇಶದ ಜನತೆಗೆ ಇನ್ನಿಲ್ಲದ ನೋವುಂಟು ಮಾಡಿದೆ. ವಾಯು ಪಡೆಯಲ್ಲಿ ಸಾಮಾನ್ಯ ಅಧಿಕಾರಿಯಾಗಿ ಸೇವೆಗೆ ಸೇರಿಕೊಂಡಿದ್ದ ವಿಕಾಸ್ ಉಪಾಧ್ಯಾಯ ಇತ್ತೀಚೆಗಷ್ಟೇ ವಿಂಗ್ ಕಮಾಂಡರ್ ಆಗಿ ಬಡ್ತಿ ಪಡೆದಿದ್ದರು.

ದೆಹಲಿಯ ಪಿಡಬ್ಲ್ಯುಡಿ ನಿವೃತ್ತ ಇಂಜಿನಿಯರ್ ಆನಂದ ಉಪಾಧ್ಯಾಯರ ಏಕೈಕ ಪುತ್ರ ವಿಕಾಸ್, 2007 ಫೆಬ್ರವರಿ 7ರಂದು ಹುಬ್ಬಳ್ಳಿಯ ನಿವೃತ್ತ ಇಂಜಿನಿಯರ್ ಎ. ಗೋವಿಂದಯ್ಯ ಹಾಗೂ ಸಾಮಾಜಿಕ ಕಾರ್ಯಕರ್ತೆ ಜಿ. ಶಾರದಾ ಪುತ್ರಿ ಜಿ. ತೇಜಸ್ವಿನಿ ಅವರನ್ನು ವಿವಾಹವಾಗಿದ್ದರು. ತೇಜಸ್ವಿನಿ ಕೂಡ ವಾಯುಪಡೆ ಅಧಿಕಾರಿಯಾಗಿ ಸೇವಾ ನಿವೃತ್ತಿ ಹೊಂದಿದ್ದಾರೆ. ಚೀನಾ ಗಡಿಭಾಗದ

ಯೋಧರಿಗೆ ಅಗತ್ಯ ಸಾಮಗ್ರಿ ಪೂರೈಸಿ ಹಿಂದಿರುಗುತ್ತಿದ್ದ ವೇಳೆ ಶುಕ್ರವಾರ ಬೆಳಗ್ಗೆ 6.30ಕ್ಕೆ ಅರುಣಾಚಲ ಪ್ರದೇಶದ ತವಾಂಗ್ ಬಳಿ ಹೆಲಿಕಾಪ್ಟರ್ ಪತನಗೊಂಡಿದೆ.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲೆಂದು ತೇಜಸ್ವಿನಿ ಸಹೋದರಿ ಮನಸ್ವಿನಿ ಹಾಗೂ ಆಕೆಯ ಪತಿ ಗೌರವ್ ಖಂಡಪುರ್ ಹಾಗೂ ಮಕ್ಕಳು ದೆಹಲಿಗೆ ತೆರಳಿದ್ದಾರೆ.

Leave a Reply

Your email address will not be published. Required fields are marked *

Back To Top