Tuesday, 26th September 2017  

Vijayavani

1. ಗಡಿಯಲ್ಲಿ ಬಾಲ ಬಿಚ್ಚಿದ್ರೆ ಹುಷಾರ್​- ನಡೆಯಲಿದೆ ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​- ಪಾಕ್​ಗೆ ಬಿಪಿನ್​ ರಾವತ್​ ವಾರ್ನಿಂಗ್​ 2. ಮ್ಯಾನ್ಮಾರ್‌ನಲ್ಲಿ ಭುಗಿಲೆದ್ದ ಹಿಂಸಾಚಾರ- ಪ್ರತಿಕಾರಕ್ಕಿಳಿದ ರೋಹಿಂಗ್ಯಾ ಮುಸ್ಲಿಂರು- 92 ಜನರ ಭೀಕರ ಕಗ್ಗೊಲೆ 3. ವಿಶ್ವಕ್ಕೆ 3ನೇ ಮಹಾಯುದ್ಧದ ಭೀತಿ- ಕೋರಿಯಾ ದೃಷ್ಟಿಯಲ್ಲಿ ಅಮೆರಿಕಾವೇ ಆರೋಪಿ- ಸಮರಕ್ಕೆ ಸಿದ್ಧ ಎಂದ ಸರ್ವಾಧಿಕಾರಿ 4. ಗದಗ್​ನಲ್ಲಿ ಯಶಸ್ವಿಯಾದ ಸ್ವಚ್ಛ ಭಾರತ- ನರಗುಂದ ತಾಲೂಕು ಬಯಲು ಶೌಚಮುಕ್ತ- ಇಂದು ಉಪರಾಷ್ಟ್ರಪತಿಗಳಿಂದ ಅಧಿಕೃತ ಘೋಷಣೆ 5. ಮಳೆಗೆ ತತ್ತರಿಸಿದ ಬೆಣ್ಣೆ ದೋಸೆ ನಗರಿ- ಮಲೆನಾಡಲ್ಲಿ ಮನೆಗೆ ನುಗ್ಗಿದ ನೀರು- ಇತ್ತ ಕೋಲಾರದಲ್ಲಿ ನೂರಾರು ಎಕರೆ ಬೆಳೆ ನಾಶ
Breaking News :

ಹೀರೋಯಿನ್ ಖುಷಿಯಲ್ಲಿ ಸಂಚಾರಿ!

Monday, 17.07.2017, 3:03 AM       No Comments

| ಮಂಜು ಕೊಟಗುಣಸಿ ಬೆಂಗಳೂರು

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿ. ಒಂದಲ್ಲ ಎರಡಲ್ಲ 3-4 ಚಿತ್ರಗಳು ರಿಲೀಸ್​ಗೆ ರೆಡಿ ಇದ್ದರೆ, 5-6 ಸಿನಿಮಾಗಳ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಈ ಮಧ್ಯೆ ಆಗಸ್ಟ್​ನಲ್ಲಿ ತೆರೆ ಕಾಣಲಿರುವ ‘ನನ್ ಮಗಳೇ ಹೀರೋಯಿನ್’ ಸಿನಿಮಾದ ಬಗ್ಗೆ ಸ್ಟಾರ್​ಗಳಿಂದ ಸಿಕ್ಕ ಪ್ರಶಂಸೆ, ಸಿನಿಮಾದ ಬಗೆಗಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಇದೆಲ್ಲದಕ್ಕಿಂತ ವಿಶೇಷ ಇಂದು (ಜು.17) 35ನೇ ವಸಂತಕ್ಕೆ ಸಂಚಾರಿ ವಿಜಯ್ ಕಾಲಿರಿಸಿದ್ದಾರೆ. ಇದೇ ಖುಷಿಯಲ್ಲಿ ನಮಸ್ತೆ ಬೆಂಗಳೂರು ಜತೆ ಮಾತನಾಡಿದ್ದಾರೆ.

‘ಹೀರೋಯಿನ್’ ಹೇಗಿದ್ದಾರೆ?

ತುಂಬ ಚೆನ್ನಾಗಿದ್ದಾಳೆ. ನೋಡಲು ಮುದ್ದು ಮುದ್ದಾಗಿದ್ದಾಳೆ. ಅಂದುಕೊಂಡಿದ್ದಕ್ಕಿಂತ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಆಗಸ್ಟ್​ನಲ್ಲಿ ಬಿಡುಗಡೆ ಮಾಡಲಿದ್ದೇವೆ. ಅದಕ್ಕಾಗಿಯೇ ಪ್ರಚಾರ ಕಾರ್ಯಗಳನ್ನು ಸಾಧ್ಯವಾದ ಮಟ್ಟಿಗೆ ಬಿರುಸುಗೊಳಿಸುತ್ತಿದ್ದೇವೆ. ಈ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಇದು ನನ್ನ ಪಾಲಿನ ತೀರಾ ಭಿನ್ನವಾದ ಚಿತ್ರ. ಸಿನಿಮಾ ನಿರ್ವಣವಾಗುವ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ.

ಹೌದಾ, ಏನದು ವಿಶೇಷ ಉಡುಗೊರೆ?

‘ನನ್ ಮಗಳೇ ಹೀರೋಯಿನ್’ ಚಿತ್ರದ ಟೀಸರ್​ವೊಂದನ್ನು ಸ್ಟಾರ್​ನಟರು ನೋಡಿ ಶುಭ ಕೋರಿದ್ದಾರೆ. ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್, ಶರಣ್, ರಕ್ಷಿತ್ ಶೆಟ್ಟಿ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಚಿತ್ರದ ಬಗ್ಗೆ ವಿಶೇಷ ವಿಡಿಯೋವೊಂದನ್ನು ಮಾಡಿಕೊಟ್ಟಿದ್ದಾರೆ. ಇನ್ನು ಹಲವಾರು ನಟರಿಗೆ ಟೀಸರ್ ತೋರಿಸುವ ಉದ್ದೇಶವಿದೆ. ಆ ಬಳಿಕ ಟೀಸರ್ ಬಿಡುಗಡೆ ಮಾಡಲಿದ್ದೇವೆ. ಅದರಲ್ಲೂ ಶಿವರಾಜ್​ಕುಮಾರ್ ಹಾಗೂ ಪುನೀತ್ ಅವರು ‘ಬೇಗ ಸಿನಿಮಾ ತೋರಿಸಿ…’ ಎಂದಿದ್ದಾರೆ.

ಇಂದು ನಿಮ್ಮ ಜನ್ಮದಿನ. ಅದಕ್ಕಾಗಿ ಏನಾದರೂ ಟೀಸರ್, ಟ್ರೇಲರ್ ರಿಲೀಸ್ ಆಗುತ್ತಾ?

‘ನನ್ ಮಗಳೇ ಹೀರೋಯಿನ್’ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಪ್ಲಾನ್ ಮಾಡಲಾಗಿತ್ತು. ಆದರೆ ಕೊನೇ ಗಳಿಗೆಯಲ್ಲಿ ಬದಲಾಯಿತು. ಹಾಗಂತ ಜನ್ಮದಿನಕ್ಕೆ ಉಡುಗೊರೆ ಇಲ್ಲ ಎಂದೇನಿಲ್ಲ. ಈಗಾಗಲೇ ಹಲವು ಸ್ಟಾರ್​ಗಳಿಂದ ವಿಶೇಷ ಉಡುಗೊರೆ ಪಡೆದಿದ್ದೇನೆ.

ಹಿರಿಯ ನಿರ್ದೇಶಕ ಭಗವಾನ್ ಅವರೊಂದಿಗೆ ಸಿನಿಮಾ ಮಾಡುವ ಬಗ್ಗೆ ಹೇಳಿ?

ರಾಜ್​ಕುಮಾರ್, ವಿಷ್ಣುವರ್ಧನ್ ಅವರಂತಹ ದೊಡ್ಡ ದೊಡ್ಡ ನಟರಿಗೆ ನಿರ್ದೇಶನ ಮಾಡಿದ ಹಿರಿಯ ನಿರ್ದೇಶಕರವರು. ಅಂತಹ ನಿರ್ದೇಶಕರು ‘ನಾನೊಂದು ಸಿನಿಮಾ ಮಾಡುತ್ತಿದ್ದೇನೆ, ನೀನು ಪಾತ್ರ ಮಾಡಬೇಕು’ ಎಂದು ಕರೆ ಮಾಡಿದ್ದರು. ನನಗೆ ಹಾಗಂದ ತಕ್ಷಣ ಮಾತೇ ಹೊರಡಲಿಲ್ಲ. ಸದ್ಯ ಭಗವಾನ್ ಅವರು ಹೇಳಿದ ಕಥೆ ಕೇಳಿದ್ದೇನೆ. ಹೊಸತನ, ಹೊಸ ಜನರೇಶನ್ ಜತೆಗೆ ಅವರು ಕನೆಕ್ಟ್ ಆಗುವ ರೀತಿಯೇ ರೋಚಕ. ಅದರಲ್ಲೂ ಇಪತ್ತು ವರ್ಷದ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿಯುತ್ತಿರುವುದು ವಿಶೇಷ. ಹೀಗಾಗಿಯೇ ನನ್ನ ಕುತೂಹಲ ದುಪ್ಪಟ್ಟಾಗಿದೆ.

ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರಲಿದೆ?

ಕಥೆ ವಿವರಿಸಿದರೆ ಥ್ರಿಲ್ ಹೋಗಿಬಿಡುತ್ತೆ. ಇನ್ನೇನು ಟೀಸರ್ ರಿಲೀಸ್ ಆಗಲಿದೆ. ಅಲ್ಲಿಯೇ ನೋಡಿದರೆ ಚೆನ್ನ. ಇದನ್ನು ಹೊರತುಪಡಿಸಿದರೆ ಈ ಸಿನಿಮಾದಲ್ಲಿಯೇ ಒಂದು ಸಿನಿಮಾ ತಯಾರಾಗು ತ್ತಿರುತ್ತದೆ. ಅಲ್ಲಿನ ಚಿತ್ರಕ್ಕೂ ಒಬ್ಬ ನಿರ್ದೇಶಕ, ಅದಕ್ಕೊಬ್ಬ ಹೀರೋ, ಹೀರೋಯಿನ್. ಪಕ್ಕಾ ಕಾಮಿಡಿ ಪಾತ್ರ ನನ್ನದು. ನನ್ನೊಂದಿಗೆ ಹಲವು ದಿಗ್ಗಜ ಹಾಸ್ಯ ನಟರು ತೆರೆಹಂಚಿಕೊಂಡಿದ್ದಾರೆ. ತಬಲಾ ನಾಣಿ, ಪವನ್, ಬುಲೆಟ್ ಪ್ರಕಾಶ್ ನಗಿಸಲಿದ್ದಾರೆ.

‘..ಹೀರೋಯಿನ್’ ಸಿನಿಮಾ ನಿಮಗೆ ಇಷ್ಟವಾಗೋಕೆ ಕಾರಣ ಏನು?

ನನ್ನ ಸಿನಿಮಾ ಕರಿಯರ್​ಗೆ ‘ನನ್ ಮಗಳೇ..’ ಚಿತ್ರ ತುಂಬ ಹೊಸತು. ಈ ಹಿಂದಿನ ಚಿತ್ರಗಳಲ್ಲಿ ಗಂಭೀರ ಪಾತ್ರಗಳಲ್ಲಿಯೇ ನಾನು ಹೆಚ್ಚು ಕಾಣಿಸಿಕೊಂಡಿದ್ದೆ. ಇದೀಗ ಹಾಸ್ಯ ಮಿಶ್ರಿತ ಸಿನಿಮಾದಲ್ಲಿ ನಟಿಸಿರುವುದು ಖುಷಿನೀಡಿದೆ. ಮೊದಲಿಂದಲೂ ಹಾಸ್ಯ ನಟನಾಗಬೇಕೆಂದುಕೊಂಡೇ ನಾನು ಸಿನಿಮಾರಂಗಕ್ಕೆ ಬಂದದ್ದು. ಆದರೆ ಅಂಥದ್ದೊಂದು ಪಾತ್ರ ತುಂಬ ದಿನಗಳ ಬಳಿಕ ಸಿಕ್ಕಿದೆ.

Leave a Reply

Your email address will not be published. Required fields are marked *

Back To Top