Monday, 25th June 2018  

Vijayavani

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ವಿಚಾರ- ಪರಂ, ಸಿದ್ದು ನಡುವೆ ಮೂಡದ ಒಮ್ಮತ- ಸಿದ್ದು ಟ್ರೀಟ್‌ಮೆಂಟ್‌ ಮುಗಿಯೋವರೆಗೂ ವೇಟಿಂಗ್‌        ಸಾಲಮನ್ನಾ ಹೇಗೆ ಮಾಡ್ತಾರೆ ಕಾದು ನೋಡ್ತೀನಿ- ಜೆಡಿಎಸ್‌ ಅಂದಿದಕ್ಕೆಲ್ಲಾ ತಲೆ ಅಲ್ಲಾಡಿಸಬೇಡಿ- ಪರಂಗೆ ಸಿದ್ದರಾಮಯ್ಯ ಕಿವಿಮಾತು        ಐಎಎಸ್‌ ಅಧಿಕಾರಿಗಳ ಫೀಡ್‌ಬ್ಯಾಕ್‌ ಕೇಳಿದ ಕೇಂದ್ರ- ಎಲ್ಲಾ ರಾಜ್ಯಗಳಿಗೂ ಸುತ್ತೋಲೆ ರವಾನೆ- ಬಡ್ತಿ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟ ಮೋದಿ ಸರ್ಕಾರ        ಸಿಎಂ ಗ್ರಾಮ ವಾಸ್ತವ್ಯದ ಫಲದಿಂದ ಬಂತು ಬಸ್‌- ಎಚ್‌ಡಿಕೆ ಸೇತುವೆ ಭರವಸೆ ಠುಸ್‌- ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಗ್ರೌಂಡ್‌ ರಿಪೋರ್ಟ್‌        ಕೈಗಾ ಸುತ್ತಮುತ್ತಾ ಕ್ಯಾನ್ಸರ್‌ ಭೀತಿ- ಭಯ ಪಡಬೇಡಿ ಇದು ಕೇವಲ ವದಂತಿ- ಉತ್ತರಕನ್ನಡ ಜನತೆಗೆ ಜಿಲ್ಲಾಧಿಕಾರಿ ಅಭಯ        ಊಟ, ತಿಂಡಿ, ಸ್ನ್ಯಾಕ್ಸ್‌ ಎಲ್ಲದಕ್ಕೂ ಅದೇ- 19 ವರ್ಷದಿಂದ ಪಾರ್ಲೆ ಜಿ ಬಿಸ್ಕೆಟ್‌ ತಿಂದೇ ಜೀವನ- ಚಿಕ್ಕೋಡಿ ಯುವತಿ ವೈದ್ಯಲೋಕಕ್ಕೆ ಸವಾಲ್‌       
Breaking News

ಹೀಗೊಂದು ಅಂಡರ್​ಗ್ರೌಂಡ್ ಸ್ಟೋರಿ…!!

Wednesday, 13.06.2018, 3:00 AM       No Comments

ಇದು ಫ್ರಾನ್ಸ್​ನಿಂದ ವರದಿಯಾಗಿರುವ ಘಟನೆ. ಅಲ್ಲಿನ ಬ್ರಿಟಾನಿ ಎಂಬ ಪ್ರದೇಶದಲ್ಲಿ ಹಳೆಯ ಮನೆಯೊಂದನ್ನು ಒಡೆದುಹಾಕಲು ಕಟ್ಟಡ ಕೆಡಹುವ ಸಂಸ್ಥೆಯೊಂದಕ್ಕೆ ಕರೆಮಾಡಲಾಯಿತು. ತಂಡದವರು ಒಂದಿಂಚೂ ಬಿಡದಂತೆ ಮನೆಯನ್ನು ಅಗೆಯುತ್ತಿರುವಾಗ ಸೀಸದ ಕರಂಡಕವೊಂದು ಕಣ್ಣಿಗೆ ಬಿತ್ತು. ಮೊದಲ ನೋಟಕ್ಕೆ ಅದು ಎರಡನೇ ಮಹಾಯುದ್ಧದ ಸಮಯದಲ್ಲಿ ಬಳಕೆಯಲ್ಲಿದ್ದ ಫಿರಂಗಿಯ ತೋಟಾದಂತೆ ಕಾಣಿಸಿತು. ಆದರೆ ಕೈಗೆತ್ತಿಕೊಂಡು ಅಲ್ಲಾಡಿಸಿದಾಗ ‘ಟಣ್ ಟಣ್’ ಶಬ್ದ ಕೇಳಬೇಕೇ?!!

ಕುತೂಹಲಗೊಂಡ ಸಿಬ್ಬಂದಿ ಅದನ್ನು ಒಡೆದು ನೋಡಲಾಗಿ, ಎಲ್ಲರ ಕಂಗಳೂ ಅಕ್ಷರಶಃ ಮಿನುಗಿದವು. ಕಾರಣ ಅದರಲ್ಲಿದ್ದುದು ನಾಣ್ಯಗಳು. ಬರೀ ನಾಣ್ಯಗಳಲ್ಲಾರೀ, ಅಪ್ಪಟ ಬಂಗಾರದ ನಾಣ್ಯಗಳು. ಅದೂ ಒಂದೆರಡಲ್ಲ, ಬರೋಬ್ಬರಿ 600 ನಾಣ್ಯಗಳು! ಇವು 1870ರ ಕಾಲಾವಧಿಯದ್ದು ಎನ್ನಲಾಗಿದ್ದು, ಇಂದಿನ ಮಾರುಕಟ್ಟೆಯನುಸಾರ 1,00,000 ಯೂರೋಗಳಷ್ಟು (ಅಂದರೆ ಹತ್ತತ್ತಿರ 80 ಲಕ್ಷ ರೂ.) ಮೌಲ್ಯವಿದೆ ಎಂಬ ಲೆಕ್ಕಾಚಾರವೂ ಹೊಮ್ಮಿದೆ. ಫ್ರೆಂಚ್ ಕಾನೂನಿನ ಅನುಸಾರ, ನಿಧಿಯನ್ನು ಹೀಗೆ ಶೋಧಿಸಿದವರು ಮತ್ತು ಅದು ಕಂಡುಬಂದ ಜಮೀನು ಮಾಲೀಕರ ನಡುವೆ 50:50ರ ಅನುಪಾತದಲ್ಲಿ ಸಂಬಂಧಿತ ಆದಾಯವು ಹಂಚಿಕೆಯಾಗಬೇಕಂತೆ. ಬಂಗಾರದ ನಾಣ್ಯ ಸಿಕ್ಕಿದ್ದರ ಕುರಿತು ಮನೆಯೊಡೆಯನಿಗೆ ತಿಳಿಸಿದಾಗ, ಅವನಿಗೇನೂ ಅಚ್ಚರಿಯಾಗಲಿಲ್ಲವಂತೆ. ‘ಸಿಕ್ಕಿರಬಹುದು ಕಣ್ರೀ, ನಮ್ ತಾತ ನಾಣ್ಯಗಳ ಸಂಗ್ರಾಹಕರಾಗಿದ್ದರು’ ಎಂದು ಆತ ಪ್ರತಿಕ್ರಿಯಿಸಿದ್ದಾನೆ.

Leave a Reply

Your email address will not be published. Required fields are marked *

Back To Top