Friday, 18th August 2017  

Vijayavani

1. ಕಾಂಗ್ರೆಸ್‌ನಲ್ಲಿ ಎಡಪಂಥಿಯರಿಗೆ ಮಾತ್ರ ಮಣೆ- ಚುನಾವಣಾ ತಂತ್ರಗಾರ ಕೈ ಗುಡ್‌ಬೈ- ಅಲ್ಪ ಸಂಖ್ಯಾತರರನ್ನ ಅತಿಯಾಗಿ ಓಲೈಸ್ತಿದ್ಯಾ ಕಾಂಗ್ರೆಸ್‌.? 2. ಜೆಡಿಎಸ್​ ಭಿನ್ನರಿಗೆಲ್ಲಾ ಇಲ್ಲಾ ಟಿಕೆಟ್​ – 3 ಕ್ಷೇತ್ರಗಳ ಟಿಕೆಟ್​​​​​​​​ಗೆ ಖಾತ್ರಿ ನೀಡದ ಖರ್ಗೆ- ತ್ರಿಶಂಕು ಸ್ಥಿತಿಯಲ್ಲಿ ಜೆಡಿಎಸ್​​​​​​ ಭಿನ್ನರ ಸ್ಥಿತಿ 3. ಸಿಲಿಕಾನ್ ಸಿಟಿಗೆ ಖತರ್ನಾಕ್​ ಗ್ಯಾಂಗ್​ ಎಂಟ್ರಿ- ಸೆಕ್ಯೂರಿಟಿ ಡ್ರೆಸ್​​​ನಲ್ಲಿ ಮಾಡ್ತಿದ್ದಾರೆ ಕಳ್ಳತನ- ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕೃತ್ಯ 4. ರಾಜೀನಾಮೆ ಬಳಿಕ ವಿಶಾಲ್‌ ಸಿಕ್ಕಾ ಮೊದಲ ಮಾತು- ನನ್ನ ಜೀವನದ ದುಃಖದ ವಿಚಾರ ಅಂತಾ ಬೇಸರ- ಅತ್ತ ನಾನು ಕಾರಣನಲ್ಲ ಎಂದ ನಾರಾಯಣ ಮೂರ್ತಿ 5. ಯುಪಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಪ್ರಕರಣ- ಹೈಕೋರ್ಟ್‌ನಿಂದ ಯೋಗಿ ಸರ್ಕಾರಕ್ಕೆ ತರಾಟೆಗೆ- ಕೂಡಲೇ ವರದಿ ನೀಡಲು ಸೂಚನೆ
Breaking News :

ಹಿರಿಯ ನಾಗರಿಕರಿಗೆ ಹೊಸ ಪಿಂಚಣಿ ಸ್ಕೀಮ್

Saturday, 22.07.2017, 3:02 AM       No Comments

ನವದೆಹಲಿ: ಹಿರಿಯ ನಾಗರಿಕರ ಆರ್ಥಿಕ ಭದ್ರತೆಗಾಗಿ ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ವಯವಂದನಾ ಯೋಜನೆ (ಪಿಎಂವಿವಿವೈ) ಹೊಸ ಪಿಂಚಣಿ ಯೋಜನೆಗೆ ಶುಕ್ರವಾರ ಚಾಲನೆ ನೀಡಿದೆ. ಶೇ. 8ರಷ್ಟು ಬಡ್ಡಿ ಖಚಿತ ಪಡಿಸಲಾಗಿರುವ ಈ ಯೋಜನೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್​ನಲ್ಲಿ ಮಂಡಿಸಿದ್ದರು.

ಭಾರತೀಯ ಜೀವ ವಿಮಾ ನಿಗಮದ (ಎಲ್​ಐಸಿ) ಮೂಲಕ ಅನುಷ್ಠಾನಗೊಳ್ಳುವ ಈ ಯೋಜನೆಯ ಲಾಭವನ್ನು 60 ವರ್ಷ ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಪಡೆಯಬಹುದು.

ಯೋಜನೆಯ ಪಾಲಿಸಿಯು 10 ವರ್ಷಗಳ ಅವಧಿಯದ್ದಾಗಿದ್ದು, ಮಾಸಿಕ ಲೆಕ್ಕದಲ್ಲಿ ಶೇ. 8ರಷ್ಟು ಬಡ್ಡಿಯು (ವಾರ್ಷಿಕವಾಗಿ ಶೇ. 8.30ರ ಬಡ್ಡಿ ದರಕ್ಕೆ ಸರಿಸಮ) ಪಿಂಚಣಿ ರೂಪದಲ್ಲಿ ದೂರೆಯಲಿದೆ. ಇದನ್ನ್ನು ಪಾಲಿಸಿದಾರರ ಆಯ್ಕೆ ಅನುಗುಣವಾಗಿ ಮಾಸಿಕ, ಮೂರು ಇಲ್ಲವೆ ಆರು ತಿಂಗಳು ಅಥವಾ ವಾರ್ಷಿಕವಾಗಿ ಪಾವತಿಸಲಾಗುತ್ತದೆ. ಬಡ್ಡಿ ಪಾವತಿಯ ಅವಧಿ ಆಧಾರದ ಮೇಲೆ ಪಾಲಿಸಿಯ ಹೂಡಿಕೆ ಮೊತ್ತ ನಿಗದಿಯಾಗುತ್ತದೆ. ಪಾಲಿಸಿ ಅವಧಿ ಮುಕ್ತಾಯದ ಸಂದರ್ಭದಲ್ಲಿ ಪಾಲಿಸಿಯ ಹೂಡಿಕೆ ಮೊತ್ತ ಮತ್ತು ಅಂತಿಮ ಪಿಂಚಣಿ ಪಾವತಿ ಆಗುತ್ತದೆ.

 ಯೋಜನೆ ಮುಖ್ಯಾಂಶಗಳು

  • 2018ರ ಮೇ 3ರ ವರೆಗೆ ಪಿಎಂವಿವಿವೈ ಯೋಜನೆಯ ಸದಸ್ಯರಾಗಲು ಅವಕಾಶ
  • ಈ ಯೋಜನೆಯನ್ನು ಆನ್​ಲೈನ್ ಅಥವಾ ಆಫ್​ಲೈನ್ ಮೂಲಕ ಪಡೆಯಬಹುದು
  • ಈ ಯೋಜನೆಯನ್ನು ಜಿಎಸ್​ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ
  • ಪಾಲಿಸಿ ಆರಂಭವಾದ ಮೂರು ವರ್ಷಗಳ ನಂತರ ಹೂಡಿಕೆಯ ಮೊತ್ತದಲ್ಲಿ ಶೇ 75ರವರೆಗೂ ಸಾಲ ಪಡೆಯಲು ಅವಕಾಶ
  • ಸಾಲದ ಮರುಪಾವತಿಯ ಮೊತ್ತವು ಪಿಂಚಣಿಯಲ್ಲಿ ಕಡಿತ
  • ಗಂಭೀರ ಸ್ವರೂಪ ಕಾಯಿಲೆ ಸಂದರ್ಭದಲ್ಲಿ ಅವಧಿಗೂ ಮುಂಚೆ ಪಾಲಿಸಿ ಹಿಂಪಡೆಯಲು ಅವಕಾಶ. ಒಟ್ಟು ಹೂಡಿಕೆ ಶೇ 98ರಷ್ಟು ಮೊತ್ತ ಮರುಪಾವತಿ
  • ಪಾಲಿಸಿದಾರರು ಪಾಲಿಸಿ ಚಾಲ್ತಿ ಅವಧಿಯಲ್ಲಿ ಮೃತಪಟ್ಟರೆ ವಾರಸುದಾರರಿಗೆ ಹೂಡಿಕೆಯ ಮೊತ್ತ ಪಾವತಿ

Leave a Reply

Your email address will not be published. Required fields are marked *

Back To Top