Tuesday, 27th June 2017  

Vijayavani

1. ಅಮೆರಿಕದಲ್ಲಿ ಟ್ರಂಪ್​ ಮೋದಿ ಭೇಟಿ- ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶ್ವೇತ ಭವನ 2. ಸಹಜವಾಗಿ ಬರ್ತಿದ್ದೋರು ಕರೆದಿದ್ದಕ್ಕೆ ಬಂದ್ರು- ಕೃಷ್ಣಮಠದಲ್ಲಿ ಎಲ್ಲ ವರ್ಗದವರೂ ಊಟ ಮಾಡ್ತಾರೆ- ಸೌಹಾರ್ಧ ಭೋಜನಕ್ಕೆ ಪೇಜಾವರ ಶ್ರೀ ಸ್ಪಷ್ಟನೆ 3. ವಿಧಾನಸಭೆ ಚುನಾವಣೆ ಮೇಲೆ ವೇಣುಗೋಪಾಲ್ ಕಣ್ಣು- ಇಂದು ರಾಜ್ಯಕ್ಕೆ ಕೈ ಉಸ್ತುವಾರಿ ಆಗಮನ- ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ 4. ಉದ್ಧಾರ ಮಾಡ್ತೀವಿ ಅಂತಾ ಗುಂಡಿ ತೆಗೆದ್ರು- ಮೇಲುಕೋಟೆ ದೇವಸ್ಥಾನದ ಅಂದ ಹಾಳುಗೆಡುವಿದ್ರು- ಪುರಾತತ್ವ ಇಲಾಖೆ ವಿರುದ್ಧ ಪೊಲೀಸ್​ಠಾಣೆಯಲ್ಲಿ ದೂರು 5. ಆಕಾಶದಲ್ಲಿ ಹಾರುವಾಗಲೇ ತಾಂತ್ರಿಕ ದೋಷ- ವಿಮಾನದಲ್ಲಿದ್ದ ಸೀಟು ಫುಲ್​ ಅಲ್ಲಾಡ್ಸು- ಸೌಂಡ್ಗೆ ಬೆಚ್ಚಿ ಬಿದ್ದ ಜನ ಸೇಫು
Breaking News :

ಹಾಲಿ ಚಾಂಪಿಯನ್ ಸನ್​ರೈಸರ್ಸ್ ಔಟ್

Friday, 19.05.2017, 2:59 AM       No Comments

ಬೆಂಗಳೂರು: ಚೊಚ್ಚಲ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದ ನೆಲದಲ್ಲಿಯೇ ಹಾಲಿ ಚಾಂಪಿಯನ್ ಸನ್​ರೈಸರ್ಸ್ ಹೈದರಾಬಾದ್ ತಂಡ ಪ್ರಶಸ್ತಿ ಉಳಿಸಿಕೊಳ್ಳಲು ಸಾಧ್ಯವಾಗದೇ ನಿರ್ಗಮನ ಕಂಡಿದೆ. ಬುಧವಾರ ನಡೆದ ಐಪಿಎಲ್-10ರ ಮಳೆಬಾಧಿತ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ ನೈಟ್​ರೈಡರ್ಸ್ ತಂಡ ಡಕ್ವರ್ತ್-ಲೂಯಿಸ್ ನಿಯಮದ ಅನ್ವಯ 7 ವಿಕೆಟ್​ಗಳಿಂದ ಸನ್​ರೈಸರ್ಸ್ ತಂಡವನ್ನು ಸೋಲಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಕೆಕೆಆರ್, ಶಿಸ್ತಿನ ಬೌಲಿಂಗ್ ಮೂಲಕ ಸನ್​ರೈಸರ್ಸ್ ತಂಡ ವನ್ನು 7 ವಿಕೆಟ್​ಗೆ 128 ರನ್​ಗಳಿಗೆ ನಿಯಂತ್ರಿಸಿತು. ಸನ್​ರೈಸರ್ಸ್ ಇನಿಂಗ್ಸ್ ಮುಗಿದ ಬೆನ್ನಲ್ಲಿಯೇ ಸುರಿದ ಭಾರಿ ಮಳೆ ಪಂದ್ಯಕ್ಕೆ 3 ಗಂಟೆಗಳ ಕಾಲ ಅಡ್ಡಿಪಡಿಸಿತು. 3 ಗಂಟೆ 18 ನಿಮಿಷಗಳ ಬಳಿಕ ಆರಂಭವಾದ ಚೇಸಿಂಗ್​ನಲ್ಲಿ ಕೆಕೆಆರ್ ತಂಡಕ್ಕೆ 6 ಓವರ್​ಗಳಲ್ಲಿ 48 ರನ್​ಗಳ ಪರಿಷ್ಕೃತ ಗುರಿ ನೀಡಲಾಯಿತು. ಕೇವಲ 32 ನಿಮಿಷಗಳ ಚೇಸಿಂಗ್​ನಲ್ಲಿ ಕೆಕೆಆರ್ 5.2 ಓವರ್ ಆಟವಾಡಿ 48 ರನ್ ಪೇರಿಸಿ ಕ್ವಾಲಿಫೈಯರ್-2 ಪಂದ್ಯಕ್ಕೆ ಅರ್ಹತೆ ಪಡೆಯಿತು. ಮೊದಲ ಏಳು ಎಸೆತಗಳಲ್ಲಿ ಲ್ಯಾನ್, ಯೂಸುಫ್ ಪಠಾಣ್, ಉತ್ತಪ್ಪ ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್​ಗೆ ನಾಯಕ ಗೌತಮ್ ಗಂಭೀರ್ (32* ರನ್, 19 ಎಸೆತ, 2 ಬೌಂಡರಿ, 2 ಸಿಕ್ಸರ್) ಆಸರೆಯಾದರು.

ಇನಿಂಗ್ಸ್​ನ 20 ಓವರ್​ಗಳೂ ನಡೆದಿದ್ದರೆ ವ್ಯತಿರಿಕ್ತ ಫಲಿತಾಂಶ ಕಾಣಬಹುದಿತ್ತು. ಈ ಪಿಚ್​ನಲ್ಲಿ 128 ರನ್ ಗಳಿಸಿದರೂ ಗೆಲುವಿನ ಲೆಕ್ಕಾಚಾರದಲ್ಲಿದ್ದೆವು. ಆದರೆ ಮಳೆಯಿಂದಾಗಿ ಇನಿಂಗ್ಸ್ ಕೇವಲ 6 ಓವರ್​ಗೆ ಕಡಿತಗೊಂಡಿದ್ದು ಸೋಲಿಗೆ ಪ್ರಮುಖ ಕಾರಣ. ಮಳೆಯಿಂದಾಗಿ ಪಂದ್ಯ ಸೋತೆವು.

| ಮುತ್ತಯ್ಯ ಮುರಳೀಧರನ್, ಸನ್​ರೈಸರ್ಸ್ ಮೆಂಟರ್

ಕೆಕೆಆರ್​ಗೆ ವರವಾದ ಸಬ್​ಏರ್!

ಎಲಿಮಿನೇಟರ್ ಪಂದ್ಯದ ನಿಜವಾದ ಹೀರೋ ಎನಿಸಿಕೊಂಡಿದ್ದು ಕೆಎಸ್​ಸಿಎಯ ನೂತನ ಸಬ್​ಏರ್ ವ್ಯವಸ್ಥೆ. ‘ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ 2 ಲಕ್ಷ ಲೀಟರ್​ನಷ್ಟು ನೀರನ್ನು ಮೈದಾನಕ್ಕೆ ಅಳವಡಿಸಲಾದ ಸಬ್​ಏರ್ ಹೀರಿಕೊಂಡಿದೆ’ ಎಂದು ಕೆಎಸ್​ಸಿಎ ವಕ್ತಾರ ವಿನಯ್ ಮೃತ್ಯುಂಜಯ್ ಹೇಳಿದ್ದಾರೆ. ‘ಮಳೆ ನಿಂತ ಕೇವಲ 15-20 ನಿಮಿಷಗಳಲ್ಲಿ ಮೈದಾನವನ್ನು ಸಿದ್ಧ ಮಾಡಿದ್ದು ಸಬ್​ಏರ್ ಹಾಗೂ ಮೈದಾನದ ಸಿಬ್ಬಂದಿ ಹೆಗ್ಗಳಿಕೆ’ ಎಂದು ತಿಳಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಕೆಕೆಆರ್ ತಂಡದ ನಾಯಕ ಗಂಭೀರ್ ಕೂಡ ಕೆಎಸ್​ಸಿಎಗೆ ಟ್ವಿಟರ್ ಮೂಲಕ ಧನ್ಯವಾದ ಹೇಳಿದರು.

 

ಸನ್​ರೈಸರ್ಸ್: 7 ವಿಕೆಟ್​ಗೆ 128

ಕೆಕೆಆರ್: 5.2 ಓವರ್​ಗಳಲ್ಲಿ 3 ವಿಕೆಟ್​ಗೆ 48

(ಗೆಲುವಿನ ಗುರಿ: 6 ಓವರ್​ಗಳಲ್ಲಿ 48 ರನ್)

ಉತ್ತಪ್ಪ ಸಿ ಧವನ್ ಬಿ ಜೋರ್ಡಾನ್ 1

ಕ್ರಿಸ್ ಲ್ಯಾನ್ ಸಿ ನಮನ್ ಓಜಾ ಬಿ ಭುವನೇಶ್ವರ್ 6

ಯೂಸುಫ್ ಪಠಾಣ್ ರನೌಟ್ (ಭುವನೇಶ್ವರ್) 0

ಗೌತಮ್ ಗಂಭೀರ್ ಅಜೇಯ 32

ಇಶಾಂಕ್ ಜಗ್ಗಿ ಔಟಾಗದೆ 5

ಇತರೆ: 4, ವಿಕೆಟ್ ಪತನ: 1-7, 2-7, 3-12. ಬೌಲಿಂಗ್: ಭುವನೇಶ್ವರ್ 1-0-11-1, ಜೋರ್ಡಾನ್ 1-0-9-1, ರಶೀದ್ ಖಾನ್ 2-0-11-0, ಸಿದ್ಧಾರ್ಥ್ ಕೌಲ್ 1-0-14-0, ಬಿಪುಲ್ ಶರ್ಮ 0.2-0-2-0.

ಪಂದ್ಯಶ್ರೇಷ್ಠ: ನಾಥನ್ ಕೌಲ್ಟರ್ ನಿಲ್

Leave a Reply

Your email address will not be published. Required fields are marked *

five × two =

Back To Top