Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಹಾರರ್ ಹಾದಿಯಲ್ಲಿ ರಾಧಿಕಾ ಪಯಣ

Tuesday, 14.11.2017, 3:04 AM       No Comments

ಬೆಂಗಳೂರು: 2015ರಿಂದೀಚೆಗೆ ಸಿನಿಮಾಗಳಿಂದ ದೂರ ಉಳಿದಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಈ ವರ್ಷ ಸಡನ್ ಆಗಿ ಸಕ್ರಿಯರಾದರು. ಅರ್ಜುನ್ ಸರ್ಜಾ ಜತೆ ‘ಕಾಂಟ್ರಾ್ಯಕ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದ ಅವರು, ಬಳಿಕ ರವಿಚಂದ್ರನ್ ನಟನೆ-ನಿರ್ದೇಶನದ ‘ರಾಜೇಂದ್ರ ಪೊನ್ನಪ್ಪ’ ಚಿತ್ರಕ್ಕೂ ಸಹಿ ಮಾಡಿದರು. ಆದರೆ ಆ ಚಿತ್ರಗಳು ಸದ್ಯಕ್ಕಂತೂ ತೆರೆಕಾಣುವ ಸೂಚನೆ ನೀಡಿಲ್ಲ. ಅಲ್ಲದೆ, ರಾಧಿಕಾ ಕೂಡ ಗಾಂಧಿನಗರದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಹಾಗಂತ ಅವರು ಚಿತ್ರರಂಗದಿಂದ ದೂರ ಸರಿದರೆ? ಖಂಡಿತ ಇಲ್ಲ. ಸದ್ಯಕ್ಕೆ ಅವರು ಹೊಸ ಸಿನಿಮಾಗಳ ಕಡೆಗೆ ಗಮನ ಹರಿಸುತ್ತಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಒಂದು ಹಾರರ್ ಸಿನಿಮಾದಲ್ಲಿ ನಟಿಸಲು ರಾಧಿಕಾ ಆಸಕ್ತಿ ತೋರಿಸಿದ್ದಾರೆ.

ಚೊಚ್ಚಲ ಚಿತ್ರ ‘ನಿನಗಾಗಿ’ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದ್ದ ರಾಧಿಕಾ, ಪ್ರೇಕ್ಷಕರಿಗೆ ಇಷ್ಟವಾಗಿದ್ದೇ ಲವ್​ಸ್ಟೋರಿ ಸಿನಿಮಾಗಳಿಂದ. ನಂತರ ಅಣ್ಣ-ತಂಗಿ ಸೆಂಟಿಮೆಂಟ್ ಚಿತ್ರಗಳಿಂದಲೂ ಅವರು ಮೋಡಿ ಮಾಡಿದ್ದರು. 2002ರಿಂದ ಇಲ್ಲಿಯವರೆಗೆ ಅವರೆಂದೂ ಹಾರರ್ ಸಿನಿಮಾದಲ್ಲಿ ನಟಿಸಿರಲಿಲ್ಲ. ಸದ್ಯಕ್ಕೆ ಆ ಜಾನರ್​ನ ಒಂದು ಕಥೆಯನ್ನು ಅವರು ಕೇಳಿ ಇಷ್ಟಪಟ್ಟಿದ್ದಾರಂತೆ. ಇನ್ನೂ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಎಲ್ಲವೂ ಅಂತಿಮಗೊಂಡ ಬಳಿಕ ಹೆಚ್ಚಿನ ಮಾಹಿತಿ ನೀಡಲಿದ್ದಾರಂತೆ. ಆ ಚಿತ್ರಕ್ಕೆ ಸ್ವತಃ ರಾಧಿಕಾ ಬಂಡವಾಳ ಹೂಡಲಿರುವುದು ವಿಶೇಷ.

ಈ ನಡುವೆಯೇ ಅಣ್ಣ-ತಂಗಿ ಕಥಾಹಂದರದ ಹೊಸ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಮತ್ತು ರಾಧಿಕಾ ಮತ್ತೆ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ನಂತರ ಆ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಹೊರಬಿದ್ದಿರಲಿಲ್ಲ. ಲೇಟೆಸ್ಟ್ ಸುದ್ದಿ ಏನೆಂದರೆ, ಈಗಾಗಲೇ ಶಿವರಾಜ್​ಕುಮಾರ್ ಡೇಟ್ಸ್ ಅಂತಿಮವಾಗಿದೆಯಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2018ರ ಮಾರ್ಚ್​ನಲ್ಲಿ ಆ ಚಿತ್ರ ಸೆಟ್ಟೇರಲಿದೆ. ಅದಕ್ಕೂ ಮುನ್ನ ಹಾರರ್ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರಂತೆ ರಾಧಿಕಾ.

Leave a Reply

Your email address will not be published. Required fields are marked *

Back To Top