Monday, 19th March 2018  

Vijayavani

ಸಿಎಂ ಧರ್ಮ, ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ- ಅವರ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸ್ತಾರೆ- ಸಿದ್ದರಾಮಯ್ಯ ವಿರುದ್ಧ ರಂಭಾಪುರ ಶ್ರೀ ಗರಂ        ಪ್ರತ್ಯೇಕ ಧರ್ಮದ ಬಗ್ಗೆ ಸಿಎಂ ಜಾಣ ಮೌನ- ಸಭೆ ಬಳಿಕ ಪ್ರತಿಕ್ರಿಯೆ ನೀಡಲು ನಕಾರ- ಮಾಧ್ಯಮ ಕಂಡು ಮುಖ್ಯಮಂತ್ರಿಗಳು ದೌಡು        ರಾಜ್ಯದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್ ವಿಚಾರ- 4 ವರ್ಷ ಮಾಡಿಲ್ಲ, ಈಗಲೂ ಮಾಡೋದಿಲ್ಲ- ಜವಡೇಕರ್​ ಹೇಳಿಕೆಗೆ ಡಿಕೆಶಿ ಟಾಂಗ್​​​        ಬಹುಕೋಟಿ ಮೇವು ಹಗರಣ- ನಾಲ್ಕನೇ ಕೇಸ್‌ನಲ್ಲಿ ಲಾಲೂ ಅಪರಾಧಿ- ಬಿಹಾರ ಮಾಜಿ ಸಿಎಂ ಜಗನ್ನಾಥ್‌ ಮಿಶ್ರಾ ಖುಲಾಸೆ        ಪ್ರಿಯಾ ವಾರಿಯರ್ ರೀತಿ ಕಣ್ಣೊಡೆದ್ರೆ ಹುಷಾರ್- ಒಂದು ವರ್ಷ ಕಾಲೇಜಿನಿಂದ ಡಿಬಾರ್- ತಮಿಳುನಾಡಿನ ಕಾಲೇಜೊಂದರಲ್ಲಿ ಆರ್ಡರ್       
Breaking News

ಹಾನಗಲ್ಲ ಕುಮಾರಸ್ವಾಮಿ ವಿರುದ್ಧ ಅಪಪ್ರಚಾರಕ್ಕಿಳಿದವರಿಗೆ ತಕ್ಕ ಪಾಠ

Sunday, 08.10.2017, 3:00 AM       No Comments

ಹುಬ್ಬಳ್ಳಿ: ಮಾತೆ ಮಹಾದೇವಿ ಅವರು ಹಾನಗಲ್ಲ ಕುಮಾರಸ್ವಾಮೀಜಿ ಬಗ್ಗೆ ಪದೇಪದೆ ಅಪಸ್ವರ ಎತ್ತುತ್ತಿದ್ದಾರೆ. ತಮ್ಮ ಮಾತುಗಳ ಮೇಲೆ ಅವರು ಹಿಡಿತವಿಟ್ಟುಕೊಳ್ಳಲಿ ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾತ್ವಿಕ ಆಕ್ರೋಶ ಹೊರಹಾಕಿದ್ದಾರೆ.

ತಾವು ಹಾನಗಲ್ಲ ವಿರಕ್ತಮಠದ ಪೀಠಾಧಿಪತಿಗಳಿದ್ದರೂ ಈ ಎಲ್ಲ ವಿದ್ಯಮಾನಗಳನ್ನು ನೊಡಿ ಸುಮ್ಮನಿದ್ದೆವು. ಆದರೆ, ಮಾತೆ ಮಹಾದೇವಿ ಎಚ್ಚರ ತಪ್ಪಿದ್ದಲ್ಲದೆ ಸಮಾಜ ಒಡೆಯುತ್ತಿದ್ದಾರೆ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಪೂರ್ವಾಪರ ತಿಳಿಯಬೇಕು ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ. ನಮ್ಮ ಗುರುಗಳ ಬಗ್ಗೆ ಮಾತನಾಡುವ ಹಕ್ಕನ್ನು ಇವರಿಗೆ ಕೊಟ್ಟವರ್ಯಾರು? ಮಾತನಾಡಲು ಇವರ್ಯಾರು? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಪೂಜ್ಯ ಗುರುಗಳು ಗುರು- ವಿರಕ್ತರನ್ನು ಸಮನಾಗಿ ಕಂಡವರು. ಗೊತ್ತಿಲ್ಲದಿದ್ದರೆ ಕೇಳಿ, ಓದಿ ತಿಳಿಯಬೇಕು ಎಂದಿದ್ದಾರೆ. ಕುಮಾರಸ್ವಾಮೀಜಿ ಚಿತ್ರದುರ್ಗ ಮಠಕ್ಕೆ ಸ್ಪರ್ಧೆ ಮಾಡಿದ್ದರೆಂದು ಮಾತೆ ಮಹಾದೇವಿಯವರು ಹೇಳುತ್ತಿದ್ದಾರೆ. ಆದರೆ, ಕುಮಾರಸ್ವಾಮಿಗಳು ಸ್ವತಃ ಜಯದೇವ ಜಗದ್ಗುರುಗಳನ್ನು ಚಿತ್ರದುರ್ಗ ಮಠಕ್ಕೆ ಕರೆತಂದವರು. ಅಷ್ಟೇ ಅಲ್ಲ, ಜಯದೇವ ಜಗದ್ಗುರುಗಳು ಕಾಶಿಯಲ್ಲಿ ಅಧ್ಯಯನ ಮಾಡುವಾಗ ಹಾನಗಲ್ಲ ಕುಮಾರಸ್ವಾಮಿಗಳು ಆರ್ಥಿಕ ಸಹಾಯ ಮಾಡುವ ಮುಖಾಂತರ ಅವರ ಕಾಶಿ ಅಧ್ಯಯನಕ್ಕೆ ಕಾರಣರಾದವರು. ಈ ಮಾತುಗಳನ್ನು ನಾವು ಹೇಳುತ್ತಿಲ್ಲ. 1931ರಂದು ವಿ.ಬಿ. ಪುರಾಣಿಕ್ ಅವರ ಲೋಕಮತ ಟ್ರಸ್ಟ್​ನಿಂದ ಪ್ರಕಟವಾದ ಹಾನಗಲ್ಲ ಕುಮಾರಸ್ವಾಮೀಜಿ ಸ್ಮಾರಕ ಚಂದ್ರಿಕೆ ಎಂಬ ಗ್ರಂಥಕ್ಕೆ ಸ್ವತಃ ಜಯದೇವ ಜಗದ್ಗುರುಗಳೇ ಕಳುಹಿಸಿದ ಸಂದೇಶದಲ್ಲಿ ತಮ್ಮ ಅಂತರಾಳದ ಮಾತುಗಳನ್ನು ಬರೆದಿದ್ದಾರೆ. ಮಾತೆ ಮಹಾದೇವಿಯವರಷ್ಟೇ ಅಲ್ಲ, ಪೂಜ್ಯರ ಬಗ್ಗೆ ಯಾರೇ ಅಪಪ್ರಚಾರ ಮಾಡಿದರೂ ಕುಮಾರೇಶನ ಅಭಿಮಾನಿಗಳೊಂದಿಗೆ ಸೇರಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

 ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಿ

ಘಟಪ್ರಭಾ: ಚಿತ್ರದುರ್ಗದ ಮುರುಘಾ ಮಠದ ಪೀಠ ಸಿಗದಿರುವ ಕಾರಣಕ್ಕೆ ಹಾನಗಲ್ಲ ಕುಮಾರಸ್ವಾಮೀಜಿ ವೀರಶೈವ ಮಹಾಸಭಾ ಸ್ಥಾಪಿಸಿದರು ಹಾಗೂ ಈಗ ನಡೆಯುತ್ತಿರುವ ವೀರಶೈವ-ಲಿಂಗಾಯತ ಗೊಂದಲಕ್ಕೆ ಅವರೇ ಕಾರಣ ಎನ್ನುವ ಮಾತೆ ಮಹಾದೇವಿ ಹೇಳಿಕೆಗೆ ಹಾನಗಲ್ಲ ಕುಮಾರೇಶ್ವರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಘಟಪ್ರಭಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೆ ಮಹಾದೇವಿ ನೀಡಿದ ಹೇಳಿಕೆ ಅಸತ್ಯದಿಂದ ಕೂಡಿದೆ. ಹಾನಗಲ್ಲ ಕುಮಾರಸ್ವಾಮೀಜಿ ಬಗ್ಗೆ ನೀಡಿದ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

Back To Top