Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಹಾಡೋನಹಳ್ಳಿಯಲ್ಲಿ ಚೌತಿಗೇ ವಿಘ್ನ

Tuesday, 29.08.2017, 3:00 AM       No Comments

ಶಿವಮೊಗ್ಗ: ಯಾವುದೇ ಶುಭಕಾರ್ಯಕ್ಕೆ ಮುನ್ನ ವಿಘ್ನರಾಜನನ್ನು ಪೂಜಿಸುವುದು ಸಂಪ್ರದಾಯ. ಅದರಲ್ಲೂ ಗಣೇಶ ಚತುರ್ಥಿಗೆ ವಿಶೇಷ ಮಹತ್ವ. ಆದರೆ ಈ ಊರಿನಲ್ಲಿ ನಡೆದ ದುರಂತವೊಂದು ಗಣೇಶ ಚೌತಿಗೇ ವಿಘ್ನ ತಂದಿಟ್ಟಿದೆ!

ಹೌದು, ತಾಲೂಕಿನ ಹಾಡೋನಹಳ್ಳಿ ಇದಕ್ಕೊಂದು ನಿದರ್ಶನ. ಕಳೆದ ವರ್ಷ ಗಣೇಶ ವಿಸರ್ಜನೆ ವೇಳೆ ತುಂಗಭದ್ರಾ ನದಿಯಲ್ಲಿ ತೆಪ್ಪ ಮಗುಚಿ 12 ಯುವಕರು ಜಲ ಸಮಾಧಿಯಾದ ಕಹಿ ನೆನಪು ಈ ಗ್ರಾಮಸ್ಥರಿಗೆ ಇನ್ನೂ ಕಾಡುತ್ತಿದೆ. ಹೀಗಾಗಿ ಈ ಬಾರಿ ಊರಿಗೆ ಊರೇ ಗಣೇಶ ಚೌತಿ ಸಂಭ್ರಮದಿಂದ ದೂರಾಗಿತ್ತು.

400 ಮನೆಗಳಿರುವ ಈ ಗ್ರಾಮದಲ್ಲಿ ಕೇರಿಗೊಂದು ಗಣಪತಿ. ಏಳೆಂಟು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ, ಮಾರಿಗುಡಿ ಎದುರಿನ ಮಂಟಪದಲ್ಲಿ ಇಡೀ ಊರಿನವರು ಸೇರಿಕೊಂಡು ಸಂಭ್ರಮದಿಂದ ಆಚರಿಸುತ್ತಿದ್ದ ಗಣೇಶೋತ್ಸವ, ಸುಮಾರು 50 ಮನೆಗಳಲ್ಲಿ ಗಣೇಶ ಮೂರ್ತಿಯನ್ನಿಟ್ಟು ವಿಶೇಷ ಪೂಜೆ ಸಲ್ಲಿಸುವುದು ಈವರೆಗೆ ನಡೆದುಕೊಂಡ ಬಂದಿದ್ದ ಸಂಪ್ರದಾಯ. ಆದರೆ ಈ ಬಾರಿ ಹಾಡೋನಹಳ್ಳಿಯಲ್ಲಿ ನೀರವ ಮೌನ.

ಸರಳ ಸ್ವರ್ಣಗೌರಿ

ಗ್ರಾಮದ ಗೌಡರ ಮನೆಯಲ್ಲಿ ಪ್ರತಿ ವರ್ಷ ಗೌರಿಯನ್ನು ಕೂರಿಸುವುದು, ಗ್ರಾಮಸ್ಥರೆಲ್ಲರೂ ಅಲ್ಲಿಯೇ ಪೂಜೆ ಸಲ್ಲಿಸುವುದು ವಾಡಿಕೆ. ಸರಳವಾಗಿ ನಡೆದ ಗೌರಿ ಹಬ್ಬದಲ್ಲಿ ಗ್ರಾಮದ ಕೆಲ ಮನೆಯವರು ತೆರಳಿ ಪೂಜೆ ಸಲ್ಲಿಸಿದ್ದರು. ಕಳೆದ ವರ್ಷ ತೆಪ್ಪ ದುರಂತ ನಡೆದಾಗ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಹಾಗೂ ಏಕತೆ ಪ್ರದರ್ಶಿಸಿದ್ದ ಗ್ರಾಮಸ್ಥರು, ಹಬ್ಬದ ಆಚರಣೆಯಿಂದ ದೂರವುಳಿಯಲು ನಿರ್ಧರಿಸಿದರು.

Leave a Reply

Your email address will not be published. Required fields are marked *

Back To Top