Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಹಾಟ್ ಲುಕ್ ನೀಡುವ ಪ್ರಿಂಟೆಡ್ ಡ್ರೆಸ್

Thursday, 14.09.2017, 3:00 AM       No Comments

ಪ್ರಿಂಟೆಡ್ ಡ್ರೆಸ್ ಖರೀದಿ ಮಾಡುವಾಗ ಉಂಟಾಗುವ ಒಂದು ದೊಡ್ಡ ಕನ್​ಫ್ಯೂಷನ್ ಎಂದರೆ ನಮಗೆ ಆ ಡ್ರೆಸ್ ಮ್ಯಾಚ್ ಆಗುತ್ತದೆಯ ಅನ್ನೋದು. ಪೋಲ್ಕಾ ಡಾಟ್ ಪ್ರಿಂಟ್ ತೆಳ್ಳಗಿನ ಮಹಿಳೆಯರಿಗೆ ಸರಿ ಹೊಂದುವುದೇ? ಫ್ಲೋರಲ್ ಪ್ರಿಂಟ್​ಗಳು ದಪ್ಪ ಇರುವ ಮಹಿಳೆಯರಿಗೆ ಚಂದ ಕಾಣುವುದೇ? ಇಂಥ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿದ್ದರೆ ನಿಮ್ಮ ಸಂದೇಹವನ್ನು ಈಗ ನಿವಾರಿಸಿ.

ವಿವಿಧ ಬಗೆಯ ಪ್ರಿಂಟ್​ಗಳನ್ನು ಹಾಗೂ ನಿಮ್ಮ ದೇಹಸಿರಿಗೆ ಹೊಂದುವಂತಹ ಪ್ಯಾಟರ್ನ್​ಗಳ ಬಗ್ಗೆ ತಿಳಿದುಕೊಳ್ಳಿ. ಎತ್ತರ ಹಾಗೂ ಸುಂದರವಾದ ದೇಹಸಿರಿ ಹೊಂದಿರುವ ಮಹಿಳೆಯರು ಮೀಡಿಯಂ ಸೈಜಿನ ಪ್ರಿಂಟನ್ನು ಧರಿಸಿ ಆಕರ್ಷಕವಾಗಿ ಕಾಣಬಹುದು. ಒಂದೇ ಪ್ರಿಂಟಿನಲ್ಲಿ ಬೇರೆ ಬಣ್ಣಗಳಿರುವ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಬೇಡಿ. ನೀವು ತೆಳ್ಳಗೆ ಕಾಣಲು ಮೋನೋಕ್ರೋಮನ್ನು ಆಯ್ಕೆ ಮಾಡಿಕೊಳ್ಳಿ. ಲೀನರ್ ಲುಕ್​ನ್ನು ಪಡೆಯಲು ಡೀಪರ್ ಟೋನನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ದೇಹಕ್ಕೆ ಅಂಟಿಕೊಳ್ಳದ ಮೃದುವಾದ, ಫ್ರೋವ್ನಿಂಗ್ ಫ್ಯಾಬ್ರಿಕ್ ಆಯ್ಕೆ ಮಾಡಿಕೊಳ್ಳಿ. ಎತ್ತರವಾದ ಹಾಗೂ ಸಪೂರವಾದ ದೇಹವನ್ನು ಹೊಂದಿದವರಿಗೆ ಮಿಶ್ರ ಶ್ರೇಣಿಯ ಬಣ್ಣಗಳ ಪ್ರಿಂಟುಗಳಿರುವ ಡ್ರೆಸ್ ಚೆನ್ನಾಗಿ ಕಾಣುತ್ತದೆ. ನಿಮ್ಮ ಎತ್ತರವನ್ನು ಅಂದವಾಗಿ ಪ್ರದರ್ಶಿಸಲು ಪ್ಲೇಸ್​ವೆುಂಟ್ ಪ್ರಿಂಟ್​ಗಳನ್ನು ಧರಿಸಿ ಫ್ಯಾಷನಬಲ್ ಆಗಿ ಕಾಣಿಸಿಕೊಳ್ಳಿ. ಆರೀಫ್ ವಾಲೀಕಾರ್ ವಿಜಯಪುರ

 

Leave a Reply

Your email address will not be published. Required fields are marked *

Back To Top