Monday, 15th October 2018  

Vijayavani

‘ಉಪ' ಕದನಕ್ಕೆ ಇಂದು ಉಮೇದುವಾರಿಕೆ-ಶಿವಮೊಗ್ಗದಲ್ಲಿ ಮಾಜಿ ಸಿಎಂ ಪುತ್ರ ನಾಮಪತ್ರ- ಇತ್ತ ರಾಮನಗರದಿಂದ ಸಿಎಂ ಪತ್ನಿ        ಕುತೂಹಲ ಕೆರಳಿಸಿದ ಬೆಳಗಾವಿ ಎಪಿಎಂಸಿ ಎಲೆಕ್ಷನ್-ಲಕ್ಷ್ಮೀ ವಿರುದ್ಧ ಸೋಲು ತೀರಿಸಿಕೊಳ್ಳಲು ಜಾರಕಿಹೊಳಿ ಬಣ ಸಿದ್ಧತೆ        ಸ್ಯಾಂಡಲ್​ವುಡ್​ನಲ್ಲೂ ‘ಮೀ ಟೂ’ ಸದ್ದು-ನಟಿ ಸಂಗೀತಾ ಭಟ್ ದಯವಿಟ್ಟು ಗಮನಿಸಿ ಅಂತ ಫೇಸ್​ಬುಕ್​ನಲ್ಲಿ ನೋವು        ಮೀ ಟೂ ಆರೋಪಕ್ಕೆ ಖುಷ್ಬು ತಿರುಗೇಟು-ಕೇಜ್ರಿಸ್ಟಾರ್ ಮೇಲೆ ಬೊಟ್ಟು ಮಾಡಿದವರಿಗೆ ಎದುರೇಟು        MEE TOOಗೆ ಬಿತ್ತು ಮೊದಲ ವಿಕೆಟ್-ಕೇಂದ್ರ ಸಚಿವ ಸ್ಥಾನಕ್ಕೆ ಎಂ.ಜೆ.ಅಕ್ಬರ್ ರಿಸೈನ್​        ಪೆಟ್ರೋಲ್ ಬ್ಯಾರಲ್ ಸ್ಫೋಟಕ್ಕೆ ಕೊಪ್ಪಳದ ಅಧಿಕಾರಿ ಸಾವು -ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನಲ್ಲಿ ಕೊನೆಯುಸಿರು       
Breaking News

ಹಳ್ಳಿ ಸೊಗಡಿನ ಸುಗ್ಗಿ ಹುಗ್ಗಿ

Saturday, 13.01.2018, 3:02 AM       No Comments

ಬೆಂಗಳೂರು ಮಹಾನಗರವಾದರೂ ಅದೊಂದು ಹಳ್ಳಿಗಳ ಸಮೂಹ. ನಗರದ ಸುತ್ತಲೂ ಬೇಸಾಯದ ಬದುಕು ಇನ್ನೂ ಜೀವಂತವಾಗಿದೆ. ಕಾಂಕ್ರೀಟ್ ಕಾಡು ಬೆಳೆದರೂ ಬೆಂಗಳೂರಿನ ಹಸಿರ ಸಿರಿಯೇನೂ ತಗ್ಗಿಲ್ಲ. ಆಹ್ಲಾದಕರ ವಾತಾವರಣ ಈಗಲೂ ಇದೆ. ಹಾಗೆಯೇ ಹಕ್ಕಿಗಳ ಕಲರವ ಕೂಡ ಉಳಿದಿದೆ. ಬೆಂಗಳೂರು ನಾಡಿನ ರಾಜಧಾನಿಯಾದರೂ ಹಲವು ಕಾರಣಗಳಿಗಾಗಿ ಈ ಜಾಗ ರೈತರಿಗೆ, ತೋಟಗಾರರಿಗೆ ಕರುಳಬಳ್ಳಿ ಸಂಬಂಧವನ್ನು ಬಿಟ್ಟುಕೊಟ್ಟಿಲ್ಲ. ನಗರ-ಗ್ರಾಮ ಬದುಕಿ ನೊಂದಿಗೆ ಬೆಸೆಯುವ ಅನೇಕ ಕಾರ್ಯಕ್ರಮ ಯೋಜನೆಗಳು ಇಲ್ಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳು ಸಹಯೋಗದಲ್ಲಿ ವರ್ಷಕ್ಕೊಮ್ಮೆ ಏರ್ಪಡಿಸುವ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಈಗ ಹೊಸ ಸೇರ್ಪಡೆಯಾಗಿದೆ. ರೈತಾಪಿ ಜನರ ಮೊಗದಲ್ಲಿ ಸಂತಸ ಕಾಣುವ ಸಂದರ್ಭ ಸಂಕ್ರಾಂತಿ ಹೊಲ-ಗದ್ದೆಗಳಲ್ಲಿ ಬೆಳೆದ ಫಸಲು ಮನೆ ತುಂಬಿಸಿಕೊಳ್ಳುವ ಸಮಯ. ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಮುಂಚೆ ನಗರಿಗರಿಗೆ ಹಳ್ಳಿ ಸೊಬಗಿನ ಪರಿಚಯವನ್ನು ಮಾಡಿಕೊಡುವ ವಿಶೇಷ ಉತ್ಸವವೇ ಸುಗ್ಗಿ-ಹುಗ್ಗಿ. ಈ ಹಬ್ಬಕ್ಕೆ ಲಾಲ್​ಬಾಗ್ ಸಿದ್ಧವಾಗುತ್ತಿದೆ. ಸಿರಿಧಾನ್ಯಗಳೊಂದಿಗೆ ಸಂಕ್ರಾಂತಿ ಸಂಭ್ರಮ ಈ ವರ್ಷದ ವಿಶೇಷ. ರಾಶಿ ಪೂಜೆಯೊಡನೆ ಸುಗ್ಗಿ-ಹುಗ್ಗಿಗೆ ಇದೇ ಜ. 14ರಂದು ಚಾಲನೆ ದೊರೆಯಲಿದೆ.

ಪೊಂಗಲ್ ಸವಿಯಿರಿ: ಹಳ್ಳಿಗಳಲ್ಲಿ ಸಂಕ್ರಾಂತಿ ದಿನ ನಡೆಯುವ ರಾಸುಗಳ ಕಿಚ್ಚು ಹಾಯಿಸುವ ಸಂಭ್ರಮದ ಪ್ರದರ್ಶನ ಕೂಡ ಲಾಲ್ ಬಾಗ್​ನಲ್ಲಿ ನಡೆಯಲಿದೆ. ಕಣ್ಣಿಗೆ ಹಬ್ಬ ತರುವ ಹಲವು ವಿಶೇಷಗಳಿಗೆ ಕಾರಣವಾಗಲಿರುವ ಸುಗ್ಗಿಹುಗ್ಗಿ ಕಾರ್ಯಕ್ರಮದಲ್ಲಿ ಉಚಿತವಾಗಿ ಪೊಂಗಲ್ ಸವಿಯುವ ವ್ಯವಸ್ಥೆಯೂ ಇದೆ. ಹಾಗೆಯೇ ಇದೇ ಆವರಣದಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾದ ಬಹು ಬಗೆಯ ಆಹಾರಗಳು ಲಭ್ಯವಿವೆ. ಸಿಂಗಾರಗೊಂಡ ಎತ್ತುಗಳ ಗಾಡಿ ಮೇಲೆ ಮಕ್ಕಳಿಗೆ ಸವಾರಿ ಕೂಡ ಇರಲಿದೆ. ವೈವಿಧ್ಯಮಯ ಕಲಾ ವೈಭವದೊಂದಿಗೆ ಸುಗ್ಗಿ ಹಾಡು, ಗೀಗಿ-ಚೌಡಿಕೆ ಪದಗಳು ಕೆಂಪು ತೋಟದಲ್ಲಿ ಮಾರ್ದನಿಸಲಿವೆ. ಈ ಬಾರಿಯ ಸಂಕ್ರಾಂತಿಯಂದು ಸಾಂಪ್ರದಾಯಿಕ ವೈಭವವನ್ನು ಕಣ್ತುಂಬಿಕೊಳ್ಳಲು ಲಾಲ್​ಬಾಗ್​ಗೆ ಭೇಟಿ ನೀಡಿ, ಕುಟುಂಬದೊಂದಿಗೆ ಹಳ್ಳಿ ಸೊಗಡನ್ನು ಆಸ್ವಾದಿಸಿ.

 

Leave a Reply

Your email address will not be published. Required fields are marked *

Back To Top