Monday, 25th September 2017  

Vijayavani

1. ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಅಬ್ಬರಿಸಿದ ವರುಣ- ಕೆರೆಯಂತಾಗಿದ್ದವು ಅಂಡರ್​ಪಾಸ್​- ಮೈಸೂರು ಬ್ಯಾಂಕ್​ ಸರ್ಕಲ್​ನಲ್ಲಿ ಪಲ್ಟಿಯಾಯ್ತು ವಾಹನ 2. ಇಂದು ದೀನ್​ ದಯಾಳ್​​ ಜನುಮ ದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 3. ಬಾರ್ಡರ್​ ವಿಸಿಟ್​ಗೆ ಹೊರಟ ಹೋಮ್​ ಮಿನಿಸ್ಟರ್​- ಸೆ.28 ರಿಂದ 4 ದಿನಗಳ ಪ್ಲಾನ್​- ಡೋಕ್ಲಾಂ ಪ್ರದೇಶಕ್ಕೆ ಮೊದಲ ಭೇಟಿ 4. ಜರ್ಮನಿ ಸಂಸತ್ತಿನ ಚುನಾವಣೋತ್ತರ ಸಮೀಕ್ಷೆ- ಮಾರ್ಕೆಲ್​ ಮತ್ತೆ ಚಾನ್ಸಲರ್​ ಆಗೋ ಸಾಧ್ಯತೆ- ಅಲ್ಟರ್​ನೇಟಿವ್​ ಜರ್ಮನಿಗಿಲ್ಲ ಮನ್ನಣೆ 5. 3ನೇ ಪಂದ್ಯದಲ್ಲೂ ಕಾಂಗರೂ ಪಡೆ ಉಡೀಸ್‌- ರೋಹಿತ್, ಪಾಂಡ್ಯ ಆಟಕ್ಕೆ ಆಸೀಸ್‌ ಪೀಸ್‌ ಪೀಸ್‌- ಟೀಂ ಇಂಡಿಯಾ ಪಾಲಾಯ್ತು ಸಿರೀಸ್‌
Breaking News :

ಹಳದಿ ಬಣ್ಣವೂ ಚೆಂದ

Saturday, 02.09.2017, 3:00 AM       No Comments

 

ನೆಗೆ ಬಾಗಿಲು, ಗೋಡೆ, ನೆಲ, ಕಿಟಕಿ ಎಲ್ಲವೂ ಇದ್ದರಷ್ಟೇ ಸಾಲದು. ಅದಕ್ಕೆ ಸರಿಯಾದ ಬಣ್ಣವೂ ಮುಖ್ಯ. ಸಾಮಾನ್ಯವಾಗಿ ಮನೆಗೆ ತಿಳಿನೀಲಿ, ತಿಳಿಗೆಂಪು, ಗುಲಾಬಿ, ಬಿಳಿ ಬಣ್ಣದ ಪೇಂಟ್ ಹೊಡೆಸುವುದು ಮಾಮೂಲಿ. ಆದರೀಗ ಟ್ರೆಂಡ್ ಬದಲಾಗುತ್ತಿದ್ದು, ಅದರ ಜತೆಗೆ ಕಡು ಕೇಸರಿ, ಕಪ್ಪು, ಹಳದಿ, ಕೆಂಪು, ಹಸಿರು ಬಣ್ಣಗಳ ಶೇಡ್​ಗಳೂ ಗೋಡೆಯನ್ನು ಅಲಂಕರಿಸುತ್ತಿವೆ. ಅದರಲ್ಲೂ ಇತ್ತೀಚೆಗೆ ಎಲ್ಲ ಅಪಾರ್ಟ್​ವೆುಂಟ್, ಹೊಸತಾದ ಮನೆಗಳಲ್ಲಿ ಹಳದಿ ಬಣ್ಣದ ಬಳಕೆ ಹೆಚ್ಚುತ್ತಿದೆ. ಬದಲಾಗುತ್ತಿರುವ ಟ್ರೆಂಡ್​ನಲ್ಲಿ ಹೋಂ ಡಿಸೈನರ್​ಗಳು ಹೊಸ ಹೊಸ ಬಣ್ಣಗಳನ್ನು ಟ್ರೖೆ ಮಾಡುತ್ತಿದ್ದಾರೆ.

ಹಳದಿ ಗೋಡೆಯ ಜತೆಗೆ ಕಡುನೀಲಿ, ಕಡುಗೆಂಪು, ಗುಲಾಬಿ, ನೇರಳೆ ಬಣ್ಣದ ಶೆಲ್ಪ್​ಗಳನ್ನು ಮ್ಯಾಚ್ ಮಾಡಿದರೆ ಚೆನ್ನಾಗಿರುತ್ತದೆ. ಕಾಂಟ್ರಾಸ್ಟ್ ಬಣ್ಣದ ಯಾವ ಫರ್ನಿಚರ್ ಆದರೂ ಒಪ್ಪುತ್ತದೆ. ಬೆಡ್​ರೂಂಗಾದರೆ ಬಿಳಿ ಬಣ್ಣದ ಬೆಡ್ ಹಾಕಿ, ಗಾಢ ವರ್ಣದ ಬೆಡ್​ಸ್ಪ್ರೆಡ್ ಹಾಸಿಟ್ಟರೆ ಚೆನ್ನಾಗಿರುತ್ತದೆ. ಜತೆಗೆ, ತಿಳಿ ಹಸಿರು, ಗುಲಾಬಿ, ಕೇಸರಿ ಬಣ್ಣದ ಚಿಕ್ಕಚಿಕ್ಕ ದಿಂಬುಗಳನ್ನು ಇಡಬಹುದು. ಡೈನಿಂಗ್ ಹಾಲ್​ನಲ್ಲಿ ಹಳದಿ ಬಣ್ಣದ ಗೋಡೆಯಿದ್ದರೆ ಅಲ್ಲಲ್ಲಿ ಕಪ್ಪು ಬಣ್ಣದ ವಾಲ್​ಲ್ಯಾಂಪ್ ನೇತುಹಾಕಬಹುದು. ರೂಮಿನ ಅರ್ಧ ಗೋಡೆಗೆ ಹಳದಿ, ಇನ್ನರ್ಧ ಗೋಡೆಗೆ ಕಡುನೀಲಿ ಬಣ್ಣ ಬಳಿದರೆ ಟ್ರೆಂಡಿಯಾಗಿರುತ್ತದೆ. ಟೆರಾಕೋಟದ ವಾಲ್ ಹ್ಯಾಂಗಿಂಗ್ಸ್, ಟೆರಾಕೋಟ ಅಥವಾ ಮರದ ಫಿನಿಶಿಂಗ್​ನ ಫ್ರೇಮ್ ಇರುವ ಪೇಂಟಿಂಗ್​ಗಳು ಹಳದಿ ಗೋಡೆಯ ಮೇಲೆ ಟ್ರೆಂಡಿಯಾಗಿರುತ್ತದೆ.

Leave a Reply

Your email address will not be published. Required fields are marked *

Back To Top