Friday, 19th January 2018  

Vijayavani

ರಾಜ್ಯದಲ್ಲಿ ಶುರುವಾಗಿದೆ ಪಕ್ಷಾಂತರ ಪರ್ವ - ಮೂರು ಪಕ್ಷದೊಳಗೆ ಆಪರೇಶನ್​​ ಪಾಲಿಟಿಕ್ಸ್​​ - ಗೆಲುವಿಗಾಗಿ ಹೊಂದಾಣಿಕೆಗೂ ಸೈ ಎಂದ ನಾಯಕರು        ಮತ್ತೆ ಅನಂತಕುಮಾರ್​ ಹೆಗಡೆ ಉದ್ಧಟತನ - ಮಹಾಭಾರತದ ಜತೆ ವಿರೋಧಿಗಳ ಹೋಲಿಕೆ - ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ        ಪ್ಲಾಸ್ಟಿಕ್​​ ಕವರ್​​ನಲ್ಲಿ ರಾಶಿ ರಾಶಿ ತಲೆ ಬುರುಡೆ - ಮೈಸೂರಿನ ರಸ್ತೆ ಬದಿ ತಲೆಬುರುಡೆಗಳು ಪತ್ತೆ - ಬುರುಡೆಗಳ ರಾಶಿ ಕಂಡು ಜನರಲ್ಲಿ ಆತಂಕ        ಗಡಿಯಲ್ಲಿ ಪಾಕ್​​ ಮತ್ತೆ ಪುಂಡಾಟ - ಅಪ್ರಚೋದಿತ ದಾಳಿಗೆ ಇಬ್ಬರು ಸಾವು - ಭಾರತದ ಯೋಧರಿಂದಲೂ ಪ್ರತಿ ದಾಳಿ         ಪದ್ಮಾವತ್​ ಚಿತ್ರಕ್ಕೆ ತಪ್ಪದ ಸಂಕಷ್ಟ - ಒವೈಸಿಯಿಂದಲೂ ಚಿತ್ರ ಬಿಡುಗಡೆಗೆ ವಿರೋಧ - ಚಿತ್ರತಂಡದ ಅರ್ಜಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್​​​​       
Breaking News :

ಹಲೋ ನಿವೇದಿತಾ!

Thursday, 14.09.2017, 3:03 AM       No Comments

ಅಕ್ಕಿನೇನಿ ನಾಗಾರ್ಜುನ್ ಅವರ 2ನೇ ಪುತ್ರ ನಟ ಅಖಿಲ್ ಅಕ್ಕಿನೇನಿಗೆ ಈಗ ನಟಿ ನಿವೇದಿತಾ ಸತೀಶ್ ಹಲೋ ಎಂದಿದ್ದಾರೆ. ಏಕೆ, ಏನು ಎಂಬುದಕ್ಕೆ ಉತ್ತರವೂ ಅದೇ, ಹಲೋ! ಅಂದರೆ, ಅಖಿಲ್ ಅಭಿನಯದ ‘ಹಲೋ’ ಚಿತ್ರಕ್ಕೆ ಈಗ ಮತ್ತೋರ್ವ ನಾಯಕಿ ಸೇರ್ಪಡೆಯಾಗಿದ್ದಾರೆ. ವಿಕ್ರಮ್ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಅಖಿಲ್ ಹೀರೋ ಎಂದು ಕಳೆದ ಕ್ರಿಸ್​ವುಸ್ ವೇಳೆಯೇ ಘೊಷಣೆಯಾಗಿತ್ತು.

ಇದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾದರೂ ಸಾಕಷ್ಟು ಸಾಹಸ ದೃಶ್ಯಗಳಿವೆ. ಮಾತ್ರವಲ್ಲ ಹೆಚ್ಚೂಕಡಿಮೆ ಚಿತ್ರದ ಅರ್ಧದಷ್ಟು ಶೂಟಿಂಗ್ ಮುಗಿದ ಬಳಿಕ ಚಿತ್ರಕ್ಕೆ ನಾಯಕಿಯಾಗಿ ಕಲ್ಯಾಣಿ ಪ್ರಿಯದರ್ಶನ್ ಆಯ್ಕೆ ಆಗಿದ್ದು, ಕಳೆದ ತಿಂಗಳೇ ಅವರು ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲಿಗೆ ನಾಯಕ-ನಾಯಕಿ ಇಬ್ಬರ ಆಯ್ಕೆಯೂ ಆಯಿತು ಎಂದೇ ಎಲ್ಲರು ತಿಳಿದಿದ್ದರು. ಆದರೆ, ಇದೀಗ ಚಿತ್ರತಂಡಕ್ಕೆ ಮತ್ತೋರ್ವ ನಾಯಕಿಯಾಗಿ ನಿವೇದಿತಾ ಸತೀಶ್ ಅವರನ್ನು ಕರೆತಂದಿದ್ದಾರೆ ನಿರ್ದೇಶಕರು.

ಅಂದಹಾಗೆ, ನಿರ್ದೇಶಕರು ನಿವೇದಿತಾರನ್ನು ಕರೆತರಲು ಕಾರಣ ‘ಮಗಳಿರ್ ಮತ್ತುಂ’ ಚಿತ್ರವೇ ಕಾರಣವಂತೆ. ಅದರಲ್ಲಿನ ನಿವೇದಿತಾ ಅವರ ಅಭಿನಯ ನೋಡಿ ಅವರು ಈ ಚಿತ್ರಕ್ಕೂ ಆಹ್ವಾನಿಸಿದ್ದಾರೆ. ವಿಶೇಷ ಎಂದರೆ ಭಾವುಕತೆಯೇ ಹೆಚ್ಚಾಗಿರುವ ಈ ಚಿತ್ರದಲ್ಲಿ ಅಖಿಲ್​ಗೆ ಈ ಇಬ್ಬರೂ ಬೆಡಗಿಯರ ಜತೆಗೂ ರೊಮ್ಯಾಂಟಿಕ್ ದೃಶ್ಯಗಳಿರಲಿವೆಯಂತೆ. -ಏಜೆನ್ಸೀಸ್

 

 

Leave a Reply

Your email address will not be published. Required fields are marked *

Back To Top