Wednesday, 18th October 2017  

Vijayavani

1. ರಾತ್ರಿ ಹಾಕಿದ ಟಾರು ಬೆಳಗ್ಗೆ ಕಿತ್ತುಬಂತು- ಸರ್ಕಾರದಿಂದ ಕಾಟಾಚಾರದ ಗುಂಡಿ ಮುಚ್ಚೋಕಾರ್ಯ- ಕೋಟ್ಯಾಂತರ ರೂಪಾಯಿ ನೀರಲ್ಲಿ ಹೋಮ 2. ಬರಿಗೈಯಲ್ಲಿ ಕಾರ್ಮಿಕನಿಂದ ಮಾನ್​ಹೋಲ್​ ಸ್ವಚ್ಛತೆ- ಸುರಕ್ಷಾ ಸಾಧನ ನೀಡಿದ ಮಹಾನಗರ ಪಾಲಿಕೆ- ಮಂಗಳೂರಿನಲ್ಲಿ ಅಮಾನವೀಯ ಘಟನೆ 3. ಪರಿಸರ ಉಳಿಸಿ, ಪಟಾಕಿ ತ್ಯಜಿಸಿ ಅಭಿಯಾನಕ್ಕೆ ಆಕ್ಷೇಪ- ವರ್ತಕರೊಂದಿಗೆ ಪರಿಸರ ಪ್ರೇಮಿಗಳ ವಾಗ್ವಾದ- ಮೈಸೂರಿನಲ್ಲಿ ಪಟಾಕಿ ಜಟಾಪಟಿ 4. ಅನೈತಿಕ ಸಂಬಂಧ ತಿಳಿದು ಗಂಡ ಬಿಟ್ಟ- ಪ್ರಿಯಕರನಿಗಾಗಿ ಮಗಳಿಗೆ ಕೊಟ್ಲು ಕಾಟ- ಗಂಗಾವತಿಯ ಹಿರೇಜಂತಕಲ್​ನಲ್ಲಿ ಕ್ರೂರಿ ತಾಯಿ 5. ನೋಟ್​ಬ್ಯಾನ್​ ವಿಚಾರದಲ್ಲಿ ಕಮಲ್​ ಉಲ್ಟಾ- ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕ್ಷಮೆಯಾಚನೆ- ಇದು ಕಮಲ್​ ಹೊಸ ರಾಜಕೀಯ ಆಟ
Breaking News :

ಹದಿನೆಂಟನೇ ವಯಸ್ಸಿಗೇ ಜಿಹಾದ್ ತರಬೇತಿ!

Monday, 03.04.2017, 3:26 AM       No Comments
  • ರಾಮ್ ಪ್ರಸಾದ್, ಬೆಂಗಳೂರು

2005ರ ಡಿ.28ರಂದು ನಡೆದ ಐಐಎಸ್ಸಿ ದಾಳಿಯ ಪ್ರಮುಖ ಸಂಚುಕೋರ ಸಬಾಹುದ್ದೀನ್ ಅಲಿಯಾಸ್ ಸಬಾ 18ನೇ ವಯಸ್ಸಿಗೇ ಜಿಹಾದ್ ತರಬೇತಿ ಪಡೆಯತ್ತಿದ್ದ! ಪಿಯು ಓದುವಾಗಲೇ ಉಗ್ರ ಕೃತ್ಯಗಳ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಎಂಬ ಸಂಗತಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

1984ರಲ್ಲಿ ಬಿಹಾರದಲ್ಲಿ ಜನಿಸಿದ ಸಬಾ 1999ರಲ್ಲಿ ಎಸ್ಸೆಸ್ಸೆಲ್ಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದ. ನಂತರ ಪಿಯು ವ್ಯಾಸಂಗ ಮಾಡಲು ಉತ್ತರಪ್ರದೇಶದ ಅಲಿಗಢ ವಿಶ್ವವಿದ್ಯಾಲಯ ಸೇರಿದ್ದ. ಅಲ್ಲಿ ಥಿಯೋಲಜಿ ಪ್ರೊಫೆಸರ್ ಒಬ್ಬರ ಪ್ರಭಾವಕ್ಕೆ ಒಳಗಾಗಿ ಜಿಹಾದ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ. 2002ರ ಮಾರ್ಚ್​ನಲ್ಲಿ ಯುನಾನಿ ವೈದ್ಯರೊಬ್ಬರ ನೆರವಿನಿಂದ ಕಾಶ್ಮೀರಕ್ಕೆ ಹೋಗಿದ್ದ. ರಾಜೌರಿ ಜಿಲ್ಲೆ ಮೂಲಕ ಲಷ್ಕರ್ ಎ ತಯ್ಬಾ ಕಮಾಂಡರ್​ಗಳ ಜತೆ ಹಲವು ದಿನ ನಡೆದುಕೊಂಡೇ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದ.

100 ಜನಕ್ಕೆ ವಿಶೇಷ ತರಬೇತಿ: ಎಲ್​ಇಟಿ ಮುಖಂಡರನ್ನು ಭೇಟಿ ಮಾಡಿದ ನಂತರ ಸಬಾನನ್ನು ಕಮಾಂಡರ್ ತರಬೇತಿಗೆ ಆಯ್ಕೆ ಮಾಡಲಾಗಿತ್ತು. ಸಬಾ ಸೇರಿ ಹೊಸದಾಗಿ ಎಲ್​ಇಟಿ ಸೇರಿಕೊಂಡಿದ್ದ ಸುಮಾರು 100 ಜನಕ್ಕೆ ತರಬೇತಿ ಆರಂಭಿಸಲಾಗಿತ್ತು. ಬೆಳಗ್ಗೆ 3 ಗಂಟೆಗೇ ಎದ್ದು ತಹಾಜುದ್ ಪ್ರಾರ್ಥನೆ ಮಾಡಲಾಗುತ್ತಿತ್ತು. ಇದಾದ ನಂತರ ಫಜರ್ ಎನ್ನುವ ಪ್ರಾರ್ಥನೆ ಮಾಡಿ 15 ನಿಮಿಷ ಕುರಾನ್ ಪಠಣ ಮಾಡಲಾಗುತ್ತಿತ್ತು. ನಂತರ ಒಂದು ಗಂಟೆ ದೈಹಿಕ ವ್ಯಾಯಾಮ ಮುಗಿಸಿ ಬೆಳಗಿನ ತಿಂಡಿ ಕೊಡಲಾಗುತ್ತಿತ್ತು. ಆಮೇಲೆ ಶಸ್ತ್ರಾಸ್ತ್ರಗಳನ್ನು ಹಿಡಿಯುವುದು ಹೇಗೆ ಮತ್ತು ಜೋಡಿಸಿ ಬೇರ್ಪಡಿಸುವುದು ಹೇಗೆ ಎಂಬುದರ ತರಬೇತಿ ನೀಡಲಾಗುತ್ತಿತ್ತು. ದೌರಾ ಇ ಅಮ್ಮಾ ಹೆಸರಿನ ತರಬೇತಿ ನಂತರ ದೌರಾ ಇ ಖಾಸ್ ಹೆಸರಿನ ಕಮಾಂಡೋ ತರಬೇತಿಯನ್ನು ಸಬಾ ಪಡೆದಿದ್ದ. 4 ತಿಂಗಳ ತರಬೇತಿ ಇದಾಗಿತ್ತು. ಒಂದು ಗುಂಪಿಗೆ ಸಬಾನನ್ನು ನಾಯಕನನ್ನಾಗಿಸಲಾಗಿತ್ತು. ಕಾಶ್ಮೀರ ಪ್ರದೇಶದ ಕಠಿಣ ಪರಿಸ್ಥಿತಿಯಲ್ಲಿ ಬದುಕುವುದು. ನದಿ, ಗಡಿ ದಾಟುವುದು ಮತ್ತು ಮಿಲಿಟರಿಗಳಿಂದ ತಲೆಮರೆಸಿಕೊಳ್ಳುವ ಬಗ್ಗೆ ಇಡೀ ತರಬೇತಿ ಕೇಂದ್ರೀಕೃತವಾಗಿತ್ತು.

ಪಾಕಿಸ್ತಾನದಲ್ಲೂ ತರಬೇತಿ

ನಾಲ್ಕು ತಿಂಗಳ ಕಠಿಣ ತರಬೇತಿ ಮುಗಿದ ನಂತರ ಎಲ್ಲರನ್ನೂ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಿ ಐಎಸ್​ಐ ಅನ್ನು ಭೇಟಿ ಮಾಡಿಸಲಾಯಿತು. ಇಲ್ಲಿಯೂ 50 ದಿನಗಳ ಕಠಿಣ ತರಬೇತಿ ಕೊಡಲಾಯಿತು. ಪ್ರಮುಖವಾಗಿ ಆಯುಧಗಳನ್ನು ಬಳಸುವ ಬಗೆ ಹೇಗೆಂದು ತಿಳಿಸಿಕೊಡಲಾಗಿತ್ತು. ತರಬೇತಿ ಮುಕ್ತಾಯದ ಬಳಿಕ ಸಬಾನಿಗೆ ಇಸ್ಲಾಮಾಬಾದ್​ನಲ್ಲಿರುವ ಎಲ್​ಇಟಿ ಕಮಾಂಡರ್ ಝುಕಿ ಉರ್ ರೆಹಮಾನ್ ಲಕ್ವಿಯನ್ನು ಭೇಟಿ ಮಾಡಿಸಿ ಜಿಹಾದ್ ಬಗ್ಗೆ ಪ್ರವಚನ ಕೊಡಿಸಲಾಯಿತು. ತದನಂತರ ಸಬಾನಿಗೆ ಲಾಹೋರ್​ನಲ್ಲಿ ಐಎಸ್​ಐ ಕಚೇರಿಯಲ್ಲಿ ಕರ್ನಲ್ ಕ್ಯಾನಿ ಅವರನ್ನು ಭೇಟಿ ಮಾಡಿಸಲಾಯಿತು. ಅಲ್ಲಿ ಸುಮಾರು ಮೂರೂವರೆ ತಿಂಗಳು ತರಬೇತಿ ನೀಡಲಾಯಿತು.

ಬೇರೆ ಹೆಸರಲ್ಲಿ ಮತ್ತೆ ಭಾರತಕ್ಕೆ

ಸಬಾನಿಗೆ ಸಂಪೂರ್ಣ ತರಬೇತಿ ಕೊಡಿಸಿದ ನಂತರ ಐಎಸ್​ಐ ಆತನನ್ನು ಮತ್ತೆ ಭಾರತಕ್ಕೆ ಕಳಿಸುವ ಬಗ್ಗೆ ಚಿಂತನೆ ನಡೆಸಿತ್ತು. ಇದಕ್ಕೂ ಮೊದಲೇ ಮೊಹಮ್ಮದ್ ಶಫೀಕ್ ಹೆಸರಲ್ಲಿ ಪಾಸ್​ಪೋರ್ಟ್ ತಯಾರು ಮಾಡಿಕೊಟ್ಟಿದ್ದರು ಮತ್ತು ನೇಪಾಳ ರಾಯಭಾರಿ ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿ ನೇಪಾಳಕ್ಕೆ ವೀಸಾ ಕೊಡಿಸಲಾಯಿತು. ಇದಾದ ನಂತರ ಸಬಾ ಮತ್ತು ಸಂಗಡಿಗರನ್ನು ಇಸ್ಲಾಮಾಬಾದ್​ಗೆ ಕರೆದುಕೊಂಡು ಹೋಗಿ ಮುಜ್ಜಾಮಿಲ್ ಮತ್ತು ಅಬ್ದುಲ್ ಅಜೀಜ್ ರನ್ನು ಭೇಟಿ ಮಾಡಿಸಲಾಯಿತು. ಅವರು ಇ ಮೇಲ್ ಐಡಿ ಸೃಷ್ಟಿಸುವುದು ಹೇಗೆ ಮತ್ತು ಅಕ್ಷರಗಳ ಕೋಡಿಂಗ್ ಮಾಡುವುದು ಹೇಗೆ ಎಂದು ಕಲಿಸಿಕೊಟ್ಟರು ಎಂದು ಸಬಾಹುದ್ದೀನ್ ಹೇಳಿಕೆ ಕೊಟ್ಟಿದ್ದಾನೆ.

Leave a Reply

Your email address will not be published. Required fields are marked *

Back To Top