Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಹತ್ತು ದಿನಗಳ ಸಂಕ್ರಾಂತಿ ಚಿತ್ತಾರಕ್ಕೆ ಚಾಲನೆ

Saturday, 13.01.2018, 3:02 AM       No Comments

ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿರುವ ಕಲಾಕೃತಿ, ಕರಕುಶಲ ವಸ್ತುಗಳು ಹಾಗೂ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಸಂಕ್ರಾಂತಿ ಚಿತ್ತಾರಕ್ಕೆ ನಟಿ ಶುಭಾ ಪೂಂಜಾ ಶುಕ್ರವಾರ ಚಾಲನೆ ನೀಡಿದರು.

ಚಿತ್ರಕಲಾ ಪರಿಷತ್ತಿನ ಬಯಲು ರಂಗಮಂದಿರದಲ್ಲಿ ಆರಂಭವಾಗಿರುವ ಸಂಕ್ರಾಂತಿ ಚಿತ್ತಾರ 10ದಿನಗಳ ಕಾಲ ನಡೆಯಲಿದೆ. 100ಕ್ಕೂ ಅಧಿಕ ಕಲಾವಿದರು ಪ್ರದರ್ಶನದಲ್ಲಿ ಭಾಗವಹಿಸಿದ್ದು, ರೇಷ್ಮೆ ಸೀರೆ, ಕಾಂತಾ ವರ್ಕ್ ಡ್ರೆಸ್, ಹುಬ್ಬಳ್ಳಿ ರೇಷ್ಮೆ ಸೀರೆ, ಮಧ್ಯ ಪ್ರದೇಶದ ಚಾಂದೇರಿ ಮತ್ತು ಮಹೇಶ್ವರಿ ಹತ್ತಿ ಸೀರೆ, ಚಾಂದಿನಿ ರೇಷ್ಮೆ ಸೀರೆ, ಶಾಲುಗಳು, ಪುರುಷರ ಬಟ್ಟೆ, ಸೇರಿದಂತೆ ವಿವಿಧ ಅಪರೂಪದ ಕಲಾಕೃತಿಗಳು ಪ್ರದರ್ಶನದಲ್ಲಿ ಕಾಣಸಿಗುತ್ತವೆ. ಮಹಿಳೆಯರ ಆಭರಣ, ಗೃಹಾಲಂಕಾರ ವಸ್ತುಗಳು, ಆಂಟಿಕ್ ಪೀಸ್​ಗಳನ್ನು ಕಣ್ತುಂಬಿಕೊಳ್ಳಬಹುದು.

10ರೂ.ನಿಂದ ಆರಂಭ: ರಾಜಸ್ಥಾನಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ 18ರಾಜ್ಯಗಳ ಸಾಂಪ್ರದಾಯಿಕ ಶೈಲಿಯ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಕಾಣಬಹುದು. 10ರೂ.ನಿಂದ 6ಲಕ್ಷ ರೂ.ವರೆಗಿನ ಕರಕುಶಲ ವಸ್ತುಗಳು ಪ್ರದರ್ಶನದಲ್ಲಿವೆೆ. ಮಧ್ಯವರ್ತಿಗಳ ಹಾವಳಿಗೆ ಅವಕಾಶ ಇಲ್ಲದಿರುವುದರಿಂದ ನೇರವಾಗಿ ಗ್ರಾಹಕರು ವ್ಯಾಪಾರಿಗಳಿಂದ ಖರೀದಿಸಬಹುದಾಗಿದೆ. ಇದರಿಂದ ಕಡಿಮೆ ಬೆಲೆಯಲ್ಲಿ ವಸ್ತುಗಳು ಸಿಗಲಿವೆ. ಈ ಪ್ರದರ್ಶನ ಮತ್ತು ಮಾರಾಟ ಜ.21ರವರೆಗೆ ನಡೆಯಲಿದೆ ಎಂದು ಚಿತ್ತಾರ ಪ್ರದರ್ಶನದ

ಅಧ್ಯಕ್ಷ ಪ್ರೊ.ಕೆ.ಎಸ್. ಅಪ್ಪಾಜಯ್ಯ ಮಾಹಿತಿ ನೀಡಿದರು. ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಂ.ಜೆ. ಕಮಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

ಸಂಕ್ರಾಂತಿಯನ್ನು ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಅದ್ದೂರಿಯಾಗಿ ಆಚರಿಸುತ್ತೇನೆ. ಪೂಜೆ ಮಾಡಿ, ಎಳ್ಳು-ಬೆಲ್ಲ ಸೇವಿಸುತ್ತೇವೆ. ಚಿತ್ತಾರ ಪ್ರದರ್ಶನದಲ್ಲಿ ವೈವಿಧ್ಯಮಯ ಕಲಾಕೃತಿ ಹಾಗೂ ಕರಕುಶಲ ವಸ್ತುಗಳು ಮನಸೆಳೆಯುತ್ತಿವೆ.

                             |ಶುಭಾ ಪೂಂಜಾ ನಟಿ

ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಕಲಾಕೃತಿಗಳು ಪ್ರದರ್ಶನದಲ್ಲಿರುತ್ತವೆ. ಅಷ್ಟೇ ಅಲ್ಲ, ವಿವಿಧ ರಾಜ್ಯದ ಕಲಾವಿದರು ವಿನ್ಯಾಸ ಮಾಡಿದ ಅಪರೂಪದ ಆಭರಣಗಳು ಇಲ್ಲಿರುತ್ತವೆ. ಆದ್ದರಿಂದ ಸಾಮಾನ್ಯವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಎಲ್ಲಾ ಪ್ರದರ್ಶನದಲ್ಲಿ ಭಾಗವಹಿಸುತ್ತೇನೆ.

|ಕವನಾ ಆರಾಧ್ಯ ಕೆಎಸ್​ಎ ಕಾಲೇಜು ವಿದ್ಯಾರ್ಥಿನಿ

Leave a Reply

Your email address will not be published. Required fields are marked *

Back To Top