Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಹಣ ಪಾವತಿಗೆ ಸುಲಭ ವಿಧಾನ

Tuesday, 28.03.2017, 8:50 AM       No Comments

ತ್ತೀಚೆಗೆ ನಮ್ಮ ದೇಶದಲ್ಲಿ ನಗದು ವ್ಯವಹಾರದ ಪರಿಪಾಠವನ್ನು ಕಡಿಮೆಗೊಳಿಸಿ ‘ಕ್ಯಾಷ್​ಲೆಸ್’ ಅಥವಾ ‘ನಗದ ರಹಿತ’ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿರುವುದು ತಿಳಿದಿರುವ ಸಂಗತಿಯೇ ಆಗಿದೆ. ಈ ಮೊದಲು ಸಾರ್ವಜನಿಕರು ವಿವಿಧ ಬಾಬತ್ತುಗಳಿಗೆ ಸಂಬಂಧಿಸಿದಂತೆ, ಅಂದರೆ, ಜೀವವಿಮಾ ಪ್ರೀಮಿಯಂ, ಮ್ಯೂಚುವಲ್ ಫಂಡ್ SIP (Systematic Investment Plan) ಇತ್ಯಾದಿಗಳನ್ನು ತಮ್ಮ ಬ್ಯಾಂಕ್ ಖಾತೆಯಿಂದ ನಿಯಮಿತವಾಗಿ ಪಾವತಿಸುವುದಕ್ಕೆ ECS (Electronic Clearing System) ಎಂಬ ಸೌಲಭ್ಯವನ್ನು ಒದಗಿಸಲಾಗಿತ್ತು. ಆದರೆ ಈಗ NACH (National Automated Clearing House) ಎಂಬ ಸೌಲಭ್ಯಕ್ಕೆ ಬದಲಾಯಿಸಲಾಗಿದೆ. ಕೇಂದ್ರ ಸರ್ಕಾರದ NPCI (National Payment Corporation of India) ಎಂಬ ಅಂಗಸಂಸ್ಥೆಯು ಈ ವ್ಯವಸ್ಥೆಯನ್ನು ನಿಭಾಯಿಸುತ್ತಿದೆ.

ಸಾರ್ವಜನಿಕರು ಸಂಸ್ಥೆಯೊಂದಕ್ಕೆ ನಿರ್ದಿಷ್ಟ ಮೊತ್ತವನ್ನು ಪಾವತಿಸುವುದಿದ್ದರೆ, ಸರದಿಯಲ್ಲಿ ನಿಂತು ಸಮಯವನ್ನು ವ್ಯರ್ಥಮಾಡುವ ಬದಲು, ಸದರಿ NACH ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಈ ವ್ಯವಸ್ಥೆಯಲ್ಲಿ, ನಿಗದಿಪಡಿಸಿದ ಅವಧಿಗೆ ನಿರ್ದಿಷ್ಟ ಮೊತ್ತವು ಸಾರ್ವಜನಿಕರ ಬ್ಯಾಂಕ್ ಖಾತೆಯಿಂದ ಎಲೆಕ್ಟ್ರಾನಿಕ್ ವಿಧಾನದ ಮೂಲಕ ಉದ್ದೇಶಿತ ಸಂಸ್ಥೆಗೆ ವರ್ಗಾವಣೆಯಾಗುವುದರಿಂದ, ಪಾವತಿಯ ಕುರಿತು ಮರೆತುಹೋಗುವುದು ಹಾಗೂ ತಡವಾದರೆ ವೃಥಾ ಬಡ್ಡಿಯನ್ನು ತೆರಬೇಕಾಗಿ ಬರುವುದು ತಪ್ಪುತ್ತದೆ ಎನ್ನಲಡ್ಡಿಯಿಲ್ಲ. ಚೆಕ್ ನೀಡುವುದಾಗಲೀ, ಡ್ರಾಫ್ಟ್ ನೀಡಿ ತುಂಬುವ ತಾಪತ್ರಯವಾಗಲೀ ಇಲ್ಲಿ ಇರುವುದಿಲ್ಲ. ಹಾಗಾಗಿ ಈ ವಿಶಿಷ್ಟ ಸೌಲಭ್ಯ ಬಳಸಿಕೊಂಡು, ಈ ಕೆಳಗಿನ ವಿಧದ ವ್ಯವಹಾರಗಳಿಗೆ ಸುಲಭವಾಗಿ ಪಾವತಿಸಿ ನಿಶ್ಚಿಂತರಾಗಿರಬಹುದು.

  • ನಿಯಮಿತವಾಗಿ ಜೀವವಿಮಾ ಪ್ರೀಮಿಯಂ ಪಾವತಿಸಲು
  • ಮ್ಯೂಚುವಲ್ ಫಂಡ್​ಗಳ SIP ತುಂಬಲು
  • ಪ್ರತಿ ತಿಂಗಳು ಆರ್.ಡಿ. ಕಂತು ಪಾವತಿಸಲು
  • ಸಾಲದ ಕಂತು (EMI) ಪಾವತಿಸಲು.

ಹೀಗೆ ಹಲವಾರು ವಿಧದ ಹಣಕಾಸು ವ್ಯವಹಾರಗಳಿಗೆ ಪಾವತಿಸಲು ಘಅಇಏ ಉಪಯುಕ್ತ ಸಾಧನವಾಗಿದೆ. ಆದರೆ ಜಾಗರೂಕರಾಗಿರಬೇಕಾದ ಸಂಗತಿ ಏನೆಂದರೆ, ಪಾವತಿ ಮಾಡಬೇಕಾದ ಮೊತ್ತವು ನಿಗದಿತ ದಿನಾಂಕದ ಗಡುವಿನೊಳಗೆ ಸಂಬಂಧಿತ ಬ್ಯಾಂಕ್ ಖಾತೆಯಿಂದ ವರ್ಗಾವಣೆಯಾಗುವ ಕಾರಣ, ಇಂಥ ಹಣಕಾಸು ವ್ಯವಹಾರಗಳಿಗೆ ಘಅಇಏ ಮಾಗೋಪಾಯವನ್ನು ಅವಲಂಬಿಸುವವರು ತಮ್ಮ ಬ್ಯಾಂಕ್ ಖಾತೆಯಲ್ಲಿ ನಿರ್ದಿಷ್ಟ ಮೊತ್ತವನ್ನು ನಿಯಮಿತವಾಗಿ ಕಾಯ್ದುಕೊಳ್ಳಬೇಕಿರುವುದು ಅತ್ಯವಶ್ಯ.

Leave a Reply

Your email address will not be published. Required fields are marked *

Back To Top