Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

ಹಣ್ಣು ಹಾರುತಿದೆ ನೋಡಿದಿರಾ!!

Tuesday, 12.06.2018, 3:01 AM       No Comments

‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬುದು ದ.ರಾ. ಬೇಂದ್ರೆ ಅವರ ಸುಪ್ರಸಿದ್ಧ ಕವಿತೆಗಳಲ್ಲೊಂದು. ಮುಂದಿನ ಸುದ್ದಿ ಓದಿದರೆ, ‘ಹಣ್ಣು ಹಾರುತಿದೆ ನೋಡಿದಿರಾ!’ ಎಂದು ನೀವು ಉದ್ಗರಿಸಬಹುದು! ರುಚಿಯಿಂದಾಗಿ ಖ್ಯಾತಿಯನ್ನೂ, ಘಾಟು ವಾಸನೆಯಿಂದಾಗಿ ಕುಖ್ಯಾತಿಯನ್ನೂ ಏಕಪ್ರಕಾರವಾಗಿ ಗಳಿಸಿರುವ ‘ಡುರಿಯನ್’ ಎಂಬ ಹಣ್ಣು ನಿಮಗೆ ಗೊತ್ತಿರಬಹುದು. ಇದರ ಹೊರಮೈ ನೋಡುವುದಕ್ಕೆ ಹಲಸಿನ ಹಣ್ಣಿನಂತೆ ಇರುತ್ತದೆ. ಹಣ್ಣು ಯಾವುದೇ ಇರಲಿ, ಅದನ್ನು ಹೊಟ್ಟೆಗೆ ‘ಇಳಿಸಲು’ ಆಲೋಚಿಸಿದರೆ ಅದನ್ನು ಸಹಜ ವರ್ತನೆ ಎನ್ನಬಹುದು; ಆದರೆ ಆಕಾಶಕ್ಕೆ ‘ಏರಿಸಲು’ ಆಲೋಚಿಸಿದರೆ ಅದನ್ನು ಏನನ್ನಬೇಕು? ಇಂಥ ಸುದ್ದಿ ಥಾಯ್ಲೆಂಡ್​ನಿಂದ ವರದಿಯಾಗಿದೆ. ಡುರಿಯನ್ ಹಣ್ಣನ್ನು ಭೂಕಕ್ಷೆಗೆ ಉಡಾಯಿಸಿ, ಅದರ ಬಾಳಿಕೆಯನ್ನು ಪರೀಕ್ಷಿಸಲು ಥಾಯ್ಲೆಂಡ್ ಬಯಸಿದೆ. ಮುಂದೊಮ್ಮೆ ತನ್ನ ಗಗನಯಾತ್ರಿಗಳು ‘ಥಾಯ್’ ಶೈಲಿಯ ಆಹಾರವನ್ನೇ ತಿನ್ನುವಂತಾಗಬೇಕು ಎಂಬುದು ಅದರ ‘ಬಸುರಿ-ಬಯಕೆ!’. ಹೀಗಾಗಿ ‘ಶೂನ್ಯ-ಗುರುತ್ವಾಕರ್ಷಣೆ’ ಪರಿಸ್ಥಿತಿಗಳಲ್ಲಿ ಈ ಹಣ್ಣನ್ನು ಸೇವಿಸಬಹುದೇ ಎಂಬುದರ ಅವಲೋಕನಕ್ಕೆ ಈ ಪರೀಕ್ಷೆಯಂತೆ. ಹಾಗಂತ ಹಣ್ಣನ್ನು ಉಡಾಯಿಸಿ ಬಾಹ್ಯಾಕಾಶ ವಿಜ್ಞಾನಿಗಳು ಕೈತೊಳೆದುಕೊಂಡು ಕೂರುವುದಿಲ್ಲವಂತೆ; ಅದನ್ನು ಭೂಮಿಗೆ ಮರಳಿ ತಂದಾಗ ಅದರಲ್ಲೇನಾದರೂ ಭೌತಿಕ ಬದಲಾವಣೆಗಳಾಗಿವೆಯೇ (ಅಂದರೆ ಗಾತ್ರ ಚಿಕ್ಕದಾಗಿದೆಯೇ ಅಥವಾ ಸೀಳಿದೆಯೇ) ಎಂಬುದನ್ನು ಅವಲೋಕಿಸುತ್ತಾರಂತೆ. ಆದರೆ ಘಾಟು ವಾಸನೆಯ ಕಾರಣದಿಂದಾಗಿ ಹೋಟೆಲ್ ಕೋಣೆಗಳು, ಎಲಿವೇಟರ್​ಗಳು ಮತ್ತು ವಿಮಾನದ ಕ್ಯಾಬಿನ್​ಗಳಲ್ಲಿ ನಿಷೇಧಿಸಲ್ಪಟ್ಟಿರುವ ಈ ಹಣ್ಣನ್ನು ಬಾಹ್ಯಾಕಾಶ ನೌಕೆಯಂಥ ಮುಚ್ಚಿದ ವಾತಾವರಣವು ಹೇಗೆ ಸ್ವೀಕರಿಸುತ್ತದೆ ಎಂಬುದು ಕೆಲವರ ಕುತೂಹಲ.

Leave a Reply

Your email address will not be published. Required fields are marked *

Back To Top