Wednesday, 15th August 2018  

Vijayavani

ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ: ಕೆಆರ್‌ಎಸ್‌ಗೆ ಭಾರಿ ಒಳಹರಿವು, ಡ್ಯಾಂನಿಂದ 1.50 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ        ಹಾಸನದಲ್ಲಿ ಮಳೆ ಅಬ್ಬರ: ಶಿರಾಡಿಘಾಟ್‌ನಲ್ಲಿ ಅನಿಲ ಟ್ಯಾಂಕ್‌ ಪಲ್ಟಿ, ಸೋಮವಾರ ಪೇಟೆ ಹೆದ್ದಾರಿ ಬಿರುಕು        ಉಕ್ಕಿಹರಿಯುತ್ತಿದೆ ತುಂಗಭದ್ರ: ದಾವಣಗೆರೆ ಜಿಲ್ಲೆಯಲ್ಲಿ ಬೆಳೆ ನಾಶ, ಕಂಪ್ಲಿ ಸೇತುವೆ ನೀರಲ್ಲಿ ಮುಳುಗಡೆ        ಕೆಂಪು ಕೋಟೆ ಮೇಲೆ ಮೋದಿ ಧ್ವಜರೋಹಣ: ಸರ್ಕಾರದ ಸಾಧನೆಗಳ ಬಣ್ಣನೆ, ಆಯುಷ್ಮಾನ್‌ ಭಾರತ ಘೋಷಣೆ       
Breaking News

ಹಣವಿದ್ದೂ ದರಿದ್ರನಾದ ಶ್ರೀಮಂತ

Saturday, 21.07.2018, 3:03 AM       No Comments

| ಗಂಗಾವತಿ ಪ್ರಾಣೇಶ್​​

ನಾಮಪ್ರೇಮಿ ಸಂತನೊಬ್ಬನ ಬಳಿಗೆ ಬಂದ ಶ್ರೀಮಂತ ತನ್ನ ಹಣದ ಚೀಲ ಬಿಚ್ಚಿ ಇದನ್ನು ಸ್ವೀಕರಿಸಬೇಕೆಂದು ವಿನಂತಿಸಿಕೊಂಡ. ಸಂತನು ಮೆಲ್ಲಗೆ ನಸುನಕ್ಕು ಹೊಟ್ಟೆ ಬಟ್ಟೆಗಿಲ್ಲದೆ ನಿನ್ನಂತಹ ದರಿದ್ರನಿಂದ ಹಣ ಸ್ವೀಕರಿಸಲಾರೆ ಎಂದ. ಇದನ್ನು ಕೇಳಿದ ಶ್ರೀಮಂತನು ಸ್ವಾಮಿ ನನ್ನನ್ನು ದರಿದ್ರನೆಂದು ತಿಳಿದಿರಾ? ನಾನು ದೊಡ್ಡ ಧನಾಢ್ಯ ಎಂದು ಅಭಿಮಾನದಿಂದ ಹೇಳಿದನು. ನಿನಗಿನ್ನು ಧನ ಸಂಗ್ರಹದ ಆಸೆ ಇದೆಯೇ ಇಲ್ಲವೇ? ಎಂದು ಸಂತನು ಕೇಳಲು, ಏಕಿಲ್ಲ? ಧನಸಂಗ್ರಹಕ್ಕಾಗಿಯೇ ಹಗಲು-ರಾತ್ರಿ ಅನ್ನ ಆಹಾರಗಳಿಲ್ಲದೆ ಪ್ರಯತ್ನ ಪಡುತ್ತಿದ್ದೇನೆ ಎಂದು ಧನಿಕನು ಎದೆಯುಬ್ಬಿಸಿ ಹೇಳಿದ. ಆಗಲಾ ಸಂತನು, ಆಹಾ! ಇಷ್ಟು ಸಂಪತ್ತಿದ್ದರೂ ಅತೃಪ್ತಿಯಿಂದ ಅಶಾಂತಿಯಿಂದ ಅನ್ನ ಆಹಾರವಿಲ್ಲದೆ ಹರಕು ಬಟ್ಟೆಯಲ್ಲಿ, ಹಗಲೂ ರಾತ್ರಿ ದುಡಿಯುವ ನೀನು ದರಿದ್ರನಲ್ಲದೆ ಮತ್ತೇನು? ಎನ್ನಲು ಧನಿಕ ಹಣದ ಚೀಲದೊಂದಿಗೆ ತಲೆ ತಗ್ಗಿಸಿಕೊಂಡು ಮರಳಿದ.

Leave a Reply

Your email address will not be published. Required fields are marked *

Back To Top