Monday, 19th March 2018  

Vijayavani

ಬಿಜೆಪಿ, RSSನವರು ಕೌರವರು - ರೈತರು ಸಾಯ್ತಿದ್ರೆ ಮೋದಿ ಯೋಗ ಮಾಡ್ತಾರೆ - ಅಧಿವೇಶನದ ಕಡೇ ದಿನ ರಾಹುಲ್ ವಾಗ್ದಾಳಿ        ಬ್ಯಾಲೆಟ್‌ ಪದ್ದತಿಗೆ ರಾಜಕೀಯ ಒಮ್ಮತ - ಮತಪತ್ರ ಬಳಕೆ ಚರ್ಚಿಸಲು ಓಕೆ ಎಂದ ಬಿಜೆಪಿ - ಮತ್ತೆ ಬರುತ್ತಾ ಬ್ಯಾಲೆಟ್ ಪೇಪರ್‌ ಬಗೆದಷ್ಟು ಬಯಲಾಗ್ತಿದೆ ವಿಕ್ರಂ ಚಿಟ್‌ಫಂಡ್ ವಂಚನೆ - ಇನ್ವೆಸ್ಟ್ ಮಾಡಿದ್ದ ದ್ರಾವಿಡ್ ಪತ್ನಿಗೂ ಮೋಸ - ಸದಾಶಿವನಗರ ಠಾಣೆಯಲ್ಲಿ ಕೇಸ್        ಲಿಂಗಾಯತ ಧರ್ಮ ಸಂಕಟದಲ್ಲಿ ಸಿಎಂ - ಕೇಂದ್ರಕ್ಕೆ ವರದಿ ಶಿಫಾರಸು ಕುರಿತು ನಾಳೆ ಡಿಸ್ಕಷನ್ - ಕುತೂಹಲ ಮೂಡಿಸಿದ ಸಿದ್ದರಾಮಯ್ಯ ನಡೆ        ಎನ್‌ಜಿಒ ಕ್ರೆಡಿಟ್ ಕಾರ್ಡ್‌ ಬಳಸಿ ಶಾಪಿಂಗ್ - ಮಾರಿಷಸ್‌ ಅಧ್ಯಕ್ಷೆ ಅಮೀನಾ ರಿಸೈನ್ - ಬಿಂದಾಸ್‌ ಲೈಫ್‌ಗೆ ಹೋಯ್ತು ಪ್ರೆಸಿಡೆಂಟ್ ಸೀಟ್        ನಾಡಿನಾದ್ಯಂತ ವಿಳಂಬಿ ನಾಮ ಸಂವತ್ಸರ - ಬೇವು ಬೆಲ್ಲ ಸವಿದು ನಮಿಸಿದ ಭಕ್ತಸಾಗರ - ದಾವಣಗೆರೆಯ ಕುಂದುವಾಡದಲ್ಲಿಲ್ಲ ಹಬ್ಬದ ಸಡಗರ       
Breaking News

ಸ್ವತಂತ್ರ ಧರ್ಮಕ್ಕಾಗಿ ಲಿಂಗಾಯತರ ರ‍್ಯಾಲಿ

Thursday, 20.07.2017, 3:00 AM       No Comments

ಬೀದರ್: ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಲಿಂಗಾಯತ ಸಮಾಜ ಮಹಾ ರ‍್ಯಾಲಿ ನಡೆಸಿ ಶಕ್ತಿ ಪ್ರದರ್ಶಿಸಿದೆ. ವಿವಿಧೆಡೆಯಿಂದ ಅಪಾರ ಸಂಖ್ಯೆಯ ಬಸವಾನುಯಾಯಿಗಳು ಒಳಪಂಗಡ, ಪಕ್ಷಭೇದ ಮರೆತು ಈ ಐತಿಹಾಸಿಕ ರ್ಯಾಲಿಗೆ ಸಾಕ್ಷಿಯಾಗಿ ಬೇಡಿಕೆ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಿದರು.

ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಶ್ರೀ ಡಾ.ಮಾತೆ ಮಹಾದೇವಿ ಮಾತನಾಡಿ, ಲಿಂಗಾಯತ ಜಾತಿ, ಮತ, ಪಂಥವಲ್ಲ. ಇದು ಸ್ವತಂತ್ರ ಧರ್ಮ. ಕೆಲವರ ಅಜ್ಞಾನದಿಂದ ಲಿಂಗಾಯತ ಜಾತಿ ಮತ್ತು ಹಿಂದೂ ಧರ್ಮದ ಭಾಗವಾಗೇ ಉಳಿದಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ಸೆ.11ಕ್ಕೆ ಮಹಾರಾಷ್ಟ್ರದ ಲಾತೂರಿನಲ್ಲಿ ಬೃಹತ್ ರ‍್ಯಾಲಿ ನಡೆಯಲಿದೆ ಎಂದರು.ರ್ಯಾಲಿಯಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು, ಅಕ್ಕ ಅನ್ನಪೂರ್ಣ, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶ್ರೀ ಶಿವಾನಂದ ಸ್ವ್ವಾಮೀಜಿ, ಡಾ.ಶಿವಲಿಂಗ ಶಿವಾಚಾರ್ಯ ಅಹ್ಮದಪುರ ಸೇರಿ ನಾನಾ ಮಠಾಧೀಶರು, ಜನಪ್ರತಿನಿಧಿಗಳು, ಪ್ರಮುಖರು ಪಾಲ್ಗೊಂಡಿದ್ದರು.

 ಕೇಂದ್ರ ಸರ್ಕಾರ ‘ಲಿಂಗಾಯತ ಧರ್ಮ’ ಸ್ವತಂತ್ರ ಧರ್ಮವೆಂದು ಘೋಷಿಸಬೇಕು ಎಂದು ಒತ್ತಾಯಿಸುತ್ತಿರುವ ಮಾತೆ ಮಹಾದೇವಿಯವರದು ಅವಿವೇಕದ ನಿಲುವು. ಬಸವಣ್ಣ ವೀರಶೈವ ಧರ್ಮ ಸಂಸ್ಥಾಪಕರೆನ್ನುವುದಕ್ಕೆ ಹಲವು ಸಾಕ್ಷ್ಯಾಧಾರಗಳಿವೆ.

| ನಾಡೋಜ ಡಾ.ಎಂ.ಚಿದಾನಂದ ಮೂರ್ತಿ

 ದೂರವುಳಿದ ಖಂಡ್ರೆ!

ಕೊನೆವರೆಗೂ ತಮ್ಮ ನಿಲುವು ಸ್ಪಷ್ಟಪಡಿಸದ ಅಖಿಲ ಭಾರತ ವೀರಶೈವ ಮಹಾಸಭೆ ಪ್ರಧಾನ ಕಾರ್ಯದರ್ಶಿ, ಪೌರಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ರ್ಯಾಲಿಯಿಂದ ದೂರವುಳಿದರು. ಜಿಲ್ಲೆಯ ಎಲ್ಲ ಶಾಸಕರಿದ್ದರೂ ಖಂಡ್ರೆ ಮಾತ್ರ ಬರದಿರುವುದು ಚರ್ಚೆಗೆ ನಾಂದಿ ಹಾಡಿದೆ.

 ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆಯಾಗಿವೆ. ವೀರಶೈವ ಪದ ಲಿಂಗಾಯತದ ಜತೆಗೆ ಜೋಡಿಸುವುದೇ ತಪ್ಪು. ವೀರಶೈವ ಬಿಟ್ಟರೆ ಮಾತ್ರ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಲಿದೆ. ಈ ಎರಡೂ ಪದ ಒಂದೇ ಅಲ್ಲ ಎಂಬ ಬಗ್ಗೆ ನಾಡಿನ ಮಠಾಧೀಶರು, ಸಂಶೋಧಕರು, ಚಿಂತಕರೊಂದಿಗೆ ಬಹಿರಂಗ ವೇದಿಕೆಯಲ್ಲಿ ಚರ್ಚೆ ನಡೆಸಲು ನಾವು ಸಿದ್ಧ.

| ಶ್ರೀ ಡಾ.ಮಾತೆ ಮಹಾದೇವಿ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ

Leave a Reply

Your email address will not be published. Required fields are marked *

Back To Top