Friday, 23rd March 2018  

Vijayavani

ರಾಜ್ಯಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ - ವಿಧಾನಸೌಧದಲ್ಲಿ ಮತ ಎಣಿಕೆ - ಚುನಾವಣಾ ಅಧಿಕಾರಿಯಿಂದ ರಿಸಲ್ಟ್​ ಅನೌನ್ಸ್        ಕೈಗೆ ಮೂರು, ಬಿಜೆಪಿಗೆ ಒಂದು ಸೀಟು ಪಕ್ಕಾ - ಈ ಬಾರಿಯೂ ಜೆಡಿಎಸ್​ಗಿಲ್ಲ ಸ್ಥಾನ - ಎರಡನೇ ಫಾರೂಕ್​ಗಿಲ್ಲ ಅದೃಷ್ಟ        ಸ್ಪೀಕರ್​ ನೆರವಿಗೆ ಬರಲಿಲ್ಲ - ನಾಗಮೋಹನ್​ದಾಸ್​ ವರದಿಯೇ ಸರಿಯಿಲ್ಲ - ವೀರಶೈವ ಮಹಾಸಭೆಯಲ್ಲಿ ಪ್ರತ್ಯೇಕ ಧರ್ಮಕ್ಕೆ ಆಕ್ರೋಶ        SSLC ಅಲ್ಲ ಇದು ಕಾಪಿಚೀಟಿ ಪರೀಕ್ಷೆ - ಬಹುತೇಕ ಕೇಂದ್ರಗಳಲ್ಲಿ ಸಾಮೂಹಿಕ ನಕಲು - ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಸೇರಿ ಎಂಟು ಡಿಬಾರ್​        ಮಕ್ಕಳಾಗದ್ದಕ್ಕೆ ಪತ್ನಿ ಮೇಲೆ ದೌರ್ಜನ್ಯ - ವಿಕೃತ ಪತಿಯಿಂದ ಪತ್ನಿಗೆ ನಿರಂತರ ಕಿರುಕುಳ - ಮಗನಿಗೆ ಎರಡನೇ ಮದ್ವೆ ಮಾಡಲು ಪೋಷಕರ ಪ್ಲಾನ್​       
Breaking News

ಸ್ಯಾಮ್ಸನ್ ಶತಕಕ್ಕೆ ಲಂಕಾ ಸುಸ್ತು

Monday, 13.11.2017, 3:02 AM       No Comments

ಕೋಲ್ಕತ: ಮೊದಲ ದಿನ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಕಾಡಿದ್ದ ಪ್ರವಾಸಿ ಶ್ರೀಲಂಕಾ ತಂಡಕ್ಕೆ ದ್ವಿದಿನ ಅಭ್ಯಾಸ ಪಂದ್ಯದ 2ನೇ ಹಾಗೂ ಅಂತಿಮ ದಿನ ನಾಯಕ ಸಂಜು ಸ್ಯಾಮ್ಸನ್ (128 ರನ್, 143 ಎಸೆತ, 19 ಬೌಂಡರಿ, 1 ಸಿಕ್ಸರ್ ) ಆಕರ್ಷಕ ಶತಕದಾಟದ ಮೂಲಕ ಬೆವರಿಳಿಸಿದರು. ಇದರೊಂದಿಗೆ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟ ಲಂಕಾ ತಂಡ ಮುಂದಿನ ಗುರುವಾರದಿಂದ ಆರಂಭಗೊಳ್ಳಲಿರುವ ಟೀಮ್ ಇಂಡಿಯಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ.

ಅಭ್ಯಾಸ ಪಂದ್ಯದಲ್ಲಿ ಭಾನುವಾರ ಲಂಕಾ ತಂಡ ಬೌಲಿಂಗ್ ವೇಳೆ ಬರೋಬ್ಬರಿ 14 ಬೌಲರ್​ಗಳನ್ನು ಕಣಕ್ಕಿಳಿಸಿದ್ದು ವಿಶೇಷವಾಗಿತ್ತು. ಪಂದ್ಯದಲ್ಲಿ ಫೀಲ್ಡಿಂಗ್-ಬ್ಯಾಟಿಂಗ್ ಹೊರತಾಗಿ ಎಲ್ಲ 15 ಆಟಗಾರರನ್ನು ಬಳಸಿಕೊಳ್ಳುವ ಅವಕಾಶವಿತ್ತು.

ಲಂಕಾದ ಮೊದಲ ಇನಿಂಗ್ಸ್​ನ 411ರನ್​ಗೆ ಪ್ರತಿಯಾಗಿ ಭಾನುವಾರ ಮೊದಲ ಇನಿಂಗ್ಸ್ ಆರಂಭಿಸಿದ ಮಂಡಳಿ ಅಧ್ಯಕ್ಷರ ಇಲೆವೆನ್ ದಿನದಂತ್ಯದ ವೇಳೆಗೆ 5 ವಿಕೆಟ್​ಗೆ 287 ರನ್ ದಾಖಲಿಸಿತು. ಭಾರತದ ವಿರುದ್ಧ ಪ್ರಮುಖ ಅಸ್ತ್ರವಾಗಿರುವ ರಂಗನಾ ಹೆರಾತ್ ಒಂದೂ ವಿಕೆಟ್ ಕಬಳಿಸಲಿಲ್ಲ. ಲಂಕಾ ಪರ ವಿಕೆಟ್ ಕೀಪರ್ ನಿರೋಶಾನ್ ಡಿಕ್​ವೆಲ್ಲಾ ಹೊರತುಪಡಿಸಿ ಉಳಿದೆಲ್ಲಾ ಬೌಲರ್​ಗಳನ್ನು ಬೌಲಿಂಗ್ ಮಾಡಿದರು. ಲಾಹಿರು ತಿರಿಮನ್ನೆ ಮಾತ್ರ 2ವಿಕೆಟ್ ಕಬಳಿಸಿದರು.

ಶ್ರೀಲಂಕಾ: 9ವಿಕೆಟ್​ಗೆ 411 ಡಿ.,ಮಂಡಳಿ ಅಧ್ಯಕ್ಷರ ಇಲೆವೆನ್: 75 ಓವರ್​ಗಳಲ್ಲಿ 5ವಿಕೆಟ್​ಗೆ 287 (ಸ್ಯಾಮ್ಸನ್ 128, ರೋಹನ್ ಪ್ರೇಮ್ 39, ತಿರಿಮನ್ನೆ 22ಕ್ಕೆ 2).

Leave a Reply

Your email address will not be published. Required fields are marked *

Back To Top