Sunday, 25th June 2017  

Vijayavani

1. ಇಂದಿನಿಂದ ಪ್ರಧಾನಿ ಅಮೆರಿಕಾ ಪ್ರವಾಸ- ವೈಟ್‌ಹೌಸ್‌ನಲ್ಲಿ ಮೋದಿಗೆ ವಿಶೇಷ ಡಿನ್ನರ್‌- ಟ್ರಂಪ್‌ರ ಮೊದಲ ಅತಿಥಿಯಾಗಲಿದ್ದಾರೆ ನರೇಂದ್ರ ಮೋದಿ 2. ಹೈವೇಗಳಲ್ಲಿ ಮದ್ಯ ಮಾರಾಟ ನಿಷೇಧ ವಿಚಾರ- ಹೋಟೆಲ್​, ರೆಸ್ಟೋರೆಂಟ್‌ಗಳಲ್ಲಿ ಎಣ್ಣೆಗೆ ಅವಕಾಶ- ರಂಗೋಲಿ ಕೆಳಗೆ ತೂರಿದ ಪಂಜಾಬ್​ ಸರ್ಕಾರ 3. ಇನ್ಫೋಸಿಸ್‌ ವಿರುದ್ಧ ವೀಸಾ ನಿಯಮ ಉಲ್ಲಂಘನೆ ಆರೋಪ- ಆರುವರೆ ಕೋಟಿ ದಂಡ ವಿಧಿಸಿದ ನ್ಯೂಯಾರ್ಕ್‌ ಸರ್ಕಾರ- ಆರೋಪ ಅಲ್ಲಗಳೆದ ಇನ್ಫೋಸಿಸ್‌ 4. ಕಷ್ಟ ಎದುರಾದ್ರೆ ಶಾಲೆಗೆ ಹರಕೆ- ಇಷ್ಟಾರ್ಥ ಸಿದ್ಧಿಯಾದ್ರೆ ವಿವಿಧ ಕೊಡುಗೆ- ಬಂಟ್ವಾಳದ ಸೂರಿಬೈಲ್​ನಲ್ಲಿ ಶಾಲೆಯೇ ದೇವರು 5. ಭಾರತ ವೆಸ್ಟ್‌ವಿಂಡೀಸ್‌ ಕ್ರಿಕೆಟ್‌ ಸರಣಿ- ಮೊದಲ ಪಂದ್ಯ ವರುಣನಿಗೆ ಬಲಿ- ಮಳೆಯಲ್ಲಿ ತೇಲಿಹೋದ ಶಿಖರ್‌ ಧವನ್‌, ರಹಾನೆ ಅರ್ಧ ಶತಕ
Breaking News :

ಸ್ನಾಯುಗಳನ್ನು ಬಲಗೊಳಿಸುವ ವೀರಭದ್ರಾಸನ

Sunday, 16.04.2017, 3:01 AM       No Comments

| ಬಿ. ರಾಘವೇಂದ್ರ ಶೆಣೈ

ಕಿಟಕಿಯ ಸಹಾಯದಿಂದ ವೀರಭದ್ರಾಸನ ಪ್ರಕಾರ 2ನ್ನು ಅಭ್ಯಾಸ ಮಾಡುವುದರಿಂದ ಆರ್ಥ್ರೈಟಿಸ್ ಸಮಸ್ಯೆ ಶಮನವಾಗುತ್ತದೆ. ಈ ಯೋಗಾಸನ ಮಾಡುವುದರಿಂದ ಹಲವು ಲಾಭಗಳಿವೆ. ಬೆನ್ನು ನೋವು ಶಮನಗೊಳಿಸುವ ಈ ಆಸನ ಆರ್ಥ್ರೈಟಿಸ್ ನಿವಾರಣೆಗೂ ಉಪಯೋಗಿಯಾಗುತ್ತದೆ. ಆದ್ದರಿಂದ ನಿತ್ಯ ಆಸನಗಳನ್ನು ಮಾಡುವುದು ಒಳಿತು.

ವಿಧಾನ: ಕಿಟಕಿಗೆ ಮುಖ ಮಾಡಿ ನಿಂತು ಕಂಬಿಗಳನ್ನು ಹಿಡಿದುಕೊಳ್ಳಿ. ಕಾಲುಗಳನ್ನು 3ರಿಂದ 4 ಅಡಿಗಳಷ್ಟು ಅಂತರದಲ್ಲಿ ವಿಸ್ತರಿಸಿ.

ಎಡಪಾದವನ್ನು 60 ಡಿಗ್ರಿ ಯಷ್ಟು ಒಳಕ್ಕೆ ತಿರುಗಿಸಿ. ಬಲಗಾಲನ್ನು 90 ಡಿಗ್ರಿಯಷ್ಟು ಬಲಕ್ಕೆ ತಿರುಗಿಸಿ. ಬಲಪಾದದ ಕೆಳಗೆ ಕಮಾನಿನ ಆಕಾರದ ಇಟ್ಟಿಗೆಯನ್ನಿಡಿ. ಉಸಿರನ್ನು ಬಿಡುತ್ತಾ ಬಲ ಮೊಣಕಾಲನ್ನು ಬಾಗಿಸಿ. ಬಲ ಮುಂಗಾಲು ನೆಲಕ್ಕೆ ಲಂಬವಾಗಿರಲಿ. ಬಲ ತೊಡೆಯನ್ನು ನೆಲಕ್ಕೆ ಸಮಾನಾಂತರಗೊಳಿಸಿ. ಎಡ ಪಾದವನ್ನು ನೆಲಕ್ಕೆ ಒತ್ತಿ ಎಡಗಾಲನ್ನು ನೇರಗೊಳಿಸಿ. 20-30 ಸೆಕೆಂಡ್ ಸ್ಥಿತಿಯಲ್ಲಿದ್ದು ನಂತರ ಕ್ರಮಾಂಕ 1ನೇ ಸ್ಥಿತಿಗೆ ಬನ್ನಿ. ಈಗ ಎರಡೂ ಪಾದಗಳನ್ನು ವಿರುದ್ಧ ದಿಕ್ಕಿಗೆ, ಅಂದರೆ ಬಲಪಾದವನ್ನು 60 ಡಿಗ್ರಿಯಷ್ಟು ಒಳಕ್ಕೆ ಎಡಗಾಲನ್ನು 90 ಡಿಗ್ರಿಯಷ್ಟು ಹೊರಕ್ಕೆ ತಿರುಗಿಸಿ. ಎಡಪಾದದ ಕೆಳಗೆ ಕಮಾನಿನ ಆಕಾರದ ಇಟ್ಟಿಗೆಯನ್ನಿಡಿ. ಎಡಗಾಲನ್ನು ಬಾಗಿಸುತ್ತಾ ಎಡಪಾರ್ಶ್ವಕ್ಕೂ ಪುನರಾವರ್ತಿಸಿ. 20-30 ಸೆಕೆಂಡ್ ಸ್ಥಿತಿಯಲ್ಲಿರಿ. ಈಗ ಕ್ರಮವಾಗಿ 1ನೇ ಸ್ಥಿತಿಗೆ ಬನ್ನಿ.

ಉಪಯೋಗ: ಕಾಲುಗಳ ಮಾಂಸಖಂಡಗಳು, ಬೆನ್ನಿನ ಹಾಗೂ ಹೊಟ್ಟೆಯಲ್ಲಿನ ಸ್ನಾಯುಗಳು ಬಲಗೊಳ್ಳುವವು. ಮಂಡಿಗಳಲ್ಲಿರುವ ಬಿಗಿತ ಕಡಿಮೆಯಾಗುವುದು. ಮಡಚಲು ಸುಲಭವಾಗುವುದು.

ನಾಳೆ ನೋಡಿ: ಸ್ನಾಯುಗಳ ಹಿಗ್ಗುವಿಕೆಗೆ ಪಾಶ್ವೋತ್ಥಾನಾಸನ

Leave a Reply

Your email address will not be published. Required fields are marked *

2 × 3 =

Back To Top