Tuesday, 27th June 2017  

Vijayavani

1. ಅಮೆರಿಕದಲ್ಲಿ ಟ್ರಂಪ್​ ಮೋದಿ ಭೇಟಿ- ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶ್ವೇತ ಭವನ 2. ಸಹಜವಾಗಿ ಬರ್ತಿದ್ದೋರು ಕರೆದಿದ್ದಕ್ಕೆ ಬಂದ್ರು- ಕೃಷ್ಣಮಠದಲ್ಲಿ ಎಲ್ಲ ವರ್ಗದವರೂ ಊಟ ಮಾಡ್ತಾರೆ- ಸೌಹಾರ್ಧ ಭೋಜನಕ್ಕೆ ಪೇಜಾವರ ಶ್ರೀ ಸ್ಪಷ್ಟನೆ 3. ವಿಧಾನಸಭೆ ಚುನಾವಣೆ ಮೇಲೆ ವೇಣುಗೋಪಾಲ್ ಕಣ್ಣು- ಇಂದು ರಾಜ್ಯಕ್ಕೆ ಕೈ ಉಸ್ತುವಾರಿ ಆಗಮನ- ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ 4. ಉದ್ಧಾರ ಮಾಡ್ತೀವಿ ಅಂತಾ ಗುಂಡಿ ತೆಗೆದ್ರು- ಮೇಲುಕೋಟೆ ದೇವಸ್ಥಾನದ ಅಂದ ಹಾಳುಗೆಡುವಿದ್ರು- ಪುರಾತತ್ವ ಇಲಾಖೆ ವಿರುದ್ಧ ಪೊಲೀಸ್​ಠಾಣೆಯಲ್ಲಿ ದೂರು 5. ಆಕಾಶದಲ್ಲಿ ಹಾರುವಾಗಲೇ ತಾಂತ್ರಿಕ ದೋಷ- ವಿಮಾನದಲ್ಲಿದ್ದ ಸೀಟು ಫುಲ್​ ಅಲ್ಲಾಡ್ಸು- ಸೌಂಡ್ಗೆ ಬೆಚ್ಚಿ ಬಿದ್ದ ಜನ ಸೇಫು
Breaking News :

ಸ್ಟೆಮ್ ಸೆಲ್ ಮೂಲಕ ರಕ್ತಕ್ರಾಂತಿ

Friday, 19.05.2017, 3:00 AM       No Comments

ಬೋಸ್ಟನ್ (ಅಮೆರಿಕ): ಮಾನವನ ರಕ್ತಕ್ಕೆ ಅಗತ್ಯವಾಗಿರುವ ಕಾಂಡಕೋಶಗಳನ್ನು (ಸ್ಟೆಮ್ ಸೆಲ್ಸ್) ಪರಿವರ್ತಿಸುವ ಹಾಗೂ ಅದರ ಪ್ರಮಾಣ ಹೆಚ್ಚಿಸುವ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ರಕ್ತದಲ್ಲಿನ ನ್ಯೂನತೆ ಸಮಸ್ಯೆ, ಪ್ರತಿರಕ್ಷಣಾ (ಇಮ್ಯೂನ್) ಸಮಸ್ಯೆ, ರಕ್ತ ವರ್ಗಾವಣೆ ಅಗತ್ಯ ಉಳ್ಳವರಿಗೆ ಈ ವಿಧಾನದಿಂದ ಭಾರಿ ಅನುಕೂಲವಾಗಲಿದೆ. ಈ ಪದ್ಧತಿ ಯಶಸ್ವಿಯಾಗಿ ಜಾರಿಗೆ ಬಂದಲ್ಲಿ ರಕ್ತದ ಕೊರತೆ ಸಂಪೂರ್ಣ ನಿವಾರಣೆಯಾಗುವ ಸಾಧ್ಯತೆಯಿದ್ದು, ರಕ್ತದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಆಸರೆಯಾಗಲಿದೆ.

20 ವರ್ಷಗಳಿಂದ ಈ ಸಂಶೋಧನೆ ನಡೆಸಲಾಗುತ್ತಿದ್ದು, ಇದೇ ಮೊತ್ತ ಮೊದಲ ಬಾರಿಗೆ ಆರಂಭಿಕ ಯಶಸ್ಸು ಲಭಿಸಿದೆ. ಎರಡು ಪ್ರತ್ಯೇಕ ಸಂಶೋಧನೆಯ ಕುರಿತು ‘ನೇಚರ್’ ಜರ್ನಲ್​ನಲ್ಲಿ ವರದಿ ಪ್ರಕಟವಾಗಿದೆ.

ಸಂಶೋಧಕರ ತಂಡವೊಂದು ವಿವಿಧ ರೀತಿಯ ಮಾನವ ರಕ್ತ ಕಣಗಳನ್ನು ಇಲಿಗೆ ಅಳವಡಿಸುವ ಮೂಲಕ ರಕ್ತ ಕಾಂಡಕೋಶ ಸಹಿತ ವಿವಿಧ ಮಾದರಿ ಕೋಶಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಮೆರಿಕದ ಬೋಸ್ಟನ್ ಮಕ್ಕಳ ಆಸ್ಪತ್ರೆಯ ಡಲೇ ಲ್ಯಾಬೋರೇಟರಿಯ ಡಾ. ರ್ಯೋಹಿಚಿ ಸುಗಿಮುರ ಹೇಳಿದ್ದಾರೆ. ಏಜೆನ್ಸೀಸ್

ಹೇಗೆ ಅನುಕೂಲಕರ?

  • ಆನುವಂಶಿಕ ರಕ್ತದ ನ್ಯೂನತೆ ಸಮಸ್ಯೆ ಇರುವ ರೋಗಿಗಳ ಕೋಶಗಳನ್ನು ಪಡೆದು, ವಂಶವಾಹಿ ಎಡಿಟಿ ಮಾಡಿ ಅವರ ಆನುವಂಶಿಕ ನ್ಯೂನತೆಗಳನ್ನು ನಿವಾರಿಸಬಹುದಾಗಿದೆ. ಅವರ ರಕ್ತಕಣಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಬಹುದು.
  • ದಾನಿಗಳಿಂದ ಪಡೆದ ರಕ್ತಗಳನ್ನು ಬಳಸಿಕೊಂಡು ಕಾಂಡಕೋಶಗಳನ್ನು ಪರಿವರ್ತನೆ ಮೂಲಕ ಮಿತಿರಹಿತ ರಕ್ತ ಸರಬರಾಜು ಮಾಡಬಹುದಾಗಿದೆ. ರಕ್ತದ ಅಗತ್ಯವುಳ್ಳ ರೋಗಿಗಳಿಗೆ ಇದು ವರದಾನವಾಗಲಿದೆ.

ಇನ್ನೊಂದು ಪ್ರಯೋಗ

ಕೋರ್ನೆಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ಶಹಿನ್ ಫಫೀ ನೇತೃತ್ವದ ಇನ್ನೊಂದು ಸಂಶೋಧಕರ ತಂಡವು ವಯಸ್ಕ ಇಲಿಯ ಕೋಶಗಳನ್ನು ಇಲಿ ರಕ್ತ ಕಾಂಡಕೋಶಗಳನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಈ ಪ್ರಯೋಗದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು (ಇಮ್ಯೂನ್ ಸಿಸ್ಟಂ) ಕಿತ್ತು ಹಾಕಲಾಗಿದ್ದ ಇಲಿಗಳಿಗೆ ರಕ್ತ ಕಾಂಡಕೋಶಗಳನ್ನು ಸೇರಿಸಿದಾಗ ಪ್ರತಿರಕ್ಷಣಾ ರಕ್ತ ಕಣಗಳನ್ನು ಮತ್ತೆ ಪಡೆದುಕೊಂಡವು.

Leave a Reply

Your email address will not be published. Required fields are marked *

two × 2 =

Back To Top