Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಸ್ಟೂಡೆಂಟ್ಸ್ ಒಲಿಂಪಿಕ್ಸ್​ಗೆ ಹುಬ್ಬಳ್ಳಿ ಹುಡುಗಿ ಸಹನಾ ಕುಲಕರ್ಣಿ

Wednesday, 28.06.2017, 3:01 AM       No Comments

|ಮರಿದೇವ ಹೂಗಾರ ಹುಬ್ಬಳ್ಳಿ 

ಮಲೇಷ್ಯಾದ ಜೊಹರ್​ಬಾಹ್ರುದಲ್ಲಿ ಜೂನ್29ರಿಂದ ಜುಲೈ 1ರವರೆಗೆ ನಡೆಯಲಿರುವ 3ನೇ ಅಂತಾರಾಷ್ಟ್ರೀಯ ಸ್ಟೂಡೆಂಟ್ಸ್ ಒಲಿಂಪಿಕ್ ಗೇಮ್ಸ್​ನ ಟೇಬಲ್ ಟೆನಿಸ್ ಸ್ಪರ್ಧೆಗೆ ಹುಬ್ಬಳ್ಳಿ ಹುಡುಗಿ ಸಹನಾ ಕುಲಕರ್ಣಿ ಆಯ್ಕೆಯಾಗಿದ್ದಾರೆ.

ಕೂಟದ 22 ವಯೋಮಿತಿ ಪುರುಷರ ವಿಭಾಗದಲ್ಲಿ ರಾಜ್ಯದ ಪ್ರತೀಕ್ ಘೊಡ್ಸೆ, ಅಭಿಷೇಕ್ ಕಠಾರೆ ಸ್ಪರ್ಧಿಸಲಿದ್ದರೆ, ಮಹಿಳಾ ವಿಭಾಗದಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಆಟಗಾರ್ತಿ ಸಹನಾ. ಅವರು ಮಂಗಳವಾರ ಮಲೇಷ್ಯಾಕ್ಕೆ ಪ್ರಯಾಣ ಬೆಳೆಸಿದರು. ಸಹನಾ ತಂದೆ ಶ್ರೀನಿವಾಸ ಕುಲಕರ್ಣಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಇಂಧು ಕುಲಕರ್ಣಿ ಜೆಎಸ್​ಎಸ್ ಕಾಲೇಜಿನಲ್ಲಿ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಸಹನಾ ಸದ್ಯ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಸ್

ಟ್ರೂಮೆಂಟೇಶನ್ 7ನೇ ಸೆಮಿಸ್ಟರ್ ಓದುತ್ತಿದ್ದಾರೆ. 3ನೇ ತರಗತಿಯಿಂದಲೇ ಟೇಬಲ್ ಟೆನಿಸ್ ಆಸಕ್ತಿ ಬೆಳೆಸಿಕೊಂಡ ಸಹನಾ, ಸತತ ಅಭ್ಯಾಸ, ಶ್ರದ್ಧೆಯಿಂದ ಸ್ಟೂಡೆಂಟ್ಸ್ ಒಲಿಂಪಿಕ್ಸ್​ಗೆ ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿ ಟೇಬಲ್ ಟೆನಿಸ್ ಸಂಸ್ಥೆಯಿಂದ ತರಬೇತಿ ಪಡೆದಿರುವ ಸಹನಾ, 2009ರಿಂದಲೇ ರಾಜ್ಯ-ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಸ್ಪರ್ಧಿಸುತ್ತಿದ್ದು, ಈಗಾಗಲೇ 121 ಟ್ರೋಫಿ ಹಾಗೂ ಪದಕಗಳನ್ನು ಗೆದ್ದಿದ್ದಾರೆ. 16 ಸಲ ರಾಷ್ಟ್ರಮಟ್ಟದ ಟಿಟಿ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ರಾಜ್ಯಮಟ್ಟದ 51 ಟೂರ್ನಿಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಗುಜರಾತ್​ನ ವಡೋದರದಲ್ಲಿ 2016ರಲ್ಲಿ ನಡೆದ ರಾಷ್ಟ್ರಮಟ್ಟದ ಸ್ಟೂಡೆಂಟ್ಸ್ ಒಲಿಂಪಿಕ್ಸ್​ನ ಟೇಬಲ್ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಬಂಗಾರದ ಪದಕ ಕೊರಳಿಗೇರಿಸಿಕೊಂಡಿದ್ದರು. ಬಿವಿಬಿ ಕಾಲೇಜ್​ನಿಂದ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಿ 3 ಸಲ ಯೂನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದಾರೆ.

 

ಚಿಕ್ಕಂದಿನಿಂದಲೇ ಸಹನಾಗೆ ತರಬೇತಿ ನೀಡಲಾಗುತ್ತಿತ್ತು. ಅವಳಿಗೆ ಪ್ರಶಸ್ತಿ ಮೇಲೆ ಪ್ರಶಸ್ತಿ ಬರುತ್ತಿದ್ದಂತೆ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಆಸಕ್ತಿ ಬೆಳೆಯಿತು. ಈ ಬೆಳವಣಿಗೆ ಎಲ್ಲರಿಗೂ ಖುಷಿ ತರಿಸಿದೆ.

| ಎಫ್.ಎಸ್.ಅರಳಿಕಟ್ಟಿ ಹುಬ್ಬಳ್ಳಿ ಟೇಬಲ್ ಟೆನಿಸ್ ಸಂಸ್ಥೆ ಕಾರ್ಯದರ್ಶಿ

 

ವಿಆರ್​ಎಲ್ ಸಂಸ್ಥೆಯಿಂದ ನೆರವು

ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಗೆ ಸಹನಾ ಇ- ಮೇಲ್ ಮೂಲಕ ನೆರವು ಕೋರಿದ್ದರು. ಇ-ಮೇಲ್ ತಲುಪಿದ ಐದು ನಿಮಿಷದೊಳಗೆ ವಿಚಾರಿಸಿದ ಆನಂದ ಸಂಕೇಶ್ವರ ಅವರು ನೆರವಿನ ಭರವಸೆ ನೀಡಿದರು. ಅಂತೆಯೇ ಆಕೆಗೆ ಒಂದು ಲಕ್ಷ ರೂ. ನೆರವು ನೀಡಿದ್ದಾರೆ. ಮಹಾನಗರ ಪಾಲಿಕೆಯಿಂದ ನೆರವು ಕೋರಿದ್ದರೂ ಇನ್ನೂ ಸಿಕ್ಕಿಲ್ಲ ಎನ್ನುತ್ತಾರೆ ಸಹನಾರ ತಂದೆ ಶ್ರೀನಿವಾಸ ಕುಲಕರ್ಣಿ. ದಕ್ಷಿಣ ಕೊರಿಯಾದಲ್ಲಿ ತರಬೇತಿಗೆ ಬೇಕಾದ ವೆಚ್ಚ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

 

Leave a Reply

Your email address will not be published. Required fields are marked *

Back To Top