Saturday, 18th November 2017  

Vijayavani

1. ಜಯಾ ನಿವಾಸದಲ್ಲಿ ಐಟಿ ಇಂಚಿಂಚೂ ಶೋಧ- ಪೋಯೆಸ್​ ಗಾರ್ಡನ್​​ನಲ್ಲಿ ದಾಖಲೆಗಳ ಪರಿಶೀಲನೆ- ಚೆನ್ನೈನಲ್ಲಿ ಕಳೆದ ರಾತ್ರಿಯಿಂದಲೂ ಹೈಡ್ರಾಮಾ 2. ಬೆಂಗಳೂರಿನಲ್ಲಿ ವ್ಯಕ್ತಿಯ ಪುಂಡಾಟ- ನಡುರೋಡಲ್ಲೇ ಟ್ರಾಫಿಕ್​​ ಪೊಲೀಸ್​ ಮೇಲೆ ಹಲ್ಲೆ- ದೊಣ್ಣೆ ಹಿಡಿದ ವ್ಯಕ್ತಿ ಈಗ ಖಾಕಿ ಅತಿಥಿ 3. ಒಂದಲ್ಲ… ಎರಡಲ್ಲ… ಬರೋಬ್ಬರಿ ಮೂರು- ಬೀಗರ ಊಟದಲ್ಲೇ ಸಿಕ್ಕಿಬಿದ್ದ ರಸಿಕ ಮಹಾಶಯ- ಹಾಸನದ ಗೊರೂರಿನಲ್ಲಿ ಬಿತ್ತು ಸಖತ್ ಗೂಸಾ 4. ಪಿಒಕೆ ವಶಪಡಿಸಿಕೊಳ್ಳಲು ಪಾಕ್​ ತೆರಿಗೆ ಹುನ್ನಾರ- ಕೋಳಿ, ಕುರಿ, ಹಸುವಿಗೂ ಟ್ಯಾಕ್ಸ್​- ಪಾಕ್​ ವಿರುದ್ಧ ಗಿಲ್ಗಿಟ್​​​ನಲ್ಲಿ ಆಕ್ರೋಶ 5. ಸಿಂಹಳೀಯರ ದಾಳಿಗೆ ಭಾರತ ತತ್ತರ- ಮೊದಲ ಇನ್ನಿಂಗ್ಸ್​​​ನಲ್ಲಿ 172ಕ್ಕೆ ಆಲೌಟ್​- ಶ್ರೀಲಂಕಾ ರಕ್ಷಣಾತ್ಮಕ ಆಟ
Breaking News :

ಸ್ಟಾಲಿನ್ ಹೂವರ್ ಸಾಲಿಡ್ ಬ್ಯಾಟಿಂಗ್

Wednesday, 13.09.2017, 3:02 AM       No Comments

| ಅವಿನಾಶ್ ಜೈನಹಳ್ಳಿ

ಮೈಸೂರು: ಪ್ರತೀಕ್ ಜೈನ್ (29ಕ್ಕೆ 3) ಸೇರಿದಂತೆ ಬಳ್ಳಾರಿ ಟಸ್ಕರ್ಸ್ ತಂಡದ ಬೌಲರ್​ಗಳ ಮಾರಕ ದಾಳಿಯ ನಡುವೆಯೂ ಸ್ಟಾಲಿನ್ ಹೂವರ್ (62 ರನ್, 43 ಎಸೆತ, 4 ಬೌಂಡರಿ, 4 ಸಿಕ್ಸರ್) ಸಿಡಿಸಿದ ಭರ್ಜರಿ ಅರ್ಧಶತಕದ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ತಂಡ 6ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ20 ಟೂರ್ನಿಯಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಮಂಗಳವಾರ ನಡೆದ ಮೈಸೂರು ಚರಣದ ಕೊನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ ತಂಡ 19.4 ಓವರ್​ಗಳಲ್ಲಿ 154 ರನ್​ಗಳಿಗೆ ಸರ್ವಪತನ ಕಂಡಿತು.

ಸ್ಟಾಲಿನ್ ಅಬ್ಬರದ ಬ್ಯಾಟಿಂಗ್: ಆರಂಭಿಕರಾದ ಶರತ್ ಬಿ.ಆರ್.(17) ಹಾಗೂ ಸ್ಟಾಲಿನ್ ಹೂವರ್ ಜೋಡಿ ಮೊದಲ ವಿಕೆಟ್​ಗೆ 52 ರನ್ ಪೇರಿಸಿ ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ ಉತ್ತಮ ಆರಂಭ ನೀಡಿತು. ಈ ಜೋಡಿ 4 ಬೌಂಡರಿ 2 ಸಿಕ್ಸರ್ ಸಿಡಿಸಿ 7ನೇ ಓವರ್ ಮುಕ್ತಾಯಕ್ಕೆ ತಂಡದ ಮೊತ್ತವನ್ನು 50ರ ಗಡಿದಾಟಿಸಿತು. ಬಳಿಕ ಗೌತಮ್5) ಜತೆಗೂಡಿದ ಸ್ಟಾಲಿನ್ ಹೂವರ್ 2 ನೇ ವಿಕೆಟ್​ಗೆ 25 ರನ್ ಪೇರಿಸಿದರು. ಸ್ಟಾಲಿನ್ 9ನೇ ಓವರ್​ನ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ 50 ರನ್ ಪೂರೈಸಿದರು. ಗೌತಮ್ ನಿರ್ಗಮನದ ಬಳಿಕ ಮನೀಷ್ ಪಾಂಡೆ (24 ರನ್, 12 ಎಸೆತ, 3 ಬೌಂಡರಿ, 1 ಸಿಕ್ಸರ್) ಜತೆಗೂಡಿ 3ನೇ ವಿಕೆಟ್​ಗೆ 33 ರನ್ ಗಳಿಸಿದರು. ಸ್ಟಾಲಿನ್ ಅಬ್ಬರದ ಬ್ಯಾಟಿಂಗ್​ನಿಂದಾಗಿ ಬೆಳಗಾವಿ ಆರಂಭಿಕ 69 ಎಸೆತಗಳಲ್ಲೇ 100ರ ಗಡಿ ದಾಟಿತು.

ಬೆಳಗಾವಿ ಪ್ಯಾಂಥರ್ಸ್: 19.4 ಓವರ್​ಗಳಲ್ಲಿ 154 (ಶರತ್ 17, ಸ್ಟಾಲಿನ್ ಹೂವರ್ 62, ಗೌತಮ್ 5, ಮನೀಷ್ ಪಾಂಡೆ 24, ಸ್ಟುವರ್ಟ್ ಬಿನ್ನಿ 9, ರಕ್ಷಿತ್ 14, ಭರತ್ 8, ಅರವಿಂದ್ 6, ಅನಿಲ್ 32 ಕ್ಕೆ 2, ಅಮಿತ್ 19 ಕ್ಕೆ 2, ಭವೇಶ್ ಗುಲೇಚಾ 27 ಕ್ಕೆ 2, ಅಮಿತ್ ವರ್ಮ 19 ಕ್ಕೆ 2, ಪ್ರತೀಕ್ ಜೈನ್ 29 ಕ್ಕೆ 3).

ಅನಿಲ್ ಕಡಿವಾಣ

ಸ್ಟಾಲಿನ್ ಅಬ್ಬರದಿಂದಾಗಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದ ಬೆಳಗಾವಿ ತಂಡಕ್ಕೆ ಸ್ಪಿನ್ನರ್ ಅನಿಲ್ ಐ.ಜಿ (32ಕ್ಕೆ 2) ಕಡಿವಾಣ ಹಾಕಿದರು. 13 ಓವರ್​ನಲ್ಲೇ ಮನೀಷ್ ಪಾಂಡೆ ಮತ್ತು ಸ್ಟಾಲಿನ್​ರನ್ನು ಡಗ್ ಔಟ್​ಗೆ ಕಳುಹಿಸುವ ಮೂಲಕ ಪ್ಯಾಂಥರ್ಸ್ ವೇಗಕ್ಕೆ ಬ್ರೇಕ್ ಹಾಕಿದರು. ಪ್ರತೀಕ್ ಜೈನ್ 17ನೇ ಓವರ್​ನ ನಾಗಾ ಭರತ್(8) ಹಾಗೂ ಕಿಶೋರ್ ಕಾಮತ್(0) ವಿಕೆಟ್ ಪಡೆದು ಬೆಳಗಾವಿ ತಂಡದ ಕುಸಿತಕ್ಕೆ ಕಾರಣರಾದರು. ಒಂದು ಹಂತದಲ್ಲಿ 190ಕ್ಕೂ ಹೆಚ್ಚಿನ ರನ್ ಪೇರಿಸುವ ಅವಕಾಶ ಹೊಂದಿದ್ದ ಬೆಳಗಾವಿ ದಿಢೀರ್ ಕುಸಿತ ಕಂಡಿತು.


ಹುಬ್ಬಳ್ಳಿ ಚರಣಕ್ಕೆ ಮಳೆ ಭೀತಿ

ಹುಬ್ಬಳ್ಳಿ: ಕೆಪಿಎಲ್-6ರ ಕೊನೇ ಚರಣಕ್ಕೆ ಹುಬ್ಬಳ್ಳಿಯ ರಾಜನಗರದ ಕೆಎಸ್​ಸಿಎ ಮೈದಾನ ಸಜ್ಜಾಗಿದ್ದು, ಗುರುವಾರದಿಂದ ಪಂದ್ಯಗಳು ನಡೆಯಲಿವೆ. ಆದರೆ, ಟೂರ್ನಿಯ ನಿರ್ಣಾಯಕ ಹಂತದ ಪಂದ್ಯಗಳಿಗೆ ಮಳೆ ಭೀತಿ ಎದುರಾಗಿದೆ. ಕಳೆದ ಒಂದು ವಾರದಿಂದ ಹುಬ್ಬಳ್ಳಿ ಹಾಗೂ ಸುತ್ತಮುತ್ತ ಪ್ರತಿದಿನವೂ ಮಳೆಯಾಗುತ್ತಿದೆ. ಒಂದು ಕಡೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ರಾಜ್ಯ ಸರ್ಕಾರ ಮೋಡ ಬಿತ್ತನೆ ಕಾರ್ಯ ಆರಂಭಿಸಿದೆ. ನಾಳೆ, ನಾಡಿದ್ದು, ತುಂತುರು ಮಳೆಯಾಗಲಿದ್ದು, ಒಂದು ವಾರಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಕೆಪಿಎಲ್ ಪಂದ್ಯಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಪಂದ್ಯದ ವೇಳೆ ಮಳೆ ಬಂದರೆ ಮಾತ್ರ ಅಡ್ಡಿಯಾಗಲಿದೆ. ಒಂದು ವೇಳೆ ಮಳೆ ಬಂದು ನಿಂತರೆ ನೀರು ಹೊರ ತೆಗೆಯಲು 2 ಸೂಪರ್ ಸಾಪರ್​ಗಳು ಹಾಗೂ ಶೇ. 50ರಷ್ಟು ಮೈದಾನ ಮುಚ್ಚಲು ಕವರ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಸೆಮಿಫೈನಲ್ಸ್, ಫೈನಲ್ ಸೇರಿದಂತೆ ಒಟ್ಟು 9 ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆಯಲಿವೆ. 8 ಸಾವಿರ ಪ್ರೇಕ್ಷಕರು ಕುಳಿತು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.

ಗುರುವಾರದ ಪಂದ್ಯ

ಹುಬ್ಬಳ್ಳಿ ಟೈಗರ್ಸ್ ಮೈಸೂರು ವಾರಿಯರ್ಸ್

ಎಲ್ಲಿ: ರಾಜನಗರ ಕೆಎಸ್​ಸಿಎ ಮೈದಾನ, ಹುಬ್ಬಳ್ಳಿ

ಆರಂಭ: ಸಂಜೆ 7.00 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1

Leave a Reply

Your email address will not be published. Required fields are marked *

Back To Top