Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಸೌರಾಷ್ಟ್ರ, ರೈಲ್ವೇಸ್, ಕೇರಳ ತಂಡ ಶುಭಾರಂಭ

Monday, 09.10.2017, 3:01 AM       No Comments

ಬೆಂಗಳೂರು: ರೈಲ್ವೇಸ್, ಸೌರಾಷ್ಟ್ರ ಹಾಗೂ ಕೇರಳ ತಂಡಗಳು ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿ ಮೊದಲ ಸುತ್ತಿನ ಮೂರನೇ ದಿನದಾಟದಲ್ಲೇ ಗೆಲುವು ಕಂಡಿವೆ. ಎ ಗುಂಪಿನ ಪಂದ್ಯದಲ್ಲಿ ರೈಲ್ವೇಸ್ ತಂಡ ಉತ್ತರ ಪ್ರದೇಶ ವಿರುದ್ಧ 21 ರನ್ ಜಯ ಸಾಧಿಸಿದರೆ, ಬಿ ಗುಂಪಿನ ಪಂದ್ಯದಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಒಳಗೊಂಡ ಸೌರಾಷ್ಟ್ರ ತಂಡ ಹರಿಯಾಣ ವಿರುದ್ಧ ಇನಿಂಗ್ಸ್ ಹಾಗೂ 31 ರನ್ ಜಯ ದಾಖಲಿಸಿತು. ಇದೇ ಗುಂಪಿನಲ್ಲಿ ಕೇರಳ ತಂಡ ರಾಜಸ್ಥಾನ ವಿರುದ್ಧ 9 ವಿಕೆಟ್​ಗಳ ಗೆಲುವು ಕಂಡಿತು. ಉಳಿದಂತೆ, ಹೈದರಾಬಾದ್-ಮಹಾರಾಷ್ಟ್ರ ನಡುವಿನ ಮೂರನೇ ದಿನದಾಟವೂ ರದ್ದುಗೊಂಡಿತು.

ಎ ಗುಂಪು: ನವದೆಹಲಿ: ಅಸ್ಸಾಂ: 258 ಮತ್ತು 3 ವಿಕೆಟ್​ಗೆ 60, ದೆಹಲಿ: 435 (ಅಬು ನಚಿಮ್ 68ಕ್ಕೆ 7); ಲಖನೌ: ರೈಲ್ವೇಸ್: 182 ಮತ್ತು 161 (ಅಂಕಿತ್ ರಜಪೂತ್ 34ಕ್ಕೆ 4, ಜೀಶಾನ್ ಅನ್ಸಾರಿ 47ಕ್ಕೆ 3), ಉತ್ತರ ಪ್ರದೇಶ: 250 ಮತ್ತು 72 (ಅವಿನಾಶ್ ಯಾದವ್ 26ಕ್ಕೆ 4), ರೈಲ್ವೇಸ್ ತಂಡಕ್ಕೆ 21ರನ್ ಜಯ.

ಬಿ ಗುಂಪು: ರೋಹ್ಟಕ್: ಸೌರಾಷ್ಟ್ರ : 278, ಹರಿಯಾಣ: 107 ಮತ್ತು 140 (ಜೈದೇವ್ ಉನಾದ್ಕತ್ 55ಕ್ಕೆ 3), ಸೌರಾಷ್ಟ್ರ ತಂಡಕ್ಕೆ ಇನಿಂಗ್ಸ್ ಹಾಗೂ 31 ರನ್ ಜಯ. ತಿರುವನಂತಪುರಂ: ಜಾರ್ಖಂಡ್: 202 ಮತ್ತು 89 (ಜಲಜ್ ಸೆಕ್ಸೆನಾ 27ಕ್ಕೆ 5, ಕೆಎಸ್ ಮೊನಿಷ್ 42ಕ್ಕೆ 4). ಕೇರಳ: 259 ಮತ್ತು 1 ವಿಕೆಟ್​ಗೆ 34, ಕೇರಳಕ್ಕೆ 9 ವಿಕೆಟ್ ಜಯ; ಜೈಪುರ: ರಾಜಸ್ಥಾನ: 330, ಜಮ್ಮುಕಾಶ್ಮೀರ: 6 ವಿಕೆಟ್​ಗೆ 432 (ಅಹಮದ್ ಬ್ಯಾಂಡಿ 102, ಪರ್ವೆಜ್ ರಸೂಲ್ 97).

ಸಿ ಗುಂಪು: ಇಂದೋರ್: ಮಧ್ಯಪ್ರದೇಶ: 8 ವಿಕೆಟ್​ಗೆ 551 ಡಿಕ್ಲೇರ್, ಬರೋಡ: 302 (ಯೂಸುಫ್ ಪಠಾಣ್ 111, ಇರ್ಫಾನ್ ಪಠಾಣ್ 80), ಮತ್ತು 1 ವಿಕೆಟ್​ಗೆ 41. ಚೆನ್ನೈ: ತಮಿಳುನಾಡು: 176 ಮತ್ತು 2 ವಿಕೆಟ್​ಗೆ 112 (ಅಭಿನವ್ 54*, ಮುರಳಿ ವಿಜಯ್ 12), ಆಂಧ್ರ: 309 (ಬಿ.ಸುಮಂತ್ 109, ಅಶ್ವಿನ್ ಹೆಬ್ಬಾರ್ 64, ಆರ್. ಅಶ್ವಿನ್ 71ಕ್ಕೆ 4, ಕೆ.ವಿಘ್ನೇಶ್ 73ಕ್ಕೆ 3). ಕಟಕ್: ತ್ರಿಪುರ: ವಿಕೆಟ್ ನಷ್ಟವಿಲ್ಲದೆ 6, ಒಡಿಶಾ ವಿರುದ್ಧ (ಮಳೆಯಿಂದಾಗಿ 3ನೇ ದಿನದಾಟ ರದ್ದು).

ಡಿ ಗುಂಪು: ಪೊರ್ವೆರಿಮ್ ಛತ್ತೀಸ್​ಗಢ: 458, ಗೋವಾ: 4 ವಿಕೆಟ್​ಗೆ 223 (ಸುಮಾರಿಮಾನ್ ಅಮೊನ್ಕರ್ 79). ಧರ್ಮಶಾಲಾ: ಹಿಮಾಚಲ ಪ್ರದೇಶ: 8 ವಿಕೆಟ್​ಗೆ 729 ಡಿಕ್ಲೇರ್, ಪಂಜಾಬ್: 6 ವಿಕೆಟ್​ಗೆ 484 (ಅಭಿಷೇಕ್ ಗುಪ್ತಾ 129*, ಅಭಿಷೇಕ್ ಶರ್ಮ 81*, ಗುರ್ವಿಂದರ್ ಸಿಂಗ್ 118ಕ್ಕೆ 5). ನವದೆಹಲಿ: ಬಂಗಾಳ: 9 ವಿಕೆಟ್​ಗೆ 552 ಡಿಕ್ಲೇರ್, ವಿಕೆಟ್ ನಷ್ಟವಿಲ್ಲದೆ 77, ಸರ್ವೀಸಸ್: 359 (ನವನೀತ್ ಸಿಂಗ್ 121, ರವಿ ಚೌಹಾನ್ 53, ಆಮೀರ್ ಗಾನಿ 109ಕ್ಕೆ 5).

Leave a Reply

Your email address will not be published. Required fields are marked *

Back To Top